ಸಮಂತಾ ಋತ್ ಪ್ರಭು ಇತ್ತೀಚೆಗಷ್ಟೆ ನಿರ್ದೇಶಕ, ನಿರ್ಮಾಪಕ ರಾಜ್ ನಿಧಿಮೋರು ಜೊತೆಗೆ ವಿವಾಹವಾಗಿದ್ದಾರೆ. ಸಮಂತಾ ಹಾಗೂ ರಾಜ್ ಅವರು ಕೊಯಮತ್ತೂರಿನ ಇಶಾ ಯೋಗ ಸೆಂಟರ್ನಲ್ಲಿ ಸರಳವಾಗಿ ಮದುವೆ ಆಗಿದ್ದು, ಅತ್ಯಂತ ಆಪ್ತರು ಮತ್ತು ಕುಟುಂಬದ ಪ್ರಮುಖರು ಮಾತ್ರವೇ ಈ ಇಬ್ಬರ ಮದುವೆ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಇವರ ಮದುವೆ ಅತ್ಯಂತ ಸರಳವಾಗಿ ನಡೆದಿದೆ. ಸಾಮಾನ್ಯವಾಗಿ ಸ್ಟಾರ್ ನಟ-ನಟಿಯರ ಮದುವೆ, ಎರಡನೇ ಮದುವೆ ಸಹ ಬಲು ಅದ್ಧೂರಿಯಾಗಿ ನಡೆಯುತ್ತವೆ. ಆದರೆ ಸಮಂತಾ ಮತ್ತು ರಾಜ್ ಬಹಳ ಸರಳವಾಗಿ ಮದುವೆ ಮಾಡಿಕೊಂಡಿದ್ದಾರೆ.
ಸಮಂತಾರ ಆಪ್ತ ಗೆಳತಿ ಶಿಲ್ಪಾ ರೆಡ್ಡಿ ಸಹ ಮದುವೆಯಲ್ಲಿ ಪಾಲ್ಗೊಂಡಿದ್ದರು. ಮದುವೆಯ ಚಿತ್ರಗಳು ಮತ್ತು ಕೆಲ ಮಾಹಿತಿಯನ್ನು ಶಿಲ್ಪಾ ರೆಡ್ಡಿ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಬೆಳಿಗ್ಗೆ ಆರು ಗಂಟೆಗೆ ಸಮಂತಾ ಹಾಗೂ ರಾಜ್ ಅವರ ಮದುವೆ ಸಮಾರಂಭ ನಡೆದಿದೆ. ಇಶಾ ಯೋಗ ಸೆಂಟರ್ನಲ್ಲಿರುವ ಲಿಂಗ ಭೈರವಿ ದೇವಿಯ ಸಮ್ಮುಖದಲ್ಲಿ ಮದುವೆ ಸಮಾರಂಭ ನಡೆದಿದ್ದು, ಭೂತ ಶುದ್ಧಿ ಪದ್ಧತಿಯಲ್ಲಿ ಈ ಜೋಡಿಯ ವಿವಾಹ ನಡೆದಿದೆ.
ಮದುವೆ ಎಂದರೆ ಅಲ್ಲಿ ಊಟವೇ ಹೈಲೆಟ್. ಮದುವೆ ಊಟಕ್ಕೆ ಎಲ್ಲಿಲ್ಲದ ಪ್ರಾಶಸ್ತ್ಯ. ಆದರೆ ಸಮಂತಾ ಅವರ ಮದುವೆ ಊಟ ಅತ್ಯಂತ ಸರಳವಾಗಿತ್ತು. ಶಿಲ್ಪಾ ರೆಡ್ಡಿ, ಮದುವೆ ಊಟದ ಚಿತ್ರವನ್ನು ಹಂಚಿಕೊಂಡಿದ್ದು, ಅನ್ನ, ಬೇಳೆಯ ತೊವ್ವೆ ರೀತಿಯ ಸಾರು, ಬೆಂಡೆಕಾಯಿ ಪಲ್ಯ, ಪಾಯಸ, ಒಂದು ಸಣ್ಣ ರೊಟ್ಟಿ, ಒಂದು ಕಡಲೆ ವಡೆ, ಕೋಸಂಬರಿ, ಸಿಹಿಗುಂಬಳದ ಪಲ್ಯ, ಇವಿಷ್ಟೆ ಮದುವೆಯ ಊಟ. ಯಾವ ಅದ್ಧೂರಿ ಮೆನು ಇಲ್ಲದೆ ಅತ್ಯಂತ ಸರಳವಾದ ಊಟದೊಂದಿಗೆ ಮದುವೆ ಮುಗಿಸಿದ್ದಾರೆ ಸಮಂತಾ ಮತ್ತು ರಾಜ್.
For More Updates Join our WhatsApp Group :

