ದರ್ಶನ್ ಆಪ್ತ ಸುನೀಲ್ ಅವರೇ ಈಗ ಫಾರ್ಮ್ಹೌಸ್ ನೋಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಅವರು ಕುದುರೆಗಳನ್ನು ನೋಡಿಕೊಳ್ಳುತ್ತಿದ್ದಾರೆ. ‘ದರ್ಶನ್ ಕುದುರೆಗಳನ್ನು ಮಾರಾಟ ಮಾಡುತ್ತಾರೆ’ ಎಂಬ ಸುದ್ದಿ ಹರಿದಾಡಿದೆ. ಇದಕ್ಕೆ ಅವರು ಸ್ಪಷ್ಟನೆ ನೀಡಿದ್ದಾರೆ. ಮಾಧ್ಯಮ ಒಂದರಲ್ಲಿ ಈ ರೀತಿಯ ಸುದ್ದಿ ಹರಿದಾಡಿತ್ತು ಎನ್ನಲಾಗಿದೆ.
ನಟ ದರ್ಶನ್ ಅವರು ಸದ್ಯ ಜೈಲಿನಲ್ಲಿ ಇದ್ದಾರೆ. ಅವರು ರೇಣುಕಾ ಸ್ವಾಮಿ ಕೊಲೆ ಕೇಸ್ನಲ್ಲಿ ಆರೋಪಿ ಆಗಿದ್ದಾರೆ. ದರ್ಶನ್ ಅವರು ಅರೆಸ್ಟ್ ಆಗಿರೋದು ಅವರ ಆಪ್ತ ವಲಯಕ್ಕೆ ಬೇಸರ ಮೂಡಿಸಿರೋದು ಸತ್ಯ. ದರ್ಶನ್ ಅವರು ಫಾರ್ಮ್ಹೌಸ್ ಹೊಂದಿದ್ದಾರೆ. ಅಲ್ಲಿ ಕುದುರೆಗಳನ್ನು ಸಾಕಿದ್ದಾರೆ. ಕುದುರೆಗಳನ್ನು ಮಾರಾಟ ಮಾಡಲಾಗುತ್ತಿದೆ ಎನ್ನುವ ಸುದ್ದಿ ಹರಿದಾಡಿತ್ತು. ಈ ಬಗ್ಗೆ ಅವರ ಆಪ್ತ ಸುನೀಲ್ ಅವರು ಮಾತನಾಡಿದ್ದಾರೆ.
ದರ್ಶನ್ ಆಪ್ತ ಸುನೀಲ್ ಅವರೇ ಈಗ ಫಾರ್ಮ್ಹೌಸ್ ನೋಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಅವರು ಕುದುರೆಗಳನ್ನು ನೋಡಿಕೊಳ್ಳುತ್ತಿದ್ದಾರೆ. ‘ದರ್ಶನ್ ಕುದುರೆಗಳನ್ನು ಮಾರಾಟ ಮಾಡುತ್ತಾರೆ’ ಎಂಬ ಸುದ್ದಿ ಹರಿದಾಡಿದೆ. ಇದಕ್ಕೆ ಅವರು ಸ್ಪಷ್ಟನೆ ನೀಡಿದ್ದಾರೆ. ಮಾಧ್ಯಮ ಒಂದರಲ್ಲಿ ಈ ರೀತಿಯ ಸುದ್ದಿ ಹರಿದಾಡಿತ್ತು ಎನ್ನಲಾಗಿದೆ.
ಯೂಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ಸುನೀಲ್ ಮಾತನಾಡಿದ್ದಾರೆ. ‘ಕುದುರೆ ಮಾರಾಟಕ್ಕಿದೆ ಎಂಬ ಬೋರ್ಡ್ ಏಕೆ ಇದೆ ಎಂಬುದನ್ನು ಜನರು ಅರ್ಥ ಮಾಡಿಕೊಳ್ಳಬೇಕು. ಕುದುರೆ ಖರೀದಿ ಮಾಡಬೇಕು ಎಂಬ ಆಸೆ ಅನೇಕರಿಗೆ ಇರುತ್ತದೆ. ಆದರೆ, ಎಲ್ಲಿ ಖರೀದಿ ಮಾಡಬೇಕು ಎಂದು ಗೊತ್ತಿರುವುದಿಲ್ಲ. ಅಂಥವರಿಗೆ ಇದು ಸಹಕಾರಿ ಆಗಲಿದೆ’ ಎಂಬುದು ಸುನೀಲ್ ಅಭಿಪ್ರಾಯ.
‘ಕುದುರೆಗಳ ಬಗ್ಗೆ ಅನೇಕರಿಗೆ ಜ್ಞಾನ ಇರೋದಿಲ್ಲ. ಅದನ್ನು ಎಲ್ಲಿ ಖರೀದಿಸಬೇಕು ಎಂದು ಕೂಡ ತಿಳಿಯುವುದಿಲ್ಲ. ಅಂಥವರು ಬಂದು ಇಲ್ಲಿ ವಿಚಾರಿಸಿ, ಕುದುರೆ ಖರೀದಿ ಮಾಡಬಹುದು’ ಎಂದು ಅವರು ಹೇಳಿದ್ದಾರೆ. ಸಾಕುವವರು ಆಸಕ್ತಿ ಇರುವವರಿಗೆ ಸಹಾಯ ಆಗಲಿ ಎಂಬುದು ಇದರ ಉದ್ದೇಶ.
ದರ್ಶನ್ ಅವರು ಸದ್ಯ ಬೇಸರದಲ್ಲಿ ಇದ್ದಾರೆ. ಅವರು ಜೈಲಿನಲ್ಲೇ ಸಮಯ ಕಳೆಯುತ್ತಿದ್ದಾರೆ. ದಿಂಬು ಹಾಸಿಗೆ ಪಡೆದುಕೊಳ್ಳಲು ಕಷ್ಟಪಡಬೇಕಾದ ಪರಿಸ್ಥಿತಿ ಬಂದಿದೆ. ಮತ್ತೊಂದು ಕಡೆ ದರ್ಶನ್ ನಟನೆಯ ‘ಡೆವಿಲ್’ ಸಿನಿಮಾ ರಿಲೀಸ್ಗೆ ರೆಡಿ ಇದೆ. ಡಿಸೆಂಬರ್ 12ರಂದು ಸಿನಿಮಾ ಬರಲಿದೆ ಎಂಬ ಮಾಹಿತಿಯನ್ನು ತಂಡದವರು ರಿವೀಲ್ ಮಾಡಿದ್ದಾರೆ. ಈ ಚಿತ್ರವನ್ನು ನೋಡಲು ಫ್ಯಾನ್ಸ್ ಕೂಡ ಕಾದಿದ್ದಾರೆ. ಈ ಚಿತ್ರದ ಹಾಡುಗಳು ಬಿಡುಗಡೆ ಕಾಣುತ್ತಿವೆ.
For More Updates Join our WhatsApp Group :




