ಬೆಂಗಳೂರು ಮಧ್ಯಾಹ್ನ ದರೋಡೆ: 7.11 ಕೋಟಿ ರೂ. ದೋಚಿದ ಗ್ಯಾಂಗ್.

ಬೆಂಗಳೂರು ಮಧ್ಯಾಹ್ನ ದರೋಡೆ: 7.11 ಕೋಟಿ ರೂ. ದೋಚಿದ ಗ್ಯಾಂಗ್.

ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹಾಡಹಗಲೇ ಬಹುದೊಡ್ಡ ದರೋಡೆ ಪ್ರಕರಣ ನಡೆದಿದೆ. ಸಿಎಂಎಸ್ ಕಂಪನಿಯ ವ್ಯಾನ್ ಅಡ್ಡಗಟ್ಟಿ ಹಣ ದರೋಡೆ ನಡೆದಿದ್ದು, ಈ ದರೋಡೆಯಿಂದ ನಗರದಲ್ಲಿ ಭೀತಿಯ ವಾತಾವರಣ ಸೃಷ್ಟಿಯಾಗಿದೆ.

 ಸುಮಾರು 7 ಕೋಟಿ 11 ಲಕ್ಷ ರೂಪಾಯಿ ಹಣ ಇದ್ದ ವಾಹನವನ್ನು ದೋಚಿಕೊಂಡು, ಅಶೋಕ್ ಪಿಲ್ಲರ್ ಬಳಿ ಹೈಜಾಕ್ ಮಾಡಿದ್ದು, ಬಳಿಕ ಹಣವಿದ್ದ ವಾಹನವನ್ನು ಜಯದೇವ ಡೈರಿ ಸರ್ಕಲ್​​​ ಫ್ಲೈಓವರ್ ಬಳಿ ನಿಲ್ಲಿಸಿದ್ದಾರೆ. ನಂತರ ದರೋಡೆಕೋರರು ಹಣವನ್ನು ತಮ್ಮ ಇನ್ನೋವಾ ಕಾರಿನಲ್ಲಿ ತುಂಬಿಕೊಂಡು ಪರಾರಿಯಾಗಿದ್ದಾರೆ. ಸ್ಥಳಕ್ಕೆ ಬೆರಳಚ್ಚುಗಾರರ, ಪೊಲೀಸರರು ದೌಡಾಯಿಸಿ ತನಿಖೆ ನಡೆಸಿದ್ದಾರೆ. ಇನ್ನು ಈ ದರೋಡೆ ಬಗ್ಗೆ ಪ್ರತ್ಯಕ್ಷದರ್ಶಿ ಹೇಳಿರುವುದನ್ನು ಕೇಳಿ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *