ಕಳ್ಳ ಅಂತ ಅಟ್ಟಾಡಿಸಿದ ಗ್ರಾಮಸ್ಥರು! ಭಯದಿಂದ ತೆಂಗಿನ ಮರವೇರಿದ ಯುವಕ.

ಕಳ್ಳ ಅಂತ ಅಟ್ಟಾಡಿಸಿದ ಗ್ರಾಮಸ್ಥರು! ಭಯದಿಂದ ತೆಂಗಿನ ಮರವೇರಿದ ಯುವಕ.

ಗದಗ: ಗದಗ ಜಿಲ್ಲೆಯ ವಿವೇಕಾನಂದ ನಗರ ಬಡಾವಣೆಯಲ್ಲಿ ಮಂಗಳವಾರ ಬೆಳ್ಳಂಬೆಳಗ್ಗೆ ಹೈಡ್ರಾಮಾ ನಡೆದಿದೆ. ಕಳ್ಳತನದ ಆರೋಪದ ಮೇಲೆ ಗ್ರಾಮಸ್ಥರು ಬೆನ್ನಟ್ಟಿದಾಗ, ಬಸವರಾಜ್ ಸೊಲ್ಲಾಪುರ ಎಂಬ ಯುವಕ ಸುಮಾರು 30-40 ಅಡಿ ಎತ್ತರದ ತೆಂಗಿನ ಮರವನ್ನು ಏರಿ ಕುಳಿತಿದ್ದಾನೆ. ಈ ಘಟನೆ ಮಂಗಳವಾರ ನಸುಕಿನ ಜಾವ 3 ರಿಂದ 3:30ರ ಸುಮಾರಿಗೆ ನಡೆದಿದೆ. ಮೂಲತಃ ಬೆಳಗಾವಿ ಜಿಲ್ಲೆಯ ಕಬ್ಬೂರು ಗ್ರಾಮದ ನಿವಾಸಿಯಾಗಿರುವ ಬಸವರಾಜ್, ನಸುಕಿನ ಜಾವ ಬಡಾವಣೆಯ ಮನೆ ಬಾಗಿಲು ಬಡಿದಿದ್ದಾನೆ ಎನ್ನಲಾಗಿದೆ.

 ಇದರಿಂದ ಭಯಗೊಂಡ ಸ್ಥಳೀಯರು ಆತನನ್ನು ಕಳ್ಳ ಎಂದು ಶಂಕಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕಾಗಮಿಸಿದಾಗ ಅವರ ಸೈರನ್ ಶಬ್ದ ಕೇಳಿ ಭಯಗೊಂಡ ಬಸವರಾಜ್, ತಪ್ಪಿಸಿಕೊಳ್ಳಲು ತೆಂಗಿನ ಮರ ಏರಿದ್ದಾನೆ. ನಾಲ್ಕು ಗಂಟೆಗೂ ಹೆಚ್ಚು ಕಾಲ ಮರದಲ್ಲೇ ಕಳೆದ ಯುವಕನನ್ನು, ಬಳಿಕ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ, ಪೊಲೀಸರು ಮತ್ತು ಸ್ಥಳೀಯರ ಸಹಾಯದಿಂದ ಸುರಕ್ಷಿತವಾಗಿ ಕೆಳಗಿಳಿಸಿದ್ದಾರೆ. ನಂತರ ಆತನನ್ನು ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *