ಬೆಂಗಳೂರು: ಬೆಂಗಳೂರಿನ ರಾಜರಾಜೇಶ್ವರಿ ನಗರ ಶಾಸಕ ಮುನಿರತ್ನ ಅವರ ಕಚೇರಿಗೆ ಪೊಲೀಸರು ಬೀಗ ಹಾಕಿದ ಘಟನೆ ಶುಕ್ರವಾರ ನಡೆಯಿತು. ಈ ವಿಚಾರವಾಗಿ ಶಾಸಕರು ಹಾಗೂ ಪೊಲೀಸರ ನಡುವೆ ವಾಗ್ವಾದವೂ ನಡೆಯಿತು. ರಾಜರಾಜೇಶ್ವರಿನಗರ ಕ್ಷೇತ್ರ ವ್ಯಾಪ್ತಿಯ ಲಕ್ಷ್ಮೀದೇವಿನಗರದ ಕಚೇರಿಯಲ್ಲಿ ಪಟಾಕಿ ಹಂಚಲು ಮುನರತ್ನ ಬೆಂಬಲಿಗರು ಮುಂದಾಗಿದ್ದರು.
ಪರವಾನಗಿ ಪಡೆದು ನಿರ್ದಿಷ್ಟ ಸ್ಥಳಗಳಲ್ಲಿ ಮಾತ್ರವೇ ಪಟಾಕಿ ಮಾರಾಟ ಮಾಡಬಹುದು, ಹಂಚಬಹುದು ಎಂಬ ನಿಯಮ ಇರುವ ಕಾರಣ ಪೊಲೀಸರು ಸ್ಥಳಕ್ಕೆ ತೆರಳಿ ಕಚೇರಿಗೆ ಬೀಗ ಜಡಿದರು. ಈ ವೇಳೆ, ಮುನಿರತ್ನ ಕಚೇರಿ ಬಳಿಗೆ ಬಂದ ಮಹಿಳೆಯರು, ನಾವು ಪಟಾಕಿ ಹೊಡೆಯಬೇಕು. ಮುನಿರತ್ನ ಅವರು ಪಟಾಕಿ ಕೊಡಬೇಕು, ನಮ್ಮ ಮಕ್ಕಳು ಪಟಾಕಿ ಸಿಡಿಸಬೇಕು. ನಾವು ಬಡವರು, ಹಬ್ಬ ಮಾಡಲು ಬಿಡಿ ಎಂದು ಆಗ್ರಹಿಸಿದರು.
For More Updates Join our WhatsApp Group :
