ಗದಗ – ಶಿರಹಟ್ಟಿ ಪಟ್ಟಣ ಪಂಚಾಯಿತಿ ಕಚೇರಿ ಭದ್ರತೆಯ ಭೀತಿಯಲ್ಲಿ ದಿನ ಕಳೆದುತ್ತಿದೆ. 120 ವರ್ಷಗಳ ಹಳೆಯ ಕಟ್ಟಡದಲ್ಲಿ ಇಂದು ಕೂಡ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕೆಲಸ ನಿರ್ವಹಿಸುತ್ತಿದ್ದು, ಮಳೆ ಬಂದರೆ ಈ ಕಚೇರಿ ಚಿಕ್ಕ ಕೆರೆಯಂತೆ ಬದಲಾಗುತ್ತಿದೆ.
ಮಳೆಗಾಲದಲ್ಲಿ ಈ ಕಚೇರಿ ಸಂಪೂರ್ಣವಾಗಿ ನೀರಿನಿಂದ ನಲುಗಿ ಹೋಗುತ್ತಿದ್ದು, ಕಚೇರಿಯ ಪರಿಸ್ಥಿತಿಯು ಅಧಿಕಾರಿಗಳ ಜೀವಕ್ಕೂ ಅಪಾಯ ತಂದಿಟ್ಟಂತಾಗಿದೆ. ಕಟ್ಟಡದ ಸ್ಥಿತಿ ನೋಡಿದರೆ, “ಇಲ್ಲಿ ಹೇಳುವವರಿಲ್ಲ, ಕೇಳುವವರಿಲ್ಲ” ಎಂಬ ಸ್ಥಿತಿಯೇ ನಿರ್ಮಾಣವಾಗಿದೆ.
ದಿನೇ ದಿನ ದುಸ್ಥಿತಿಯತ್ತ ಕಟ್ಟಡ
- ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಕೊಠಡಿಗಳು ಸಂಪೂರ್ಣ ನಾಶವಾಗುವ ಹಂತದಲ್ಲಿವೆ
- ಮೇಲ್ಛಾವಣಿಯಿಂದ ನೀರು ಸೋರುತ್ತಿದ್ದು, ಕೊಠಡಿಗಳು ಮಳೆಯಲ್ಲೇ ಮುಳುಗುತ್ತಿವೆ
- ಕಟ್ಟಿಗೆ ಭಾಗಗಳು ಕೊಳೆತು, ಶೀಘ್ರವೇ ಕುಸಿಯುವ ಆತಂಕ
- ಕಂದಾಯ ವಿಭಾಗ ಸೇರಿದಂತೆ ಹಲವಾರು ಭಾಗಗಳಲ್ಲಿ ನೀರು ನಿಂತ ಸ್ಥಿತಿ
- ಮಳೆಯಿಂದ ದಾಖಲೆ ಹಾಗೂ ಕಂಪ್ಯೂಟರ್ ರಕ್ಷಣೆಗಾಗಿ, ಪ್ಲಾಸ್ಟಿಕ್ ಹಾಳೆಗಳ ಸಹಾರ
ಕಚೇರಿ ಸ್ತರದ ಸಭೆಗಳಿಗೆ ‘ಮಳೆ ಅಡ್ಡಿ‘
ಸಾಮಾನ್ಯವಾಗಿ ಸಭೆಗಳು ನಡೆಯುವ ಕೊಠಡಿಯೂ ಮಳೆಯ ನೀರಿಗೆ ಕೂರುವಂತಾಗಿದೆ. ಮುಖ್ಯಾಧಿಕಾರಿಗಳ ಕೊಠಡಿಯನ್ನು ಹೊರತುಪಡಿಸಿದರೆ, ಉಳಿದ ಎಲ್ಲಾ ಸ್ಥಳಗಳು ಆಪತ್ತಿನಲ್ಲಿವೆ. ಸಿಬ್ಬಂದಿಗಳು ಜೀವದ ಹಂಗಿನಲ್ಲಿ ಕೆಲಸ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಹೊಸ ಕಟ್ಟಡದ ಅವಶ್ಯಕತೆ ಎಚ್ಚರಿಕೆ ಘಂಟೆ!
ಕಚೇರಿಯ ಈ ಸ್ಥಿತಿಯ ಬಗ್ಗೆ ಸ್ಥಳೀಯ ಜನ ಪ್ರತಿನಿಧಿಗಳು, ಅಧಿಕಾರಿಗಳು ತ್ವರಿತ ಗಮನ ಹರಿಸಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ. ಇಲ್ಲದಿದ್ದರೆ ಯಾವುದೇ ಅನಾಹುತ ಸಂಭವಿಸಬಹುದು ಎಂಬ ಭಯ ವ್ಯಕ್ತವಾಗುತ್ತಿದೆ.
For More Updates Join our WhatsApp Group :
