ಬೆಂಗಳೂರು: ನೀರಿನ ಕೊರತೆಯಿಂದ ತತ್ತರಿಸುತ್ತಿರುವ ಬೆಂಗಳೂರಿನ ಹಲವು ಪ್ರದೇಶಗಳ ಜನತೆ ಈಗ ಮುಚ್ಚಿದ ಕಿಯೋಸ್ಕ್ಗಳ ಮುಂದೆ ಕಾಯಿನ್ ಹಾಕಿ ಕಾಯಬೇಕಾಗಿಲ್ಲ! BWSSB (ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ) ಈಗ RO ನೀರಿನ ಘಟಕಗಳಿಗೆ ಡಿಜಿಟಲ್ ರೂಪ ನೀಡಿದೆ – ಮೊಬೈಲ್ ಸ್ಕ್ಯಾನ್ ಮಾಡಿದ್ರೆ ಸಾಕು, ನೀರು ನಿಮ್ಮ ಕ್ಯಾನಿಗೆ!
ಕ್ಯಾಸ್ಲೆಸ್ ನೀರು: ಕ್ಯೂಆರ್ ಸ್ಕ್ಯಾನ್ ಮಾಡಿ 5 ರೂ. ಪಾವತಿ
ಇಂದಿನಿಂದಲೇ ನೀರು ಪಡೆಯಲು ನಾಣ್ಯವಿಲ್ಲದೆ ನಿರಾಯಾಸ. ಫೋನ್ ಪೇ, ಗೂಗಲ್ ಪೇ ಮುಂತಾದ ಯುಪಿಐ ಅಪ್ಲಿಕೇಶನ್ಗಳ ಮೂಲಕ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ 20 ಲೀಟರ್ ನೀರಿಗೆ ₹5 ಪಾವತಿ ಮಾಡಬಹುದು. ಬಡಾವಣೆಯಲ್ಲಿರುವ BWSSB ನವೀಕರಿಸಿದ RO ಘಟಕಗಳು ಈ ಸೇವೆ ನೀಡಲಿವೆ.
1,184 ಘಟಕಗಳ ರೀಬ್ರಾಂಡಿಂಗ್: “ಡಿಜಿಟಲ್ ಕಿಯೋಸ್ಕ್”
ಇದುವರೆಗೆ ನಿರ್ಲಕ್ಷ್ಯದಲ್ಲಿದ್ದ ಹಾಗೂ ಕಡಿಮೆ ಗುಣಮಟ್ಟದ ನೀರು ಪೂರೈಕೆ ಮಾಡುತ್ತಿದ್ದ ಘಟಕಗಳನ್ನು BWSSB ತನ್ನ ನಿಯಂತ್ರಣಕ್ಕೆ ತೆಗೆದುಕೊಂಡು, ಇವುಗಳನ್ನು “ಡಿಜಿಟಲ್ ಕಿಯೋಸ್ಕ್“ ಎಂದು ಮರುನಾಮಕರಣ ಮಾಡಿದೆ.
ಸ್ಮಾರ್ಟ್ಫೋನ್ ಇಲ್ಲವೇ? ಕಾರ್ಡ್ ಸೌಲಭ್ಯ ಸಿದ್ಧ
ಸ್ಮಾರ್ಟ್ಫೋನ್ ಇಲ್ಲದವರಿಗಾದರೂ ಭಯವಿಲ್ಲ. ನೀವು ಬಳಸಿ ಬೇಕಾದಷ್ಟು ನೀರಿಗೆ ಪಾವತಿ ಮಾಡಿ BWSSB ಸೇವಾ ಕೇಂದ್ರಗಳಿಂದ ಪ್ರೀಪೇಡ್ ಕಾರ್ಡ್ ಪಡೆದು ಅದನ್ನು ಸ್ಕ್ಯಾನ್ ಮಾಡಿ ನೀರನ್ನು ಪಡೆಯಬಹುದಾಗಿದೆ.
ಗುತ್ತಿಗೆದಾರರಿಗೆ ಆದಾಯದ 60% ಶೇರ್!
ನಿರ್ವಹಣೆಗಾಗಿ BWSSB ಗುತ್ತಿಗೆದಾರರನ್ನು ನೇಮಿಸಿದೆ. ಅವರಿಗೂ ಆದಾಯದ 60% ಪಾಲು ಸಿಗಲಿದೆ. ಹಿಂದೆ BBMP ನಿರ್ವಹಿಸುತ್ತಿದ್ದಾಗ ಹಣಕಾಸು ಲೆಕ್ಕಾಚಾರಗಳಿಲ್ಲ, ಫಿಲ್ಟರ್ಗಳ ಬದಲಾವಣೆ ಇಲ್ಲದ ನಿರ್ಲಕ್ಷ್ಯ ಇತ್ತು. ಇದೀಗ ಈ ಎಲ್ಲಾ ದೋಷಗಳಿಗೂ ಮುಕ್ತಿ.
ನೀರಿನ ಗುಣಮಟ್ಟದ ಮೇಲೂ ಕಣ್ಗಾವಲು
ಫಿಲ್ಟರ್ಗಳ ಸಮಯಕ್ಕೆ ಬದಲಾವಣೆ, ಗುಣಮಟ್ಟದ ನಿಯಂತ್ರಣ, ಸೇವಾ ನಿರ್ವಹಣೆಯಲ್ಲಿನ ಪಾರದರ್ಶಕತೆ BWSSB ನ ಹೊಸ ಕ್ರಮದ ಭಾಗ. ಇದರಿಂದ, ಜನತೆ ಶುದ್ಧ ನೀರನ್ನು ನಂಬಿಕೆಯಿಂದ ಪಡೆಯಬಹುದಾಗಿದೆ.“ಇದು ಬೆಂಗಳೂರು ನೀರಿನ ಸೇವೆಗಳಲ್ಲಿ ನವ ಯುಗದ ಪ್ರಾರಂಭ!” ಎಂದು BWSSB ಅಧಿಕಾರಿಗಳು ತಿಳಿಸಿದ್ದಾರೆ.
For More Updates Join our WhatsApp Group :
