ಹುಬ್ಬಳ್ಳಿಯಲ್ಲಿ JCB ಆರ್ಭಟ: 47 ಮನೆಗಳ ತೆರವು!

ಹುಬ್ಬಳ್ಳಿಯಲ್ಲಿ JCB ಆರ್ಭಟ: 47 ಮನೆಗಳ ತೆರವು!

ಸಿಕಂದರ್ ಮಾರಾಟ ಮಾಡಿದ ಜಾಗ ನಕಲಿ.

ಹುಬ್ಬಳ್ಳಿ : ಹುಬ್ಬಳ್ಳಿಯಲ್ಲಿ ಇಂದು ಜೆಸಿಬಿ ಘರ್ಜನೆ ಮಾಡಿದೆ. ಅಕ್ರಮವಾಗಿ ಕಟ್ಟಿದ್ದ 47 ಮನೆಗಳನ್ನು ನೆಲಸಮ ಮಾಡಲಾಗಿದೆ. ಸುಪ್ರೀಂಕೋರ್ಟ್ ಆದೇಶ ಹಿನ್ನಲೆ, ಹುಬ್ಬಳ್ಳಿಯ ಉದಯನಗರದಲ್ಲಿರುವ ಮನೆಗಳ ತೆರವು ಮಾಡಲಾಗಿದೆ. ದಾಖಲಾತಿ ನೋಡದೆ ಮನೆ ಕಟ್ಟಿಕೊಂಡವರ ಬದುಕು ಇದೀಗ ಬೀದಿಗೆ ಬಂದಿದೆ. ಸಿಕಂದರ್​​ ಎಂಬ ವ್ಯಕ್ತಿ ತನ್ನದೇ ಭೂಮಿ ಎಂದು ಮಾರಾಟ ಮಾಡಿದ್ದ.

ಜಾಗಕ್ಕಾಗಿ ನಿವಾಸಿಗಳು ಸಾವಿರಾರು ರೂ. ಹಣ ನೀಡಿದ್ದರು. ಆದರೆ ಅದು ರಾಮರಾವ್ ಸಬನಿಸ್ ಎನ್ನುವವರಿಗೆ ಸೇರಿದ‌ ಜಾಗವಾಗಿದ್ದು, ಮೂಲ ದಾಖಲಾತಿ ಪರಿಶೀಲಿಸದೆ ಜನರು ಮೋಸ ಹೋಗಿದ್ದಾರೆ. ಇತ್ತ ಸುಪ್ರೀಂ ಕೋರ್ಟ್​ ರಾಮರಾವ್ ಪರ ತೀರ್ಪು ನೀಡಿದೆ. ಈ ಹಿನ್ನಲೆ ಪೊಲೀಸ್ ಬಂದೋಬಸ್ತ್​​ನಲ್ಲಿ ಮನೆಗಳ ತೆರವು ಮಾಡಲಾಗಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *