ಸೇಲಂನಲ್ಲಿ 71 ವರ್ಷದ ಪ್ರಯಾಣಿಕನ ಜೀವ ಉಳಿಸಿದ ಸಬ್–ಇನ್‌ಸ್ಪೆಕ್ಟರ್
ಸೇಲಂ: ಚಲಿಸುತ್ತಿದ್ದ ರೈಲನ್ನು ಹತ್ತಲು ಹೋಗಿ ಬಿದ್ದ ವೃದ್ಧರನ್ನು ರೈಲ್ವೆ ಪೊಲೀಸ್ ಅಧಿಕಾರಿಯೊಬ್ಬರು ದೇವರಂತೆ ಬಂದು ಕಾಪಾಡಿರುವ ಘಟನೆ ಸೇಲಂನಲ್ಲಿ ನಡೆದಿದೆ. ಚಲಿಸುತ್ತಿದ್ದ ರೈಲನ್ನು ಹತ್ತಲು ಪ್ರಯತ್ನಿಸುತ್ತಿರುವಾಗ 71 ವರ್ಷದ ಪ್ರಯಾಣಿಕರೊಬ್ಬರು ಜಾರಿ ಬಿದ್ದಿದ್ದಾರೆ. ಜಾರಿಬಿದ್ದ. ಪ್ರಯಾಣಿಕರನ್ನು ಸುರಕ್ಷಿತವಾಗಿ ರಕ್ಷಿಸಿದ ಆರ್‌ಪಿಎಫ್ ಸಬ್-ಇನ್‌ಸ್ಪೆಕ್ಟರ್ ಎನ್. ಪಳನಿ ಅವರ ತ್ವರಿತ ಕ್ರಮಕ್ಕೆ ಎಲ್ಲರೂ ಧನ್ಯವಾದ ಅರ್ಪಿಸಿದ್ದಾರೆ.
ನಿಮ್ಮ ಸುರಕ್ಷತೆ ಮುಖ್ಯ, ದಯವಿಟ್ಟು ಎಂದಿಗೂ ಚಲಿಸುತ್ತಿರುವ ರೈಲನ್ನು ಹತ್ತಲು ಪ್ರಯತ್ನಿಸಬೇಡಿ ಎಂದು ರೈಲ್ವೆ ಮನವಿ ಮಾಡಿದೆ. ಭಾರತೀಯ ರೈಲ್ವೆ ಕಾಯ್ದೆಯ ಸೆಕ್ಷನ್ 156 ರ ಪ್ರಕಾರ, ಚಲಿಸುತ್ತಿರುವ ರೈಲಿನಿಂದ ಹತ್ತಲು ಅಥವಾ ಇಳಿಯಲು ಪ್ರಯತ್ನಿಸುವವರಿಗೆ ಜೈಲು ಶಿಕ್ಷೆ ಅಥವಾ ದಂಡ ಅಥವಾ ಎರಡನ್ನೂ ವಿಧಿಸಬಹುದು.
For More Updates Join our WhatsApp Group :



