ಬೆಂಗಳೂರು: ಕೊನೆಗೂ ಕರ್ನಾಟಕ ವಿಧಾನ ಪರಿಷತ್ತಿನ ನಾಲ್ಕು ನಾಮನಿರ್ದೇಶಿತ ಸ್ಥಾನಗಳಿಗೆ ರಾಜ್ಯಪಾಲರು ಹಸಿರು ನಿಶಾನೆ ತೋರಿದ್ದಾರೆ.
ಹೊಸ ಪರಿಷತ್ ಸದಸ್ಯರು:
* ರಮೇಶ್ ಬಾಬು (ಕೆಪಿಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷ)
* ಡಾ. ಆರತಿ ಕೃಷ್ಣ (ಶೃಂಗೇರಿ, ಚಿಕ್ಕಮಗಳೂರು)
*ಎಫ್.ಹೆಚ್. ಜಕ್ಕಪ್ಪನವರ್
* ಶಿವಕುಮಾರ್ ಕೆ (ಮೈಸೂರು ಮೂಲದ ಪತ್ರಕರ್ತ)
ಮೂವರು ಸದಸ್ಯರು 6 ವರ್ಷಗಳ ಅವಧಿಗೆ ಸೇವೆ ಸಲ್ಲಿಸಲಿದ್ದು, ರಮೇಶ್ ಬಾಬು ಅವರ ಅಧಿಕಾರಾವಧಿ 2026ರ ಜುಲೈ 21ರವರೆಗೆ ಮಾತ್ರ.
ಈ ಪಟ್ಟಿಗೆ ಈಗಾಗಲೇ **ಕಾಂಗ್ರೆಸ್ ಹೈಕಮ್ಯಾಂಡ್ ಅನುಮೋದನೆ ನೀಡಿತ್ತು. ಮೊದಲಿಗೆ ಡಿ.ಜಿ. ಸಾಗರ್ ಮತ್ತು ದಿನೇಶ್ ಅಮೀನ್ ಮಟ್ಟು ಹೆಸರುಗಳಿದ್ದರೂ, ಸ್ಥಳೀಯ ಆಕ್ಷೇಪಣೆ ಮತ್ತು ದೂರಿನ ಹಿನ್ನೆಲೆಯಲ್ಲಿ ಅವರನ್ನು ಕೈಬಿಟ್ಟು, ಅಂತಿಮವಾಗಿ ಜಕ್ಕಪ್ಪನವರ್ ಮತ್ತು ಪತ್ರಕರ್ತ ಶಿವಕುಮಾರ್ ಸೇರಿಸಲಾಯಿತು. ರಾಜ್ಯಪಾಲರ ಮುದ್ರೆ ಬಿದ್ದ ಹಿನ್ನೆಲೆಯಲ್ಲಿ, ನಾಮನಿರ್ದೇಶನದ ಸಸ್ಪೆನ್ಸ್‌ಗೆ ತೆರೆ ಬಿದ್ದಿದೆ.
For More Updates Join our WhatsApp Group :