ಬೆಂಗಳೂರು: ಐದು ಜಿಲ್ಲೆಗಳ ಪೊಲೀಸರಿಗೆ ಬೇಕಾಗಿದ್ದ ನಟೋರಿಯಸ್ ಕಳ್ಳನನ್ನು ಬೆಂಗಳೂರಿನ ವಿದ್ಯಾರಣ್ಯಪುರ ಪೊಲೀಸರು ಬಂಧಿಸಿದ್ದಾರೆ. ಅಸ್ಲಾಂ ಪಾಷಾ ಅರೆಸ್ಟ್ ಆದ ಆರೋಪಿಯಾಗಿದ್ದು, ಈತನ ಮೇಲೆ 150 ಕಳ್ಳತನ ಕೇಸ್ಗಳಿವೆ. ಹಗಲುವೇಳೆ ಐಷಾರಾಮಿ ಮನೆಗಳನ್ನ ಗುರುತಿಸುತ್ತಿದ್ದ ಆರೋಪಿ ರಾತ್ರಿವೇಳೆ ಕೈಚಳಕ ತೋರಿಸುತ್ತಿದ್ದ. ಬೆಂಗಳೂರು, ಬೆಂಗಳೂರು ಗ್ರಾಮಾಂತರ ಶಿವಮೊಗ್ಗ ಹಾವೇರಿ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ಈತ ಮನೆಗಳ್ಳತನ ಮಾಡಿದ್ದ.
ಕಿಟಕಿ ತೆರೆದು ಮಹಿಳೆಯರು ನಿದ್ರೆಗೆ ಜಾರಿದ್ರೆ ಕುತ್ತಿಗೆಯಲ್ಲಿರೋ ಸರ ಎಗರಿಸಿ ಎಸ್ಕೇಪ್ ಆಗುತ್ತಿದ್ದ ಈತ, ಕಿಟಕಿ ಪಕ್ಕದಲ್ಲಿ ಮೇನ್ ಡೋರ್ ಇದ್ರೆ ಕಿಟಕಿ ಗ್ಲಾಸ್ ಒಡೆದು ಡೋರ್ ಓಪನ್ ಮಾಡಿ ಕದಿಯುತ್ತಿದ್ದ. ಹಾಲು ಪೇಪರ್ ಮನೆಬಳಿ ಬಿದ್ದಿದ್ದು ಮೇನ್ ಡೋರ್ ಲಾಕ್ ಆಗಿರುವ ಮನೆಗಳು, ರಾತ್ರಿ ವೇಳೆ ಲೈಟ್ ಆನ್ ಆಗಿರದ ಮನೆಗಳು ಸೇರಿ ಗೇಟ್ ಲಾಕ್ ಆಗಿದ್ದ ಮನೆಗಳನ್ನೇ ಟಾಗರ್ಗಟ್ ಮಾಡಿ ಈತ ಕೈಚಳಕ ತೋರುತ್ತಿದ್ದ. ಇನ್ನು ಒಂದು ಠಾಣೆ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿದ್ರೆ ಆ ಕೇಸ್ ಹಳೇದಾಗೋವರೆಗೂ ಮತ್ತೆ ಆ ಕಡೆ ಈತ ಹೋಗುತ್ತಿರಲಿಲ್ಲ. ಕನಿಷ್ಟ ಒಂದು ವರ್ಷವಾದರೂ ಆ ಏರಿಯಾದಿಂದ ಅಂತರ ಕಾಯ್ದುಕೊಳ್ಳುತ್ತಿದ್ದ ಎನ್ನಲಾಗಿದೆ.
For More Updates Join our WhatsApp Group :
