ನವದೆಹಲಿ : ದೆಹಲಿ-ಡೆಹ್ರಾಡೂನ್ ಎಕ್ಸ್ಪ್ರೆಸ್ ವೇಯಲ್ಲಿ ಪ್ರಾಯೋಗಿಕ ಸಂಚಾರ ಆರಂಭಗೊಂಡಿದೆ. ಆದರೆ ಸಂಚಾರಕ್ಕೆ ಮುಕ್ತವಾಗುತ್ತಿದ್ದಂತೆ ಈ ಮಾರ್ಗದಲ್ಲಿ ಮೊದಲು ಬಂದಿದ್ದೇ ಕಳ್ಳರು. ಯಾಕೆಂದರೆ ಎರಡೇ ದಿನಗಳಲ್ಲಿ ಅಲ್ಲಿದ್ದ ಡಿವೈಡರ್ ಮೇಲೆ ಹಾಕಿದ್ದ ಕಬ್ಬಿಣದ ಸರಳುಗಳು, ಬ್ಯಾರಿಕೇಡ್ಗಳು ಎಲ್ಲವೂ ನಾಪತ್ತೆಯಾಗಿವೆ. ಈ ಘಟನೆಯು ಪ್ರಯಾಣಿಕರು, ಸ್ಥಳೀಯ ನಿವಾಸಿಗಳು ಮತ್ತು ಅಧಿಕಾರಿಗಳನ್ನು ಆಘಾತಕ್ಕೀಡು ಮಾಡಿದೆ, ವಿಶೇಷವಾಗಿ ಎಕ್ಸ್ಪ್ರೆಸ್ವೇ ಔಪಚಾರಿಕ ಉದ್ಘಾಟನೆಯ ಸಮೀಪದಲ್ಲಿರುವ ಸಮಯದಲ್ಲಿ ಇದು ನಡೆದಿದ್ದು ಸ್ಥಳೀಯರು ಹಾಗೂ ಅಧಿಕಾರಿಗಳನ್ನು ಆತಂಕಕ್ಕೀಡು ಮಾಡಿದೆ.
ದೆಹಲಿ-ಡೆಹ್ರಾಡೂನ್ ಎಕ್ಸ್ಪ್ರೆಸ್ವೇ ರಾಷ್ಟ್ರ ರಾಜಧಾನಿ ಮತ್ತು ಡೆಹ್ರಾಡೂನ್ ನಡುವಿನ ಪ್ರಯಾಣದ ಸಮಯವನ್ನು ಕೇವಲ ಮೂರು ಗಂಟೆಗಳಿಗೆ ಇಳಿಸುವ ನಿರೀಕ್ಷೆಯಿದೆ. ಇದು ಜನರಲ್ಲಿ, ವಿಶೇಷವಾಗಿ ಕೆಲಸ, ಪ್ರವಾಸೋದ್ಯಮ ಅಥವಾ ವ್ಯವಹಾರಕ್ಕಾಗಿ ಎರಡು ನಗರಗಳ ನಡುವೆ ಆಗಾಗ್ಗೆ ಪ್ರಯಾಣಿಸುವವರಲ್ಲಿ ಸಂತಸವನ್ನುಂಟು ಮಾಡಿದೆ.
For More Updates Join our WhatsApp Group :
