ಬೆಂಗಳೂರು: ಇನ್ನು ಮುಂದೆ ಬೆಂಗಳೂರು ಸಂಚಾರ ನಿಯಮ ಉಲ್ಲಂಘಿಸಿ, ದಂಡ ಪಾವತಿಸದೆ ಸುಮ್ಮನೆ ಓಡೋದು ಸಾಧ್ಯವಿಲ್ಲ! ತಾಂತ್ರಿಕ ಪ್ರಗತಿಯಲ್ಲಿ ಮತ್ತೊಂದು ಹೆಜ್ಜೆ ಇಟ್ಟಿರುವ ಬೆಂಗಳೂರು ಸಂಚಾರ ಪೊಲೀಸರು, ಇದೀಗ ಎಐ ಆಧಾರಿತ ಡಿಜಿಟಲ್ ಬಿಲ್ಬೋರ್ಡ್ಗಳು ಮೂಲಕ ನಿಯಮ ಉಲ್ಲಂಘನೆಯ ತಕ್ಷಣದ ಮಾಹಿತಿ ನೇರವಾಗಿ ಸಾರ್ವಜನಿಕರ ಮುಂದೆ ಪ್ರದರ್ಶಿಸಲು ಮುಂದಾಗಿದ್ದಾರೆ.
ಎಐ ಬಿಲ್ಬೋರ್ಡ್ – ಬಾಕಿ ದಂಡವನ್ನು ನೆನಪಿಸೋದು ಈಗ ರಸ್ತೆ ಮೇಲೆ!
ಟ್ರಿನಿಟಿ ಸರ್ಕಲ್ ಸೇರಿದಂತೆ ನಗರದಲ್ಲಿನ ಪ್ರಮುಖ ಸಂಚಾರ ಮಾರ್ಗಗಳಲ್ಲಿ ಅಳವಡಿಸಲಾದ ಈ ಬಿಲ್ಬೋರ್ಡ್ಗಳು, ನೂರು ಮೀಟರ್ ದೂರದಿಂದಲೇ ವಾಹನದ ನಂಬರ್ ಸ್ಕ್ಯಾನ್ ಮಾಡಿ, ನಿಮ್ಮ ವಾಹನದ ಇತಿಹಾಸ – ಬಾಕಿ ಇ-ಚಲನ್, ಪಿಯುಸಿ ಪ್ರಮಾಣಪತ್ರ, ಅಥವಾ ಇತರ ಉಲ್ಲಂಘನೆಗಳ ಬಗ್ಗೆ ರಿಯಲ್ ಟೈಮ್ ಡೇಟಾ ಪರದೆಯ ಮೇಲೆ ತೋರಿಸುತ್ತವೆ.
ಟೆಕ್ನಾಲಜಿಯ ಜಗತ್ತಿಗೆ ಮತ್ತೊಂದು ಕ್ರಾಂತಿಕಾರಿ ಹೆಜ್ಜೆ!
ಈ ಯಂತ್ರದ ತಂತ್ರಜ್ಞಾನವನ್ನು ಬೆಂಗಳೂರು ಸಂಚಾರ ಪೊಲೀಸರು ಕಾರ್ಸ್24 ಸಂಸ್ಥೆಯ ಸಹಕಾರದೊಂದಿಗೆ ಜಾರಿಗೆ ತಂದಿದ್ದಾರೆ. ಇದರ ಮುಖ್ಯ ಉದ್ದೇಶ:
- ವಾಹನ ಸವಾರರಲ್ಲಿ ಜವಾಬ್ದಾರಿ ಮತ್ತು ಜಾಗೃತಿ ಮೂಡಿಸುವುದು,
- ದಂಡ ಪಾವತಿಯ ಪ್ರಕ್ರಿಯೆಯನ್ನು ತ್ವರಿತಗೊಳಿಸುವುದು,
- ಸಾರ್ವಜನಿಕವಾಗಿ ನಿಯಮ ಉಲ್ಲಂಘನೆಗಳ ಕುರಿತು ಸೂಕ್ತವಾಗಿ ಎಚ್ಚರಿಸುವುದು.
“ಈ ಪ್ರಯತ್ನ ಜನರಲ್ಲಿ ಜವಾಬ್ದಾರಿ ಮೂಡಿಸುತ್ತದೆ” – ಕಾರ್ಸ್24
ಈ ಯೋಜನೆಯ ಕುರಿತು ಮಾತನಾಡಿದ ಕಾರ್ಸ್24 ಸಹ–ಸಂಸ್ಥಾಪಕ ಗಜೇಂದ್ರ ಜಂಗಿಡ್, “ಇದು ಕೇವಲ ಬಾಕಿ ದಂಡ ಪಾವತಿ ನೆನಪಿಗೆ ಅಲ್ಲ; ನಿಯಮ ಪಾಲನೆಯ ಮಹತ್ವವನ್ನೂ ಹೇಳುತ್ತಿದೆ. ನಾವು ನಗುತಿರುವ ಈ ಚಿಕ್ಕ ಪ್ರಯತ್ನ, ನಗರದ ಜೀವನಾಡಿ ರಸ್ತೆಗಳ ಸುಧಾರಣೆಗೆ ದಾರಿ ಮಾಡಿಕೊಡುತ್ತದೆ,” ಎಂದು ಹೇಳಿದ್ದಾರೆ.
For More Updates Join our WhatsApp Group :
