ರೇಣುಕಾಸ್ವಾಮಿ ಸಮಾಧಿ ನಾಮಫಲಕ ಧ್ವಂಸ : ಚಿತ್ರದುರ್ಗದಲ್ಲಿ ಹೊಸಸಂಚಲನ!
ಚಿತ್ರದುರ್ಗ: ರೇಣುಕಾಸ್ವಾಮಿ ಹತ್ಯೆ ಕೇಸ್ ವಿಚಾರವಾಗಿ ಪ್ರಮುಖ ಆರೋಪಿಗಳಾದ ನಟದರ್ಶನ್, ಪವಿತ್ರಾ ಸೇರಿ ಗ್ಯಾಂಗ್ ಜೈಲು ಸೇರಿರುವ ನಡುವೆ ಇತ್ತ ಚಿತ್ರದುರ್ಗದಲ್ಲಿರುವ ರೇಣುಕಾಸ್ವಾಮಿ ಸಮಾಧಿಯ ನಾಮಫಲಕ ಧ್ವಂಸಗೊಳಿಸಿರುವ ಘಟನೆ ನಡೆದಿದೆ.
ರುದ್ರಭೂಮಿ ಬಳಿ ಲೇಔಟ್ ನಿರ್ಮಾಣ ಮಾಡುವ ವೇಳೆ ಸಮಾಧಿಗೆ ಧಕ್ಕೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಇನ್ನು ಈ ಬಗ್ಗೆ ತಮಗೆ ಮಾಹಿತಿ ಇಲ್ಲ ಎಂದು ರೇಣುಕಾಸ್ವಾಮಿ ಕುಟುಂಬಸ್ಥರು ತಿಳಿಸಿದ್ದಾರೆ. ನಟ ದರ್ಶನ್ ಸ್ನೇಹಿತೆ ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದ್ದ ಕಾರಣ 2024ರ ಜೂನ್ ತಿಂಗಳಿನಲ್ಲಿ ರೇಣುಕಾಸ್ವಾಮಿ ಹತ್ಯೆ ನಡೆದಿತ್ತು.
For More Updates Join our WhatsApp Group :https://chat.whatsapp.com/JVoHqE476Wn3pVh1gWNAcH




