ಗುತ್ತಿಗೆದಾರರ ಬಿಲ್ ಯಾಕೆ ಬಿಡುಗಡೆಯಾಗುತ್ತಿಲ್ಲ? ಕಾರಣ ಬಿಚ್ಚಿಟ್ಟ ಹಣಕಾಸು ಕಾರ್ಯದರ್ಶಿ P.C ಜಾಫರ್!

ಗುತ್ತಿಗೆದಾರರ ಬಿಲ್ ಯಾಕೆ ಬಿಡುಗಡೆಯಾಗುತ್ತಿಲ್ಲ? ಕಾರಣ ಬಿಚ್ಚಿಟ್ಟ ಹಣಕಾಸು ಕಾರ್ಯದರ್ಶಿ P.C ಜಾಫರ್!

ಬೆಂಗಳೂರು: ಸರ್ಕಾರಿ ಇಲಾಖೆಗಳು ಕರ್ನಾಟಕ ಪಬ್ಲಿಕ್ ಪ್ರೊಕ್ಯೂರ್​ಮೆಂಟ್ ಪೋರ್ಟಲ್​ಗೆ ಅನುಷ್ಠಾನಗೊಳಿಸಲಾಗುತ್ತಿರುವ ಕಾಮಗಾರಿಗಳ ವಿವರಗಳನ್ನು ಅಪ್‌ಲೋಡ್ ಮಾಡಿದರೆ ಮಾತ್ರ ಹಣ ಬಿಡುಗಡೆ ಮಾಡಲಾಗುವುದು ಎಂದು ಹಣಕಾಸು ಕಾರ್ಯದರ್ಶಿ (ಬಜೆಟ್ ಮತ್ತು ಹಂಚಿಕೆ) ಪಿಸಿ ಜಾಫರ್ ಹೇಳಿದ್ದಾರೆ. ವಿವಿಧ ಸರ್ಕಾರಿ ಇಲಾಖೆಗಳು KPPP ಪೋರ್ಟಲ್​ಗೆ ಕಾಮಗಾರಿಗಳ ವಿವರಗಳನ್ನು ಅಪ್‌ಲೋಡ್ ಮಾಡಲು ವಿಫಲವಾದ ಕಾರಣ ಅವರು ಈ ಸ್ಪಷ್ಟನೆ ನೀಡಿದ್ದಾರೆ. ಗುತ್ತಿಗೆದಾರರ ಬಾಕಿ ಬಿಲ್ ಬಿಡುಗಡೆಯಾಗುತ್ತಿಲ್ಲ ಎಂಬ ಆರೋಪಗಳ ಬೆನ್ನಲ್ಲೇ ಹಣಕಾಸು ಕಾರ್ಯದರ್ಶಿ ಅವರಿಂದ ಈ ಸ್ಪಷ್ಟನೆ ಮೂಡಿಬಂದಿದೆ.

ಈವರೆಗೆ 36,706 ಟೆಂಡರ್ ಆಗಿರುವ ಕಾಮಗಾರಿಗಳಲ್ಲಿ ಕೇವಲ 505 ಕಾಮಗಾರಿಗಳ ವಿವರಗಳನ್ನು ಮಾತ್ರ ಪೋರ್ಟಲ್​​ಗೆ ಅಪ್‌ಲೋಡ್ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಕೆಪಿಪಿಪಿ ಪೋರ್ಟಲ್ ಎಂದರೇನು?

50 ಲಕ್ಷ ರೂ. ಮತ್ತು ಅದಕ್ಕಿಂತ ಹೆಚ್ಚಿನ ಮೌಲ್ಯದ ಯೋಜನೆಗಳನ್ನು ಪತ್ತೆಹಚ್ಚಲು ಗುತ್ತಿಗೆ ನಿರ್ವಹಣಾ ಮಾಡ್ಯೂಲ್ ಅನ್ನು 023 ರಲ್ಲಿ ಸರ್ಕಾರ ಪರಿಚಯಿಸಿತ್ತು. KPPP ಪೋರ್ಟಲ್​ ಅನ್ನು 2023 ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದ್ದರು. ಆರಂಭದಲ್ಲಿ ಲೋಕೋಪಯೋಗಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಮತ್ತು ಜಲಸಂಪನ್ಮೂಲ ಇಲಾಖೆಗಳಲ್ಲಿ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಈಗಿನ ಜಿಬಿಎ) ವ್ಯಾಪ್ತಿಯಲ್ಲಿ ಪ್ರಾಯೋಗಿಕವಾಗಿ ಪೋರ್ಟಲ್ ಆರಂಭಿಸಲಾಗಿತ್ತು. ನಂತರ 2024 ರ ಜುಲೈಯಲ್ಲಿ, ಹಣಕಾಸು ಇಲಾಖೆಯು ಟೆಂಡರ್‌ಗಳನ್ನು ಆಹ್ವಾನಿಸುವುದರಿಂದ ಹಿಡಿದು ಬಿಲ್‌ಗಳ ಕ್ಲಿಯರೆನ್ಸ್‌ವರೆಗಿನ ವಿವರಗಳನ್ನು ಅಪ್‌ಲೋಡ್ ಮಾಡಲು ಅಧಿಸೂಚನೆಯನ್ನು ಹೊರಡಿಸಿತ್ತು.

ಇದಕ್ಕೂ ಮೊದಲಿನ ವ್ಯವಸ್ಥೆಯಲ್ಲಿ, ಯೋಜನೆಗಳ ಕೆಲಸವನ್ನು ಮೇಲ್ವಿಚಾರಣೆ ಮಾಡಲು ಯಾವುದೇ ಕಾರ್ಯವಿಧಾನವಿರಲಿಲ್ಲ. ವಿವಿಧ ಯೋಜನೆಗಳಿಗೆ ಸಂಬಂಧಿಸಿದ ದಾಖಲೆಗಳು ಮತ್ತು ಜಾರಿಗೆ ತಂದ ಕಾಮಗಾರಿಗಳ ಬಿಲ್‌ಗಳನ್ನು ಪರಿಶೀಲಿಸಲು ಅಧಿಕಾರಿಗಳು ಸಾಕಷ್ಟು ಸಮಯವನ್ನು ಕಳೆಯಬೇಕಾಗುತ್ತಿತ್ತು. ನಂತರ, ಅಭಿವೃದ್ಧಿ ಯೋಜನೆಗಳಿಗೆ ಸಂಬಂಧಿಸಿದ ಬಿಲ್‌ಗಳು ಮತ್ತು ದಾಖಲೆಗಳನ್ನು ಆಡಿಟರ್ ಜನರಲ್‌ಗೆ ಸಲ್ಲಿಸಬೇಕಾಯಿತು. ನಾವು ಅದನ್ನು ಆನ್‌ಲೈನ್ ಮಾಡಿದ್ದೇವೆ. ಈಗ ದಾಖಲೆಗಳನ್ನು ಕೊಂಡೊಯ್ಯುವ ಅಗತ್ಯವಿಲ್ಲ. ಅನುಷ್ಠಾನದಲ್ಲಿರುವ ಯೋಜನೆಯ ಆರ್ಥಿಕ ಸ್ಥಿತಿ ಮತ್ತು ಭೌತಿಕ ಪ್ರಗತಿಯನ್ನು ತಿಳಿಯಲು ಇದು ಅಧಿಕಾರಿಗಳಿಗೆ ಸಹಾಯ ಮಾಡುತ್ತದೆ ಎಂದು ಮೂಲಗನ್ನು ಉಲ್ಲೇಖಿಸಿ ‘ದಿ ನ್ಯೂ ಇಂಡಿಯನ್ ಎಕ್ಸ್​​ಪ್ರೆಸ್’ ವರದಿ ಮಾಡಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *