ತುಮಕೂರು: ರಾಜ್ಯ ಸರ್ಕಾರವು ಕೊಪ್ಪಳ, ಬಾದಾಮಿ ಮತ್ತು ಪುತ್ತೂರಿನಲ್ಲಿ ಕಾಂಗ್ರೆಸ್ ಭವನ ನಿರ್ಮಾಣಕ್ಕೆ ಸೂಕ್ತ ಜಾಗ ಮಂಜೂರು ಮಾಡುವ ನಿರ್ಧಾರ ಕೈಗೊಂಡಿದ್ದರೂ, ತುಮಕೂರಿನಲ್ಲಿ ಕಾಂಗ್ರೆಸ್ ಭವನ ಜಾಗ ವಿವಾದ ಗರಿಷ್ಠ ಹಂತ ತಲುಪಿದೆ.
ಮರುಳೂರು ದಿಣ್ಣೆಯಲ್ಲಿರುವ ಸರ್ವೆ ನಂ. 87/1 ಮತ್ತು 87/2ರಲ್ಲಿ 2 ಎಕರೆ ವಿವಾದಿತ ಜಮೀನು ಕಾಂಗ್ರೆಸ್ ಭವನ ಟ್ರಸ್ಟ್ಗೆ ಪರಭಾರೆ ಮಾಡಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಈ ಜಮೀನು ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವುದರಿಂದ ನಿಯಮ ಉಲ್ಲಂಘನೆ ನಡೆದಿದೆ ಎಂಬ ಆರೋಪ ಕೇಳಿಬಂದಿದೆ.
ಸಾಮಾಜಿಕ ಹೋರಾಟಗಾರರ ದೂರು:
ಸಾಮಾಜಿಕ ಹೋರಾಟಗಾರ ಬಸವರಾಜು, ಸಿಎಂ ಸಿದ್ದರಾಮಯ್ಯ, ಗೃಹ ಸಚಿವ ಜಿ. ಪರಮೇಶ್ವರ್, ಸಚಿವ ಭೈರತಿ ಸುರೇಶ್, ಸಬ್-ರಿಜಿಸ್ಟ್ರಾರ್ ನಂಜೇಶ್ ಹಾಗೂ ಪಾಲಿಕೆ ಕಮಿಷನರ್ ಅಶ್ವಿಜಾ ವಿರುದ್ಧ ಇಡಿಗೆ ದೂರು ಸಲ್ಲಿಸಿದ್ದಾರೆ.
ಮೌಲ್ಯದಲ್ಲಿ ಭಾರೀ ವ್ಯತ್ಯಾಸ:
ಸುಮಾರು 25 ಕೋಟಿ ರೂ. ಮೌಲ್ಯದ 2 ಎಕರೆ ಜಮೀನು ಕೇವಲ 17 ಲಕ್ಷ ರೂ.ಗೆ ಪರಭಾರೆ ಮಾಡಲಾಗಿದೆ. ನೋಂದಣಿ ಮೌಲ್ಯವನ್ನು ಕಡಿತಗೊಳಿಸುವ ಮೂಲಕ ಸರ್ಕಾರದ ಖಜಾನೆಗೆ ಲಕ್ಷಾಂತರ ರೂ. ನಷ್ಟ ಉಂಟಾಗಿದೆ ಎಂಬ ಗಂಭೀರ ಆರೋಪ ದಾಖಲಾಗಿದೆ.
ಇತರ ಜಿಲ್ಲೆಗಳಲ್ಲಿ ಮಂಜೂರಾದ ಜಾಗ:
* ಕೊಪ್ಪಳ: 12 ಎಕರೆ 28 ಗುಂಟೆ ವಿಸ್ತೀರ್ಣದ ಬಡಾವಣೆಯಲ್ಲಿ 3749 ಚ.ಮೀ. ನಾಗರಿಕ ಸೌಲಭ್ಯ ನಿವೇಶನ.
* ಬಾದಾಮಿ: 613 ಚ.ಮೀ. ವಿಸ್ತೀರ್ಣದ ನಾಗರಿಕ ಸೌಲಭ್ಯ ನಿವೇಶನ.
* ಪುತ್ತೂರು (ದ.ಕನ್ನಡ): ಕಸಬಾ ಗ್ರಾಮದಲ್ಲಿ 8 ಸೆಂಟ್ ಜಾಗ.
For More Updates Join our WhatsApp Group :