ವಿಧಾನಸೌಧದ ಮುಂದೆ 75ಕ್ಕೂ ಹೆಚ್ಚು ವಿಂಟೇಜ್ ಕಾರು–ಬೈಕ್ ಪ್ರದರ್ಶನ.
ಬೆಂಗಳೂರು : ಬೆಂಗಳೂರು ಪೊಲೀಸರು ನಿರಂತರವಾಗಿ ಡ್ರಗ್ಸ್ ವಿರುದ್ಧ ಸಮರ ಸಾರಿದ್ದು, ದಾಖಲೆ ಪ್ರಮಾಣದಲ್ಲಿ ಸೀಜ್ ಮಾಡಿ ಪೆಡ್ಲರ್ ಗಳ ಜೈಲಿಗಟ್ಟಿದ್ದಾರೆ. ಆಗಾಗ್ಗೆ ವಿಭಿನ್ನವಾಗಿ ಜಾಗೃತಿ ಮೂಡಿಸ್ತಿರುವ ಪೊಲೀಸ್ರು ಡಿ.07 ರಂದು ವಿಂಟೇಜ್ ಕಾರುಗಳ ರ್ಯಾಲಿ ಮೂಲಕ ಯುವಕರಿಗೆ ಜಾಗೃತಿ ಮೂಡಿಸಿದರು.ಈ ವಿನೂತನ ಜಾಗೃತಿ ಕಾರ್ಯಕ್ರಮಕ್ಕೆ ವಿಧಾನಸೌಧದ ಮೆಟ್ಟಿಲುಗಳ ಮುಂಭಾಗದಲ್ಲಿ ಗೃಹ ಸಚಿವ ಪರಮೇಶ್ವರ್ ಚಾಲನೆ ನೀಡಿದರು.
ಮಾದಕ ವಸ್ತುಗಳ ಬಳಕೆಯು ಯುವ ಸಮೂಹದಲ್ಲಿ ಹೆಚ್ಚಾಗ್ತಿದೆ. ಈ ಹಿನ್ನೆಲೆ ಮಾದಕ ವ್ಯಸನದಿಂದ ಆಗುವ ಪರಿಣಾಮಗಳ ಕುರಿತು ವೆರೈಟಿ ವೆರೈಟಿ ವಿಂಟೇಜ್ ಕಾರುಗಳ ರ್ಯಾಲಿ ಮಾಡಿದ್ದು, ಆಂಬ್ಯಾಸಿಡರ್, ಆಸ್ಟಿನ್, ಬೀಟಲ್, ಫಿಯೆಟ್, ಮರ್ಸಿಡಿಸ್ ಬೆನ್ಜ್, ಮಿನಿಕೂಪರ್, ಫ್ಲೀಟ್ ಮಾಸ್ಟರ್, ಫೋರ್ಡ್, ರೋಡ್ ರೋಸ್ಟರ್, ಜಾವಾ ಮೋಟರ್ ಬೈಕ್,ರಾಯಲ್ ಎನ್‌ಫೀಲ್ಡ್ ಸೇರಿದಂತೆ 75 ಕ್ಕೂ ಹೆಚ್ಚು ಗಾಡಿಗಳು ರಸ್ತೆಯಲ್ಲಿ ರ್ಯಾಲಿ ನಡೆಸಿದವು.
ಮಾದಕ ವಸ್ತು ಮುಕ್ತ ಕರ್ನಾಟಕ ಅನ್ನೋ ಟ್ಯಾಗ್ ಲೈನ್ ಮೂಲಕ ಬೆಂಗಳೂರು ನಗರ ಪೊಲೀಸ್ ಇಲಾಖೆ ಮತ್ತು ಫೆಡರೇಷನ್ ಆಫ್ ಹಿಸ್ಟೋರಿಕ್ ವೆಹಿಕಲ್ಸ್ ಆಫ್ ಇಂಡಿಯಾ ಸಹಯೋಗದಲ್ಲಿ ನಿನ್ನೆ ಬೆಳಗ್ಗೆ ವಿಂಟೇಜ್ ಕಾರ್ ರ‍್ಯಾಲಿ ಅಭಿಯಾನದಲ್ಲಿ ಸೇ ನೋ ಟು ಡ್ರಗ್ ಜಾಗೃತಿ ಮೂಡಿಸಲಾಯಿತು.
For More Updates Join our WhatsApp Group :




