ನೊಯ್ಡಾದಲ್ಲಿ ಚರಂಡಿಯಲ್ಲಿ ತಲೆಯಿಲ್ಲದ ಮಹಿಳೆಯ ಶ*ವ ಪತ್ತೆ – ಪೊಲೀಸರ ತನಿಖೆ ತೀವ್ರಗತಿ.

ನೊಯ್ಡಾ: ಭಾರತದಲ್ಲಿ ಇತ್ತೀಚೆಗೆ ಅಪರಾಧ ಪ್ರಕರಣಗಳು ಹೆಚ್ಚಾಗಿ ಬೆಳಕಿಗೆ ಬರುತ್ತಿವೆ. ಅದರಲ್ಲೂ ಅಕ್ರಮ ಸಂಬಂಧದಿಂದ ಕೊಲೆ ಪ್ರಕರಣಗಳು, ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಇದೀಗ ಉತ್ತರ ಪ್ರದೇಶದ ನೊಯ್ಡಾದಲ್ಲಿ ನಡೆದಿರುವ ಕೊಲೆ ಪ್ರಕರಣ ಎಷ್ಟು ಅಮಾನವೀಯವಾಗಿದೆ ಎಂದರೆ ಈ ಘಟನೆ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಮಹಿಳೆಯ ಶವವೊಂದು ಪತ್ತೆಯಾಗಿದ್ದು, ಆ ದೇಹದ ಮೇಲೆ ಒಂದು ತುಂಡು ಬಟ್ಟೆಯೂ ಇಲ್ಲ, ರುಂಡವೂ ಇಲ್ಲ!

ನೊಯ್ಡಾ ಸೆಕ್ಟರ್ 108ರ ಚರಂಡಿಯಲ್ಲಿ ಅಂಗೈಗಳನ್ನು ಕತ್ತರಿಸಿರುವ, ತಲೆಯನ್ನು ಕತ್ತರಿಸಿರುವ ಮಹಿಳೆಯ ಬೆತ್ತಲೆ ದೇಹವು ಪತ್ತೆಯಾಗಿದೆ. ಮೃತ ಮಹಿಳೆ ಯಾರು, ಆಕೆಯ ವಯಸ್ಸೇನು, ಆಕೆಯನ್ನು ಕೊಲೆ ಮಾಡಿದ್ದು ಯಾರು? ಎಂಬುದರ ಬಗ್ಗೆ ತಿಳಿಯಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ.

ನೊಯ್ಡಾದ ಐಷಾರಾಮಿ ಪ್ರದೇಶದ ಚರಂಡಿಯಲ್ಲಿ ತಲೆಯಿಲ್ಲದ ಮತ್ತು ಬೆತ್ತಲೆ ಶವ ಪತ್ತೆಯಾಗಿದೆ ಎಂದು ಪೊಲೀಸರು ಖಚಿತಪಡಿಸಿದ್ದಾರೆ. ತಲೆ ಮತ್ತು ಅಂಗೈಗಳನ್ನು ಕತ್ತರಿಸಲ್ಪಟ್ಟಿರುವ ಶವ ಇಂದು ಬೆಳಿಗ್ಗೆ ಚರಂಡಿಯಲ್ಲಿ ತೇಲುತ್ತಿರುವುದು ಕಂಡುಬಂದಿದೆ. ತಕ್ಷಣ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಆ ಮಹಿಳೆಯ ಗುರುತನ್ನು ತಕ್ಷಣ ಕಂಡುಹಿಡಿಯಲು ಸಾಧ್ಯವಾಗಿಲ್ಲ. ಮಹಿಳೆಯನ್ನು ಕೊಲೆ ಮಾಡಿ, ಬೇರೆ ಪ್ರದೇಶದಲ್ಲಿ ಆಕೆಯ ದೇಹವನ್ನು ತುಂಡುಗಳಾಗಿ ಕತ್ತರಿಸಿ, ಆಕೆಯ ರುಂಡ ಕತ್ತರಿಸಿದ ದೇಹವನ್ನು ನೊಯ್ಡಾ ಸೆಕ್ಟರ್ 108ರಲ್ಲಿ ಎಸೆದಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಮಾಹಿತಿ ಪಡೆದ ನಂತರ, ಸ್ಥಳಕ್ಕೆ ಧಾವಿಸಿದ ಪೊಲೀಸ್ ತಂಡವು ಆ ಶವವನ್ನು ಚರಂಡಿಯನ್ನು ಹೊರಗೆ ತೆಗೆದು, ಶಿರಚ್ಛೇದಿತ ದೇಹವನ್ನು ಶವಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಿದೆ. ಆ ಮಹಿಳೆಯನ್ನು ಗುರುತಿಸಲು ಪ್ರಯತ್ನಗಳು ನಡೆಯುತ್ತಿವೆ. ಇತರ ಕಾನೂನು ಕ್ರಮಗಳನ್ನು ಸಹ ತೆಗೆದುಕೊಳ್ಳಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಿಷಯದ ಬಗ್ಗೆ ತನಿಖೆ ನಡೆಸಲು ತಂಡವನ್ನು ರಚಿಸಲಾಗಿದೆ. ಪ್ರಕರಣದ ಸುಳಿವುಗಳಿಗಾಗಿ ಹತ್ತಿರದ ಸಿಸಿಟಿವಿ ದೃಶ್ಯಾವಳಿಗಳನ್ನು ಸಹ ಸ್ಕ್ಯಾನ್ ಮಾಡಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *