ದರ್ಶನ್ ಜೈಲಿನಲ್ಲಿರುವಾಗಲೇ ಗನ್ ಲೈಸೆನ್ಸ್ ರದ್ದು.
ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ನಟ ದರ್ಶನ್ ಜೈಲು ಪಾಲಾಗಿದ್ದಾರೆ. ಹಲವು ತಿಂಗಳಿಂದ ಅವರು ಜೈಲಿನಲ್ಲೇ ವಾಸವಿದ್ದಾರೆ. ಇತ್ತೀಚೆಗೆ ಅವರು ಸಹ ಕೈದಿಗಳ ಮೇಲೆ ಹ* ಮಾಡಿತ್ತು. ಇದಾದ ಬೆನ್ನಲ್ಲೇ ದರ್ಶನ್ ಸಂಬಂಧಿತ ಮತ್ತೊಂದು ಸ್ಟೋಟಕ ಲಭ್ಯವಾಗಿದೆ. ಇದು ದರ್ಶನ್ ಬಳಿ ಇದ್ದ ಗನ್ ವಿಷಯಕ್ಕೆ ಸಂಬಂಧಿಸಿದ್ದಾಗಿದೆ.
ಕೊಲೆ ಕೇಸ್ ನಲ್ಲಿ ದರ್ಶನ್ ಪರಪ್ಪನ ಅಗ್ರಹಾರ ಜೈಲ್ನಲ್ಲಿ ಇದ್ದಾರೆ. ಸಾಮಾನ್ಯವಾಗಿ ಕೊಲೆ ಕೇಸ್ನಲ್ಲಿ ಯಾರಾದರೂ ಆರೋಪಿ ಆದರೆ, ಅವರ ಬಳಿ ಇರೋ ಗನ್ ಲೈಸೆನ್ಸ್ ರದ್ದು ಮಾಡಬೇಕು ಎಂಬುದು ನಿಯಮ. ಈ ನಿಯಮವನ್ನು ಬೆಂಗಳೂರು ಪೊಲೀಸರು ಪಾಲಿಸಿದ್ದಾರೆ. ಕಳೆದ ವರ್ಷ ಡಿ.24ರಂದೇ ದರ್ಶನ್ ಪಿಸ್ತೂಲ್ ಲೈಸೆನ್ಸ್ ರದ್ದು ಮಾಡಲಾಗಿತ್ತು. ಆ ಬಳಿಕ ಈ ವರ್ಷ ಜನವರಿ 22ರಂದು ದರ್ಶನ್ ಅಪಾರ್ಟದ ಮೆಂಟ್ನಲ್ಲಿ .32 ಎಂಎಂ ಪಿಸ್ತೂಲ್ ಸೀಜ್ ಮಾಡಲಾಗಿತ್ತು.
ಪೊಲೀಸರು ಗಂಭೀರವಾಗಿ ಪರಿಗಣಿಸದ ಮತ್ತೊಂದು ವಿಷಯವೂ ಇದೆ. ದರ್ಶನ್ ಬಳಿ ಪಿಸ್ತೂಲ್ ಮಾತ್ರವಲ್ಲ. ಅವರ ಬಳಿ .22 mm ರೈಫಲ್ ಹಾಗೂ ಬುಲೆಟ್ಸ್ ಇದೆ . ಇದನ್ನು ಅವರು ಮೈಸೂರಿನ ಫಾರ್ಮ್ ಹೌಸ್ ಅಥವಾ ಬೆಂಗಳೂರಿನ ಮನೆಯಲ್ಲಿ ಬಚ್ಚಿಟ್ಟಿರೋ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಮೈಸೂರು ಗ್ರಾಮಾಂತರ ಪೊಲೀಸರು ದರ್ಶನ್ಗೆ ಈ ರೈಫಲ್ ಪಡೆಯಲು ಪರವಾನಗಿ ನೀಡಿದ್ದರು. ಸಾಮಾನ್ಯವಾಗಿ ಕೊಲೆ ಆರೋಪಿ ಬಳಿ ಯಾವುದೇ ಹ್ಯಾಂಡ್ ಗನ್ ಇರಬಾರದು. ಆರೋಪಿ ಆಗುತ್ತಿದ್ದಂತೆ ಆ ಗನ್ ಸೀಜ್ ಮಾಡಬೇಕು. ಅದಾಗದಿದ್ದಲ್ಲಿ ಆರೋಪಿಯೇ ಪೊಲೀಸರ ವಶಕ್ಕೆ ಗನ್ನ ನೀಡಬೇಕು.
For More Updates Join our WhatsApp Group :




