ಉಡುಪಿ: ಧರ್ಮಸ್ಥಳದ ಮೇಲೆ ಇತ್ತೀಚೆಗೆ ನಡೆದಿರುವ ಆರೋಪಗಳು ಸುತ್ತಲೂ ಮೂಡುತ್ತಿರುವ ವಿವಾದದ ನಡುವೆಯೇ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್ ಅವರು ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ.
ಅವರು ಈ ಬೆಳವಣಿಗೆಗಳನ್ನು “ವೈಚಾರಿಕ ಆಕ್ರಮಣ”ವೆಂದು ಗುರುತಿಸಿದ್ದಾರೆ. ಹಿಂದೂ ಧಾರ್ಮಿಕ ಕೇಂದ್ರಗಳ ಮೇಲೆ ನಿರಂತರ ದಾಳಿಗಳು ನಡೆಯುತ್ತಿವೆ. ಈ ಪೈಕಿ ಧರ್ಮಸ್ಥಳದ ಘಟನೆ ಕೂಡ ಒಂದು ಎಂದು ಉಡುಪಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ತಿಳಿಸಿದ್ದಾರೆ.
“ಇದು ಆರಂಭ ಮಾತ್ರ – ಮುಂದೇನು?” ಎಂಬ ಆತಂಕ
“ಇದು ಕೇವಲ ಧರ್ಮಸ್ಥಳವಷ್ಟೇ ಅಲ್ಲ. ಎರಡು-ಮೂರು ವರ್ಷಗಳ ಹಿಂದೆ ಉಡುಪಿ ಕೃಷ್ಣ ಮಠದ ಮೇಲೂ ಇದೇ ರೀತಿ ಆಕ್ರಮಣ ನಡೆದಿತ್ತು. ಮುಂದೆ ಮೂಡುಬಿದ್ರೆ ಹಾಗೂ ಇತರ ದೇವಾಲಯಗಳ ಮೇಲೂ ಇಂತಹ ಶಡ್ಯಂತ್ರಗಳು ನಡೆಯಬಹುದೆಂಬ ಆತಂಕವಿದೆ,” ಎಂದು ಬಿ ಎಲ್ ಸಂತೋಷ್ ತಿಳಿಸಿದ್ದಾರೆ.
ಅವರು ಈ ಸಂಬಂಧ ತೀವ್ರವಾಗಿ ಹೇಳಿದ್ದು:
“ಇವು ವೈಚಾರಿಕ ವಾಮಪಂಥೀಯ ಮತ್ತು ರಾಜಕೀಯ ಶಕ್ತಿಗಳ ಸಂಘಟಿತ ಪ್ರಯತ್ನ. ಈ ಶಕ್ತಿಗಳು ಶಬರಿಮಲೆ, ಈಶ ಆಶ್ರಮ, ಶನಿ ಶಿಂಗ್ನಾಪುರಗಳಲ್ಲಿ ಸಹ ಇಂತಹ ಅಪಪ್ರಚಾರ ನಡೆಸಿದ್ದುದನ್ನು ಮರೆತಿದ್ದೇವೆ ಏನು?”
“ಹುಲಿಗೆ ರಕ್ತದ ರುಚಿ ಸಿಕ್ಕಿದಂತೆ…”
ಸಂತೋಷ್ ಈ ಎಲ್ಲ ಘಟನೆಗಳನ್ನು ಒಟ್ಟುಗೂಡಿಸಿ ಹೇಳಿದ್ದು:
“ಇದು ಹುಲಿಗೆ ರಕ್ತದ ರುಚಿ ಸಿಕ್ಕಿದಂತೆ. ಇಂತಹ ಶಕ್ತಿಗಳು ಹಿಂದು ಧಾರ್ಮಿಕ ಕೇಂದ್ರಗಳನ್ನು ಕೀಳಾಗಿ ತೋರುವ, ಅಪಮಾನ ಮಾಡುವ ಕೃತ್ಯಗಳಲ್ಲಿ ತೊಡಗಿವೆ. ಇದು ಸಹಜ ದಾರಿ ಅಲ್ಲ, ಇದು ಧಾರ್ಮಿಕ ಸ್ಥಾಪನೆಗಳ ಮೇಲಿನ ಸಂಸ್ಕೃತಿ ಯುದ್ಧ.”
“ಇದು ಕೇವಲ ರಾಜಕೀಯವಲ್ಲ, ಧರ್ಮದ ಪ್ರಶ್ನೆ”
“ಇಂತಹ ಕೃತ್ಯಗಳನ್ನು ಮಾಡುವವರಿಗೆ ಕಠಿಣ ಶಿಕ್ಷೆಯಾಗಬೇಕು. ಜೊತೆಗೆ ಸಮಾಜದಲ್ಲಿ ಹಿಂದೂ ಧಾರ್ಮಿಕ ಕೇಂದ್ರಗಳ ಬಗ್ಗೆ ನಕಲಿ ಅಪಪ್ರಚಾರ ನಡೆಸುವವರ ವಿರುದ್ಧವೂ ಕಾನೂನು ಕ್ರಮ ಅಗತ್ಯ. ಈ ದಾಳಿಗಳು ನಮ್ಮ ಧಾರ್ಮಿಕ ಸ್ವಾತಂತ್ರ್ಯವನ್ನೇ ಪ್ರಶ್ನಿಸುತ್ತಿವೆ,” ಎಂದು ಸಂತೋಷ್ ಅಭಿಪ್ರಾಯಪಟ್ಟಿದ್ದಾರೆ.
For More Updates Join our WhatsApp Group :

