“1,000 ರೂ ವಾಚ್ ಕಟ್ಟುತ್ತೇನೆ, 10 ಲಕ್ಷ ರೂ ವಾಚ್ ಕಟ್ಟುತ್ತೇನೆ!” – ಡಿಕೆ ಶಿವಕುಮಾರ್ ಕಿಡಿಕಾರಿಕೆ
ಹಾಸನ : ರಾಜ್ಯ ರಾಜಕೀಯದಲ್ಲಿ ಸದ್ಯ ಕೈ ಗಡಿಯಾರದ ಜಟಾಪಟಿ ಜೋರಾಗಿದೆ. ಕಾರ್ಟಿಯರ್ ವಾಚ್ ಸದ್ಯ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಸಂಘರ್ಷ ಸೃಷ್ಟಿಸಿದೆ. ಈ ವಿಚಾರವಾಗಿ ಇದೀಗ ಸ್ವತಃ ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದು, ನನಗೆ ಎಷ್ಟು ವಾಚ್ ಬೇಕಾದರೂ ಕಟ್ಟುವಷ್ಟು ಶಕ್ತಿ ಇದೆ. ನಾನು ಒಂದು ಸಾವಿರ ರೂ ವಾಚ್ ಕಟುತ್ತೇನೆ, 10 ಲಕ್ಷ ರೂ ವಾಚ್ ಕಟುತ್ತೇನೆ. ಅದು ನನ್ನ ಸಂಪಾದನೆಯ ಆಸ್ತಿ. ನನ್ನ ವ್ಯವಹಾರ ಏನು, ನನ್ನ ಬದುಕು ಏನೆಂದು ಬಿಜೆಪಿಯವರಿಗೆ ಗೊತ್ತಿದೆ ಎಂದು ಕಿಡಿಕಾರಿದ್ದಾರೆ.
ಅದು ಅವರವರ ವೈಯಕ್ತಿಕ ವಿಚಾರ ಎಂದ ಡಿಕೆ ಶಿವಕುಮಾರ್
ನಗರದಲ್ಲಿ ನಡೆದ ಸರ್ಕಾರದ ಸೇವೆಗಳ ಸಮರ್ಪಣಾ ಸಮಾವೇಶ ಕಾರ್ಯಕ್ರಮದಲ್ಲಿ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ಯಾರು ಪ್ಯಾಂಟ್ ಹಾಕುತ್ತಾರೆ, ವಾಚ್ ಕಟ್ಟುತ್ತಾರೆ, ಕನ್ನಡಕ ಹಾಕುತ್ತಾರೆ ಅದನ್ನು ಕೇಳೋಕೆ ಬರಲ್ಲ, ಅದು ಅವರವರ ವೈಯಕ್ತಿಕ ವಿಚಾರ. ಕೆಲವರು ಸಾವಿರ ರೂಪಾಯಿ ಮೌಲ್ಯದ ಶೂ ಹಾಕಿಕೊಳ್ಳುತ್ತಾರೆ. ಮತ್ತೆ ಕೆಲವರು ಒಂದು ಲಕ್ಷ ರೂ ಮೌಲ್ಯದ ಶೂ ಹಾಕಿಕೊಳ್ಳುತ್ತಾರೆ ಎಂದಿದ್ದಾರೆ.
ಇಡಿ ನೋಟಿಸ್ ವಿಚಾರವಾಗಿ ಮಾತನಾಡಿದ ಅವರು, ನೋಟಿಸ್ ಓದಿದ್ದೇನೆ, ಲಾಯರ್ ಜತೆ ಚರ್ಚಿಸಿ ವಿಚಾರಣೆಗೆ ಹೋಗುವೆ. ನೋಟಿಸ್ ನೀಡೋದು ಏನಿತ್ತು, ಪಕ್ಷಕ್ಕೆ ಹಣ ಕೊಡದೆ ಯಾರಿಗೆ ಕೊಡೋಣ ಎಂದು ಹೇಳಿದ್ದಾರೆ.
For More Updates Join our WhatsApp Group :
