ಬಾಗಲಕೋಟೆ: ಗಣೇಶ ವಿಸರ್ಜನೆ ಶೋಭಾಯಾತ್ರೆ ವೇಳೆ ಬಾಗಲಕೋಟೆ ತಾಲ್ಲೂಕಿನ ಹೊಸಮುರನಾಳ ಗ್ರಾಮದಲ್ಲಿ ನಡೆದ ಘಟನೆಯೊಂದು ಗಂಭೀರ ತಿರುವು ಪಡೆದುಕೊಂಡಿದೆ. ಹಸಿರು ಧ್ವಜ ಹಿಡಿದು ಮೆರವಣಿಗೆಯಲ್ಲಿ ಪಾಲ್ಗೊಂಡ ಮುಸ್ಲಿಂ ಯುವಕನ ವರ್ತನೆ ಗಲಾಟೆಗೆ ಕಾರಣವಾಗಿದ್ದು, ಈ ವೇಳೆ ಹಿಂದೂ ಯುವಕನಿಗೆ ಚಾಕು ಇರಿತವಾಗಿದೆ.
ಗಣೇಶ ವಿಸರ್ಜನೆ ಮೆರವಣಿಗೆ:
ವೀರ ಸಾವರ್ಕರ್ ಗಣೇಶ ಪ್ರತಿಷ್ಠಾಪನೆ ಮಾಡಿದ ಗ್ರಾಮದಲ್ಲಿ 11ನೇ ದಿನ ಭವ್ಯ ಮೆರವಣಿಗೆ ನಡೆಯುತ್ತಿತ್ತು. ಯುವಕರು ಕೇಸರಿ ಧ್ವಜ ಹಿಡಿದು ನೃತ್ಯ ಮಾಡುತ್ತಿದ್ದರು. ಇದೇ ವೇಳೆ 21 ವರ್ಷದ ಆಸಿಫ್ ಬೆಳಗಾಂವಕರ್ ಹಸಿರು ಧ್ವಜದೊಂದಿಗೆ ಮೆರವಣಿಗೆಯಲ್ಲಿ ಸೇರಲು ಬಂದಿದ್ದಾನೆ.
ವಾಗ್ವಾದದಿಂದ ಚಾಕು ಇರಿತ:
ಹಸಿರು ಧ್ವಜಕ್ಕೆ ಹಿಂದೂ ಯುವಕರು ಆಕ್ಷೇಪ ವ್ಯಕ್ತಪಡಿಸಿದಾಗ ವಾಗ್ವಾದ ಉಂಟಾಗಿ, ಆಸಿಫ್ 22 ವರ್ಷದ ನವೀನ್ ಕೂಡ್ಲೆಪ್ಪನವರ ಮೇಲೆ ಚಾಕು ಪ್ರಯೋಗಿಸಿದ್ದಾನೆ. ಬೆನ್ನು ಮತ್ತು ಕೈಗೆ ಗಂಭೀರ ಗಾಯಗೊಂಡ ನವೀನ್ ಅವರನ್ನು ಬಾಗಲಕೋಟೆ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಪೊಲೀಸರ ತನಿಖೆ:
ಘಟನೆ ಕಲಾದಗಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಆಸಿಫ್ ಉದ್ದೇಶಪೂರ್ವಕವಾಗಿ ಗಲಾಟೆ ಮಾಡಲು ಹಸಿರು ಧ್ವಜ ಮತ್ತು ಚಾಕು ತಂದಿದ್ದಾನೆ ಎಂಬ ಆರೋಪ ಸ್ಥಳೀಯರಿಂದ ಕೇಳಿಬಂದಿದೆ. “ಗಣೇಶ ಮೆರವಣಿಗೆಯಲ್ಲಿ ಹಸಿರು ಧ್ವಜದ ಅಗತ್ಯವೇನು? ಚಾಕು ಏಕೆ?” ಎಂಬ ಪ್ರಶ್ನೆಗಳು ಇದೀಗ ಚರ್ಚೆಯಲ್ಲಿವೆ.
ಮುಂದಿನ ಕ್ರಮ:
ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು, ಕೂಲಂಕುಷ ತನಿಖೆ ನಡೆಸುತ್ತಿದ್ದಾರೆ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
For More Updates Join our WhatsApp Group :