ಕ್ಯಾಪ್ಸಿಕಂ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂಬುದು ತಿಳಿದ ವಿಚಾರ. ಇದು ವರ್ಷವಿಡೀ ಮಾರುಕಟ್ಟೆಯಲ್ಲಿ ಲಭ್ಯವಿದ್ದರೂ, ಚಳಿಗಾಲದಲ್ಲಿ ಯಥೇಚ್ಛವಾಗಿ, ತಾಜಾತನದಿಂದ ಕೂಡಿರುವ ಕ್ಯಾಪ್ಸಿಕಂ ಸಿಗುತ್ತದೆ. ಹೆಚ್ಚಾಗಿ ನಾವು ಸೇವಿಸುವ ಕ್ಯಾಪ್ಸಿಕಂ ಹಸಿರು ಬಣ್ಣದಲ್ಲಿರುತ್ತದೆ. ಆದರೆ ಇದು ಹಳದಿ ಮತ್ತು ಕೆಂಪು ಬಣ್ಣಗಳಲ್ಲಿಯೂ ಲಭ್ಯವಿದೆ. ಇದು ನಿಮಗೆ ತಿಳಿದಿರಬಹುದು. ಆದರೂ ಕೂಡ ಹಸಿರು ಕ್ಯಾಪ್ಸಿಕಂ ಬಳಕೆ ಮಾಡುವಷ್ಟು ಇವುಗಳನ್ನು ಮಾಡುವುದಿಲ್ಲ. ಹಾಗಾಗಿ ಕ್ಯಾಪ್ಸಿಕಂ ಎಂದಾಕ್ಷಣ ಹಸಿರಾಗಿ ಗುಂಡು ಗುಂಡಗಿರುವುದೇ ಕಣ್ಣಮುಂದೆ ಬರುತ್ತದೆ. ಈ ತರಕಾರಿ ನೋಡುವುದಕ್ಕೆ ಎಷ್ಟು ಸುಂದರವಾಗಿದೆಯೋ ಅಷ್ಟೇ ಇದರ ಆರೋಗ್ಯಕರ ಗುಣಗಳು ದೇಹವನ್ನು ಆರೋಗ್ಯವಾಗಿ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಇನ್ನು ಚಳಿಗಾಲದಲ್ಲಿಯೂ ಇದನ್ನು ಹೆಚ್ಚಾಗಿ ಸೇವಿಸಲಾಗುತ್ತದೆ. ಆದರೆ ಇದಕ್ಕೆ ಕಾರಣವೇನು, ಯಾರಿಗೆ ಒಳ್ಳೆಯದು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಸಾಮಾನ್ಯವಾಗಿ ಕ್ಯಾಪ್ಸಿಕಂ ವಿಟಮಿನ್ ಸಿ, ಕೆ, ಎ, ಫೈಬರ್ ಮತ್ತು ಮೆಗ್ನೀಸಿಯಮ್ನಂತಹ ಅನೇಕ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಇವು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಮಾತ್ರವಲ್ಲ, ಕ್ಯಾಪ್ಸಿಕಂನಲ್ಲಿ ಲುಟೀನ್ ಮತ್ತು ಜಿಯಾಕ್ಸಾಂಥಿನ್ ನಂತಹ ಕ್ಯಾರೊಟಿನಾಯ್ಡ್ ಗಳಿವೆ. ಅವು ಕಣ್ಣುಗಳನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತವೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಜೀರ್ಣಕ್ರಿಯೆ ಸುಧಾರಿಸುತ್ತದೆ. ಅವು ದೇಹಕ್ಕೆ ಅಗತ್ಯವಿರುವಷ್ಟು ಶಕ್ತಿಯನ್ನು ಪೂರೈಸುತ್ತದೆ. ಅಷ್ಟೇ ಅಲ್ಲ, ತೂಕ ಇಳಿಸಿಕೊಳ್ಳಲು, ಕ್ಯಾನ್ಸರ್ ತಡೆಗಟ್ಟುವಲ್ಲಿಯೂ ಸಹಕಾರಿಯಾಗಿವೆ.
ರೋಗಗಳಿಂದ ರಕ್ಷಿಸುತ್ತದೆ
ಈ ತರಕಾರಿಯಲ್ಲಿ ಫ್ಲೇವನಾಯ್ಡ್ ಗಳು ಎಂಬ ಉತ್ಕರ್ಷಣ ನಿರೋಧಕಗಳಿವೆ. ಅವು ದೇಹವನ್ನು ಆಕ್ಸಿಡೇಟಿವ್ ಹಾನಿಯಿಂದ ರಕ್ಷಿಸುತ್ತವೆ. ಕೆಂಪು ಕ್ಯಾಪ್ಸಿಕಂನಲ್ಲಿರುವ ಉತ್ಕರ್ಷಣ ನಿರೋಧಕ ಕ್ಯಾಪ್ಸಾಂಥಿನ್ ಚರ್ಮವನ್ನು ಹಾನಿಕಾರಕ ಯುವಿ ಕಿರಣಗಳಿಂದ ರಕ್ಷಿಸುತ್ತದೆ. ಕ್ಯಾಪ್ಸಿಕಂ ವಿಟಮಿನ್ ಎ ಮತ್ತು ಸಿ ಯಿಂದ ಸಮೃದ್ಧವಾಗಿದೆ. ಅವು ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತವೆ ಮತ್ತು ಅನೇಕ ರೋಗಗಳಿಂದ ರಕ್ಷಿಸಲು ಸಹಾಯ ಮಾಡುತ್ತವೆ. ದೇಹದಲ್ಲಿ ರಕ್ತದ ಕೊರತೆಯಿಂದ ರಕ್ತಹೀನತೆ ಉಂಟಾಗಿದ್ದರೆ, ಮೊದಲು ಅವರು ಕ್ಯಾಪ್ಸಿಕಂ ಸೇವನೆ ಮಾಡಬೇಕು ಏಕೆಂದರೆ ಇದರಲ್ಲಿರುವ ಕಬ್ಬಿಣದ ಅಂಶವು ರಕ್ತಹೀನತೆಯ ಅಪಾಯವನ್ನು ತಡೆಯಲು ಸಹಾಯ ಮಾಡುತ್ತದೆ.
For More Updates Join our WhatsApp Group :

