ವರೂಣಾ ಕ್ಷೇತ್ರದಲ್ಲಿ 80 ವರ್ಷದ ಅಂಧ ವೃದ್ಧೆಯ ಮೇಲೆ ಚೆಸ್ಕಾಂ ಅಧಿಕಾರಿಗಳ ದೌರ್ಜನ್ಯ.

ವರೂಣಾ ಕ್ಷೇತ್ರದಲ್ಲಿ 80 ವರ್ಷದ ಅಂಧ ವೃದ್ಧೆಯ ಮೇಲೆ ಚೆಸ್ಕಾಂ ಅಧಿಕಾರಿಗಳ ದೌರ್ಜನ್ಯ.

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಕ್ಷೇತ್ರ ವರುಣಾದಲ್ಲಿ ಚೆಸ್ಕಾಂ ಅಧಿಕಾರಿಗಳು ಗೂಂಡಾವರ್ತನೆ ತೋರಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ನಂಜನಗೂಡು ತಾಲೂಕಿನ ಚಿಕ್ಕಹೊಮ್ಮದಲ್ಲಿ, ಕರೆಂಟ್ ಬಿಲ್ ಕಟ್ಟಿಲ್ಲವೆಂದು ಚೆಸ್ಕಾಂ ಅಧಿಕಾರಿಗಳು 80 ವರ್ಷದ ಅಂಧ ವೃದ್ಧೆಯನ್ನು ತಳ್ಳಾಡಿ ದೌರ್ಜನ್ಯ ಎಸಗಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಈ ಘಟನೆ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಹದೇವಮ್ಮ ಎಂಬ 80 ವರ್ಷದ ಅಂಧ ವೃದ್ಧೆಯ ಮನೆಗೆ ಚೆಸ್ಕಾಂ ಸಿಬ್ಬಂದಿ ಬಂದು 5,000 ರೂ. ಕರೆಂಟ್ ಬಿಲ್‌ ಪಾವತಿಸಲು ಒತ್ತಾಯಿಸಿದ್ದಾರೆ. ಈ ವೇಳೆ, ತಾವು ಭಾಗ್ಯಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ಪಡೆಯುತ್ತಿರುವುದಾಗಿಯೂ, ತಪ್ಪು ಬಿಲ್ ಬಂದಿದ್ದು, ಅದನ್ನು ಕಟ್ಟಲು ಸಾಧ್ಯವಿಲ್ಲವೆಂದು ಅವರು ತಿಳಿಸಿದ್ದರು. ಆದರೂ ಸಿಬ್ಬಂದಿ ಬಲವಂತವಾಗಿ ಫ್ಯೂಸ್ ಮತ್ತು ಮೀಟರ್ ಬೋರ್ಡ್ ತೆಗೆದುಹಾಕಲು ಯತ್ನಿಸಿದ್ದಾರೆ. ಈ ವೇಳೆ ವೃದ್ಧೆ ಮಹದೇವಮ್ಮ ವಿರೋಧ ವ್ಯಕ್ತಪಡಿಸಿದಾಗ, ‘ನಮ್ಮ ಕರ್ತವ್ಯಕ್ಕೆ ಅಡ್ಡಿಯಾಗುತ್ತಿದ್ದೀಯಾ’ ಎಂದು ಸಿಬ್ಬಂದಿ ಕೋಪಗೊಂಡು ತಳ್ಳಿದ್ದಾರೆ ಎನ್ನಲಾಗಿದೆ.

ಈ ಘಟನೆ ವೇಳೆ ಅಂಧ ವೃದ್ಧೆ ಕೆಳಗೆ ಬಿದ್ದು ಗಾಯಗೊಂಡಿದ್ದಾರೆ. ಅವರನ್ನು ತಕ್ಷಣ ಚಾಮರಾಜನಗರ ಸಿಮ್ಸ್‌ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಚಿಕಿತ್ಸೆ ಬಳಿಕ ಮಹದೇವಮ್ಮ ಅವರನ್ನು ಡಿಸ್ಚಾರ್ಜ್ ಮಾಡಲಾಗಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *