ಬೆಂಗಳೂರು: ತಮ್ಮ ಬಗ್ಗೆ ಸಿಎಂ ಸಿದ್ದರಾಮಯ್ಯ ನೀಡಿದ್ದ ‘ಅಮವಾಸ್ಯೆ’ ಹೇಳಿಕೆಗೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ತಿರುಗೇಟು ನೀಡಿದ್ದಾರೆ. ಸಿದ್ದರಾಮಯ್ಯ ಅವರಿಗೆ ಬಹುಶಃ ಅಮವಾಸ್ಯೆ ಮತ್ತು ಹುಣ್ಣಿಮೆಯ ವ್ಯತ್ಯಾಸ ಗೊತ್ತಿಲ್ಲ. ಈ ದಿನಗಳಲ್ಲೂ ಸೂರ್ಯ ಇರುತ್ತಾನೆ, 365 ದಿನಗಳೂ ಪ್ರಕಾಶಿಸುತ್ತಾನೆ. ಚಂದ್ರನ ನೋಡಿ ಪೂಜೆ ಮಾಡುವ ಜನರ ಜೊತೆ ಇದ್ದು ಇದ್ದು ನೀವು ಗೊಂದಲಕ್ಕೆ ಒಳಗಾಗಿದ್ದೀರಿ. ಈ ಬಗ್ಗೆ ತಿಳಿದುಕೊಂಡು ಮುಂದೆ ಹೇಳಿಕೆ ಕೊಡಿ.
ನಿಮ್ಮ ಬಗ್ಗೆಯೂ ನಾನು ವೈಯಕ್ತಿಕವಾಗಿ ಸಾಕಷ್ಟು ಟೀಕೆ ಮಾಡಬಹುದು. ಆದರೆ ಸಂಸದನಾಗಿ ನನಗೆ ಅದು ಶೋಭೆ ತರಲ್ಲ. ನನ್ನ ತಂದೆ ವಯಸ್ಸಿನ ನಿಮ್ಮ ಬಗ್ಗೆ ಮಾತಾಡುವ ಸಂಸ್ಕಾರ ನನ್ನದಲ್ಲ ಎಂದು ತಿವಿದಿದ್ದಾರೆ.
For More Updates Join our WhatsApp Group :
