“ಬೆಲ್ಲ vs ಸಕ್ಕರೆ: ಮಕ್ಕಳಿಗೆ ಯಾವುದು ಸುರಕ್ಷಿತ? ಡಾ. ರವಿ ಮಲಿಕ್ ನೀಡಿದ ಪ್ರಮುಖ ಆರೋಗ್ಯ ಸಲಹೆಗಳು”.

"ಬೆಲ್ಲ vs ಸಕ್ಕರೆ: ಮಕ್ಕಳಿಗೆ ಯಾವುದು ಸುರಕ್ಷಿತ? ಡಾ. ರವಿ ಮಲಿಕ್ ನೀಡಿದ ಪ್ರಮುಖ ಆರೋಗ್ಯ ಸಲಹೆಗಳು".

ಮಕ್ಕಳ ಆರೋಗ್ಯದ ಬಗ್ಗೆ ಗಮನ ಹರಿಸುವುದು ಪೋಷಕರ ಜವಾಬ್ದಾರಿ. ಯಾವ ರೀತಿಯ ಆಹಾರ ನೀಡಬೇಕು, ಯಾವುದು ಒಳ್ಳೆಯದು, ಹೀಗೆ ನೂರಾರು ಗೊಂದಲದ ನಡುವೆಯೂ ಒಳ್ಳೆಯ ಆಹಾರ ಪದ್ದತಿಗಳ ಪರಿಚಯ ಮಾಡಿಸುವುದು ಪಾಲನೆ, ಪೋಷಣೆ ಮಾಡುವವರ ಕರ್ತವ್ಯವಾಗಿರುತ್ತದೆ. ಅದರಲ್ಲಿಯೂ ಅನೇಕ ಪೋಷಕರಿಗೆ ತಮ್ಮ ಮಕ್ಕಳಿಗೆ ಬೆಲ್ಲ ಕೊಡಬೇಕೋ ಅಥವಾ ಸಕ್ಕರೆಯೋ! ಎನ್ನುವಂತಹ ಅನುಮಾನವಿರುತ್ತದೆ. ಇನ್ನು ಕೆಲವರಂತೂ ಇದಾವುದರ ಬಗ್ಗೆಯೂ ಯೋಚಿಸದೆಯೇ ಹೆಚ್ಚಿನ ಸಕ್ಕರೆ ಅಂಶವಿರುವ ಪದಾರ್ಥಗಳನ್ನು ನೀಡುತ್ತಾರೆ. ಆದರೆ ಇದು ತುಂಬಾ ಅಪಾಯಕಾರಿ. ಹಾಗಾದರೆ ಚಿಕ್ಕ ಮಕ್ಕಳಿಗೆ ಬೆಲ್ಲ ಅಥವಾ ಸಕ್ಕರೆ ಯಾವುದನ್ನು ನೀಡಬೇಕು, ಇವೆರಡರಲ್ಲಿ ಯಾವುದು ಒಳ್ಳೆಯದು, ಎಷ್ಟು ವರ್ಷದ ನಂತರ ಸಿಹಿ ಪದಾರ್ಥಗಳ ಸೇವನೆಯನ್ನು ಮಾಡಿಸಬೇಕು ಎಂಬ ಗೊಂದಲಕ್ಕೆ ಡಾ. ರವಿ ಮಲಿಕ್ ಎನ್ನುವವರು ಉತ್ತರ ನೀಡಿದ್ದಾರೆ. ಅವರು ಈ ವಿಷಯಕ್ಕೆ ಸಂಬಂಧಿಸಿದಂತೆ ತಮ್ಮ ಇನ್ಸ್ಟಾದಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. 

ಡಾ ರವಿ ಮಲಿಕ್ ಹೇಳುವ ಪ್ರಕಾರ, ಎರಡು ವರ್ಷದೊಳಗಿನ ಮಕ್ಕಳಿಗೆ ಬೆಲ್ಲ ಅಥವಾ ಸಕ್ಕರೆ ನೀಡಬಾರದು ಎಂದಿದ್ದಾರೆ. ಅದರ ನಂತರ ಅಂದರೆ ಮಕ್ಕಳಿಗೆ ಎರಡು ವರ್ಷ ಆದ ಮೇಲೆ ಬೆಲ್ಲ ನೀಡಬಹುದು, ಆದರೆ ಅದರ ಪ್ರಮಾಣ ಕಡಿಮೆ ಇರಬೇಕು. ಸಕ್ಕರೆಗೆ ಹೋಲಿಸಿದರೆ, ಬೆಲ್ಲ ಮಕ್ಕಳಿಗೆ ನೀಡಬಹುದು. ಆದರೆ ಸ್ವಲ್ಪ ಪ್ರಮಾಣದಲ್ಲಿ ಮಾತ್ರ ನೀಡಬೇಕಾಗುತ್ತದೆ. ಸಿಹಿ ಅಂಶದ ಜೊತೆಗೆ, ಬೆಲ್ಲದಲ್ಲಿ ಕಬ್ಬಿಣ ಮತ್ತು ಮೆಗ್ನೀಸಿಯಮ್‌ನಂತಹ ಖನಿಜಗಳು ಸಹ ಇರುತ್ತವೆ, ಇದು ಮಕ್ಕಳ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ ಎಂದು ಅವರು ಹೇಳಿದ್ದಾರೆ.

ಬೆಲ್ಲ ಸೇವನೆಯಿಂದಾಗುವ ಪರಿಣಾಮಗಳು:

  • ಬೆಲ್ಲದಲ್ಲಿ ಬಹಳಷ್ಟು ಸಿಹಿ ಅಂಶವಿದ್ದು, ಇದು ಮಕ್ಕಳಿಗೆ ಹಠಾತ್ ಚೈತನ್ಯ ನೀಡಲು ಸಹಾಯ ಮಾಡುತ್ತದೆ. ಆದರೆ ನಂತರ, ಅವರಿಗೆ ದಣಿದ ಅಥವಾ ಸುಸ್ತಾದ ಅನುಭವವಾಗುತ್ತದೆ.
  • ಬೆಲ್ಲದಲ್ಲಿ ಸಕ್ಕರೆಯಂತೆಯೇ ಸಿಹಿ ಅಂಶ ಹೆಚ್ಚಾಗಿರುತ್ತದೆ. ಹಾಗಾಗಿ ಮಕ್ಕಳು ಹಲ್ಲುಜ್ಜದೆ ಇವುಗಳನ್ನು ಅಥವಾ ಇವುಗಳಿಂದ ತಯಾರಾದ ಸಿಹಿತಿಂಡಿಗಳನ್ನು ತಿಂದರೆ, ಅದು ಅವರ ಹಲ್ಲುಗಳ ಮೇಲೆ ಕಲೆಗಳನ್ನು ಉಂಟುಮಾಡಬಹುದು ಮತ್ತು ಹಲ್ಲುಕುಳಿಗಳ ಅಪಾಯವನ್ನು ಹೆಚ್ಚಿಸಬಹುದು.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *