ಬೆಂಗಳೂರು: ಹಗಲು-ರಾತ್ರಿ ಎನ್ನದೆ ಸಂಚಾರಿ ಪೊಲೀಸರು ಕರ್ತವ್ಯ ನಿರ್ವಹಿಸುತ್ತಾರೆ. ಉರಿ ಬಿಸಿಲು, ವಾಹನಗಳ ಹೊಗೆ ಮಧ್ಯೆ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡುತ್ತಾರೆ.
ಗಂಟೆಗಟ್ಟಲೇ ನಿಂತುಕೊಂಡು ಕೆಲಸ ಮಾಡುವ ಅವರ ಕಷ್ಟ ಅವರಿಗೆ ಮಾತ್ರ ಗೊತ್ತು. ಹೀಗಾಗಿ ಜನಸಾಮಾನ್ಯರಿಗೂ ಸಂಚಾರಿ ಪೊಲೀಸರ ಕಷ್ಟವೇನು ಎಂದು ತಿಳಿಸುವ ನಿಟ್ಟಿನಲ್ಲಿ ಬೆಂಗಳೂರು ಸಂಚಾರ ಪೊಲೀಸ್ ನೂತನ ಉಪಕ್ರಮಕ್ಕೆ ಕೈಹಾಕಿದ್ದಾರೆ. 18 ವರ್ಷ ಮೇಲ್ಪಟ್ಟ ಯಾರು ಬೇಕಾದರೂ ‘ಒಂದು ದಿನ’ದ ಮಟ್ಟಿಗೆ ಸಂಚಾರಿ ಪೊಲೀಸರಾಗಿ ಕರ್ತವ್ಯ ನಿರ್ವಹಿಸುವ ಅವಕಾಶ ಕಲ್ಪಿಸಲಾಗಿದೆ.
For More Updates Join our WhatsApp Group :
