ಮೈಸೂರು: ನಾಡಹಬ್ಬ ಮೈಸೂರು ದಸರಾ–2025 ಸಂಭ್ರಮಕ್ಕೆ ಕೌಂಟ್‌ಡೌನ್ ಆರಂಭವಾಗಿದೆ. ಜಿಲ್ಲಾಡಳಿತವು ದಸರಾ ಗೋಲ್ಡ್ ಕಾರ್ಡ್ ಮತ್ತು ಟಿಕೆಟ್‌ಗಳನ್ನು ಅಧಿಕೃತ ಜಾಲತಾಣದಲ್ಲಿ ಬಿಡುಗಡೆಗೊಳಿಸಿದೆ. ಸೆಪ್ಟೆಂಬರ್ 22ರಿಂದ ಅಕ್ಟೋಬರ್ 2ರವರೆಗೆ ನಡೆಯಲಿರುವ ದಸರಾ ಉತ್ಸವವನ್ನು ಕಣ್ತುಂಬಿಕೊಳ್ಳಲು ಈಗಲೇ ಬುಕ್ಕಿಂಗ್ ಮಾಡಿಕೊಳ್ಳಬಹುದು.
ಗೋಲ್ಡ್ ಕಾರ್ಡ್ – ₹6500: ದಸರಾ ಗೋಲ್ಡ್ ಕಾರ್ಡ್ ದರವನ್ನು ₹6500 ಎಂದು ನಿಗದಿ ಮಾಡಲಾಗಿದೆ. ಇದನ್ನು ಖರೀದಿಸಿದವರು ಜಂಬೂಸವಾರಿ, ಪಂಜಿನ ಕವಾಯತು, ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ ಮೈಸೂರು ಅರಮನೆ, ಚಾಮುಂಡಿ ಬೆಟ್ಟ (ವಿಶೇಷ ದರ್ಶನ), ಚಾಮರಾಜೇಂದ್ರ ಮೃಗಾಲಯಕ್ಕೆ ಉಚಿತ ಪ್ರವೇಶ ಪಡೆಯುತ್ತಾರೆ. ಡ್ರೋನ್ ಶೋ ಸೇರಿದಂತೆ ಪ್ರಮುಖ ಆಕರ್ಷಣೆಗಳಿಗೆ ಪ್ರತ್ಯೇಕ ಆಸನ ಸೌಲಭ್ಯ ಕಲ್ಪಿಸಲಾಗಿದೆ.
ಟಿಕೆಟ್ ದರಗಳು:
* ಜಂಬೂಸವಾರಿ ಟಿಕೆಟ್ – ₹3500
* ಪಂಜಿನ ಕವಾಯತು ಟಿಕೆಟ್ – ₹1500
🌐ಆನ್‌ಲೈನ್ ಖರೀದಿ ಹೇಗೆ?”
1. ಮೈಸೂರು ದಸರಾ ಅಧಿಕೃತ ಜಾಲತಾಣ [https://mysoredasara.gov.in/](https://mysoredasara.gov.in/) ಗೆ ಭೇಟಿ ನೀಡಿ.
2. ಹೋಮ್‌ಪೇಜ್‌ನಲ್ಲಿ “Tickets & Live” ಆಯ್ಕೆಯನ್ನು ಕ್ಲಿಕ್ ಮಾಡಿ.
3. “Ticket Booking” ಮೇಲೆ ಕ್ಲಿಕ್ ಮಾಡಿದರೆ ಬುಕ್ಕಿಂಗ್ ಪೇಜ್ ತೆರೆದುಕೊಳ್ಳುತ್ತದೆ.
4. ಗೋಲ್ಡ್ ಕಾರ್ಡ್, ಜಂಬೂಸವಾರಿ ಅಥವಾ ಪಂಜಿನ ಕವಾಯತು ಟಿಕೆಟ್ ಆಯ್ಕೆ ಮಾಡಿ.
5. ಬೇಕಾದ ಟಿಕೆಟ್ ಸಂಖ್ಯೆಯನ್ನು ನಮೂದಿಸಿ, “Buy Tickets” ಕ್ಲಿಕ್ ಮಾಡಿ.
6. ನಿಮ್ಮ ಮಾಹಿತಿ ಭರ್ತಿ ಮಾಡಿ, ಆನ್‌ಲೈನ್ ಪಾವತಿ ಮಾಡಿ ಟಿಕೆಟ್ ಪಡೆಯಿರಿ.
ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತರೆಡ್ಡಿ ಅವರು ಶನಿವಾರ ಮಧ್ಯಾಹ್ನ 3 ಗಂಟೆಯಿಂದಲೇ ಟಿಕೆಟ್‌ಗಳು ಆನ್‌ಲೈನ್ ಖರೀದಿಗೆ ಲಭ್ಯವಿವೆ ಎಂದು ತಿಳಿಸಿದ್ದಾರೆ.
For More Updates Join our WhatsApp Group :