ಮೈಸೂರು: ವಿಶ್ವಪ್ರಸಿದ್ಧ ಮೈಸೂರು ದಸರಾಗೆ ವಿಜೃಂಭಣೆಯಿಂದ ಚಾಲನೆ ನೀಡಿದ ಮರುದಿನವೇ, ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇವಾಲಯದ ಹಿರಿಯ ಅರ್ಚಕರಾದ ರಾಜು ಅವರು ಹೃದಯಾಘಾತದಿಂದ ನಿಧನರಾದರು. ಈ ದುರ್ಘಟನೆ ದೇವಾಲಯದ ಧಾರ್ಮಿಕ ಕಾರ್ಯಕ್ರಮಗಳ ಮೇಲೆ ತಾತ್ಕಾಲಿಕ ಪರಿಣಾಮ ಬೀರಿದೆ.
ಗರ್ಭಗುಡಿ ತಾತ್ಕಾಲಿಕವಾಗಿ ಮುಚ್ಚು, ಉತ್ಸವಮೂರ್ತಿಗೆ ಮಾತ್ರ ದರ್ಶನ
ಅರ್ಚಕರ ನಿಧನದ ಹಿನ್ನೆಲೆಯಲ್ಲಿ ದೇವಾಲಯದ ಗರ್ಭಗುಡಿ ಬಾಗಿಲು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಆದರೆ ಭಕ್ತರ ಅನುಕೂಲಕ್ಕಾಗಿ ಉತ್ಸವಮೂರ್ತಿಗೆ ರಾತ್ರಿ ವರೆಗೂ ದರ್ಶನ ಅವಕಾಶ ಕಲ್ಪಿಸಲಾಗಿದೆ.
ನವರಾತ್ರಿ ಪೂಜೆಗೆ ಅಡ್ಡಿಯಿಲ್ಲ
ಚಾಮುಂಡಿಬೆಟ್ಟದಲ್ಲಿ ಸೂತಕದ ಛಾಯೆ ಆವರಿಸಿದರೂ, ದಸರಾ ಉತ್ಸವಕ್ಕೆ ಯಾವುದೇ ತೊಂದರೆಯಾಗದು ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ. ಕಡ್ಡಾಯ ವಿಧಿವಿಧಾನಗಳ ಬಳಿಕ ಗರ್ಭಗುಡಿ ಪುನಃ ತೆರೆಯಲಿದೆ. ನಿತ್ಯಪೂಜೆಗಳು ಹಾಗೂ ನವರಾತ್ರಿಯ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲಿವೆ.
For More Updates Join our WhatsApp Group :




