ದೆಹಲಿಯ ಆತ್ಮಾಹುತಿ ದಾಳಿಗೆ ಮುನ್ನ ಉಗ್ರ ಉಮರ್ ಮಾಡಿದ ‘ರಹಸ್ಯ’ ಕ್ರಮ ಬಹಿರಂಗ!

ದೆಹಲಿಯ ಆತ್ಮಾಹುತಿ ದಾಳಿಗೆ ಮುನ್ನ ಉಗ್ರ ಉಮರ್ ಮಾಡಿದ ‘ರಹಸ್ಯ’ ಕ್ರಮ ಬಹಿರಂಗ!

ನವದೆಹಲಿ: ದೆಹಲಿಯಲ್ಲಿ ಆತ್ಮಾಹುತಿ ಬಾಂಬ್ ಸ್ಫೋಟಸಂಭವಿಸಿತ್ತು. ಘಟನೆಯಲ್ಲಿ ಉಗ್ರ ಉಮರ್ ಹಾಗೂ 15 ಮಂದಿ ನಾಗರಿಕರು ಪ್ರಾಣ ಕಳೆದುಕೊಂಡಿದ್ದರು. ಈ ದಾಳಿ ನಡೆಸುವುದಕ್ಕೆ ಒಂದು ವಾರ ಮೊದಲು ಉಗ್ರ ಉಮರ್ ಪುಲ್ವಾಮಾನದಲ್ಲಿರುವ ತನ್ನ ಮನೆಗೆ ಹೋಗಿದ್ದ, ತನ್ನ ಮೊಬೈಲ್​ ಅನ್ನು ಸಹೋದರನಿಗೆ ಕೊಟ್ಟು ಬಂದಿದ್ದ ಎನ್ನುವ ಮಾಹಿತಿ ಲಭ್ಯವಾಗಿದೆ.

ಈ ಫೋನ್‌ನಿಂದ ಉಮರ್‌ನ ವೀಡಿಯೊವನ್ನು ವಶಪಡಿಸಿಕೊಳ್ಳಲಾಗಿದ್ದು, ಅದರಲ್ಲಿ ಆತ ಆತ್ಮಾಹುತಿ ಬಾಂಬ್ ದಾಳಿಯನ್ನು ಹುತಾತ್ಮ ಕಾರ್ಯಾಚರಣೆ ಎಂದು ವಿವರಿಸಿದ್ದಾನೆ. ಉಮರ್ ಸಹೋದರ ಜಹೂರ್ ಇಲಾಹಿಯನ್ನು ಬಂಧಿಸಿ ವಿಚಾರಣೆ ನಡೆಸಿದ ಬಳಿಕ ಈ ವಿಡಿಯೋಗಳು ಸಿಕ್ಕಿವೆ. ಅಕ್ಟೋಬರ್ 26 ಹಾಗೂ 29ರ ನಡುವೆ ಉಮರ್ ತನ್ನ ಫೋನ್ ನೀಡಿದ್ದಾಗಿ ಜಹೂರ್ ಹೇಳಿದ್ದಾರೆ.

ಜಹೂರ್ ಹೇಳಿರುವ ಪ್ರಕಾರ, ತನ್ನ ಬಗ್ಗೆ ಏನಾದರೂ ಸುದ್ದಿ ಬಂದರೆ ಆ ಫೋನ್ ಅನ್ನು ನೀರಿಗೆ ಎಸೆಯುವಂತೆ ತಮ್ಮನಿಗೆ ಹೇಳಿದ್ದ. ನವೆಂಬರ್ 9ರಂದು ಅಲ್ ಫಲಾಹಾ ವಿಶ್ವವಿದ್ಯಾಲಯದಲ್ಲಿ ಉಮರ್ ತನ್ನ ಒಡನಾಡಿ ಬಂಧನದ ಸುದ್ದಿಯನ್ನು ಕೇಳಿದಾಗ ಜಹೂರ್ ಭಯಗೊಂಡು ಆ ಮೊಬೈಲ್​ ಅನ್ನು ತನ್ನ ಮನೆ ಬಳಿಯ ಕೊಳಕ್ಕೆ ಎಸೆದಿದ್ದ.

ತನಿಖಾ ಸಂಸ್ಥೆಗಳು ಉಮರ್​ನ ಎರಡೂ ಫೋನ್‌ಗಳನ್ನು ಪತ್ತೆಹಚ್ಚಲು ಪ್ರಯತ್ನಿಸಿದಾಗ, ಅವು ಸ್ವಿಚ್ ಆಫ್ ಆಗಿದ್ದವು. ಒಂದು ಫೋನ್‌ನ ಕೊನೆಯ ಸ್ಥಳ ದೆಹಲಿಯಲ್ಲಿ ಮತ್ತು ಇನ್ನೊಂದು ಫೋನ್ ಪುಲ್ವಾಮಾದಲ್ಲಿತ್ತು. ಜಮ್ಮು ಮತ್ತು ಕಾಶ್ಮೀರ ಪೊಲೀಸರು ಜಹೂರ್‌ನನ್ನು ವಿಚಾರಣೆ ನಡೆಸುತ್ತಿರುವಾಗ, ದೆಹಲಿಯಲ್ಲಿ ಆತ್ಮಹತ್ಯಾ ದಾಳಿ ಸಂಭವಿಸಿದೆ. ಸ್ವಲ್ಪ ಸಮಯದ ನಂತರ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಯಿತು.

ನೀರಿನಲ್ಲಿ ಫೋನ್ ಮುಳುಗಿದ್ದರಿಂದ ಹಾನಿಗೊಳಗಾಗಿತ್ತು, ಅದರ ಮದರ್‌ಬೋರ್ಡ್ ಕೂಡ ಅಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿತ್ತು. ಕೆಲವು ದಿನಗಳ ನಂತರ ಉಮರ್​ ವಿಡಿಯೋವನ್ನು ಪಡೆಯಲಾಯಿತು. ಈ ವಿಡಿಯೋವನ್ನು ಉಮರ್ ಏಪ್ರಿಲ್​​ನಲ್ಲಿ ರೆಕಾರ್ಡ್​ ಮಾಡಿದ್ದ. ಫೋನ್​ ಅನ್ನು ಎನ್​ಐಎಗೆ ಹಸ್ತಾಂತರಿಸಲಾಗಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *