ಬೆಂಗಳೂರು ಸುಂದರ ನಗರ, ಆದರೆ ಟ್ರಾಫಿಕ್ ತೊಂದರೆ ಅಸಮಾಧಾನ
ಬೆಂಗಳೂರು : ಜಪಾನಿನ ಉದ್ಯಮಿ ಒಬ್ಬರು ಬೆಂಗಳೂರನ್ನು ಹಾಡಿಹೋಗಳಿದ್ದಾರೆ. ಬಿಯಾಂಡ್ ನೆಕ್ಸ್ಟ್ ವೆಂಚರ್ಸ್ನ ಸಿಇಒ ಮತ್ತು ಸಹ-ಸಂಸ್ಥಾಪಕ ಜಪಾನಿನ ಉದ್ಯಮಿ ತ್ಸುಯೋಶಿ ಇಟೊ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಪೋಸ್ಟ್ ಭಾರೀ ವೈರಲ್ ಆಗಿದೆ. ನಗರದ ಟ್ರಾಫಿಕ್ ಬಗ್ಗೆಯೂ ಪ್ರಮಾಣಿಕವಾಗಿ ಹೇಳಿದ್ದಾರೆ. ಲಿಂಕ್ಡ್ಇನ್ನ್ಲಿ ಈ ಪೋಸ್ಟ್ನ್ನು ಹಂಚಿಕೊಂಡಿದ್ದು, ಬೆಂಗಳೂರು ಎಲ್ಲದರಲ್ಲೂ ಸೂಪರ್ ಆಗಿದೆ. ಆದರೆ ಈ ಬಗ್ಗೆ ಮಾತ್ರ ಅಸಮಾಧಾನ ಇದೆ ಎಂದು ಪೋಸ್ಟ್ನಲ್ಲಿ ಹೇಳಿಕೊಂಡಿದ್ದಾರೆ. ಇವರ ಈ ಪೋಸ್ಟ್ ನೆಟ್ಟಿಗರನ್ನು ಗಮನಸೆಳೆದಿದೆ. ಈ ಪೋಸ್ಟ್ನಲ್ಲಿ ಜಪಾನಿನ ವಾತಾವರಣಕ್ಕೂ ಬೆಂಗಳೂರಿನ ವಾತಾವರಣಕ್ಕೂ ಹೋಲಿಕೆ ಮಾಡಿದ್ದಾರೆ.
ಅವರು ತಮ್ಮ ಪೋಸ್ಟ್ನಲ್ಲಿ ಬೆಂಗಳೂರು ವಿಶ್ವದ ಅತ್ಯುತ್ತಮ ನಗರ ಎಂದು ಹೇಳಿದ್ದಾರೆ. ಅಲ್ಲಿ ವಾಸಿಸಿದ ನಂತರವೇ ನಗರದ ಮೋಡಿ ಸ್ಪಷ್ಟವಾಗುತ್ತದೆ. ಅಲ್ಲಿನ ಹವಾಮಾನ ತುಂಬಾ ಕೂಲ್ ಹಾಗು ಸುಂದರ. ವರ್ಷಪೂರ್ತಿ ಸೌಮ್ಯವಾದ ತಾಪಮಾನ ಮತ್ತು ಶುಷ್ಕ, ಆಹ್ಲಾದಕರ ಗಾಳಿ ಅಲ್ಲಿನ ಆಕರ್ಷಣೆ ಎಂದು ಹೇಳಿದ್ದಾರೆ . ಇವರು ಜಪಾನಿನ ವೃತ್ತಿಪರರನ್ನು ಭಾರತಕ್ಕೆ ಬರುವಂತೆ ಹೇಳುವ ಪೋಸ್ಟ್ಗಳನ್ನು ಆಗ್ಗಾಗೆ ಹಂಚಿಕೊಳ್ಳುತ್ತಾರೆ. ಬೆಂಗಳೂರು “ಸಾಗರವಿಲ್ಲದ ಹವಾಯಿ ದ್ವೀಪ” ದಂತೆ ಎಂದು ಹೇಳಿದ್ದಾರೆ. ಆದರೆ ಜಪಾನ್ ರೆಸಾರ್ಟ್ ತರಹದ ಹವಾಮಾನ ಹೊಂದಿದೆ ಎಂದು ಬೆಂಗಳೂರು ಹಾಗೂ ಜಪಾನ್ನ ಹವಾಮಾನವನ್ನು ಹೊಲಿಕೆ ಮಾಡಿದ್ದಾರೆ.
ಆದರೆ ಬೆಂಗಳೂರಿನಲ್ಲಿ ಒಂದು ನ್ಯೂನತೆ ಇದೆ, ಅದುವೆ ವಾಹನ ದಟ್ಟಣೆ, ಬೆಂಗಳೂರಿನಲ್ಲಿ ಟ್ರಾಫಿಕ್ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವಂತಿಲ್ಲ, ಇಂದಿಗೂ ಆ ಒಂದು ವಿಚಾರದಲ್ಲಿ ಅಸಮಾಧಾನ ಇದೆ. ಇಷ್ಟು ದೊಡ್ಡ ಹಾಗೂ ಸುಂದರ ನಗರದಲ್ಲಿ ವಾಹನ ದಟ್ಟಣೆ ಆಗಬಾರದು ಎಂದು ಹೇಳಿದ್ದಾರೆ. ಅವರು ಬೆಂಗಳೂರಿಗೆ ಬಂದ ನಂತರ ಸ್ಥಳೀಯ ಜೀವನವನ್ನು ಸಂಪೂರ್ಣವಾಗಿ ಅಳವಡಿಸಿಕೊಳ್ಳಲು ಮಾರುತಿ ಸುಜುಕಿಯನ್ನು ಖರೀದಿಸಿ ಬೆಂಗಳೂರಿನ ನಗರಗಳಲ್ಲಿ ಓಡಾಡಿದ್ದಾರೆ. ಟ್ರಾಫಿಕ್, ರಸ್ತೆಗಳು, ವಾಹನ ಸಂಚಾರ ವ್ಯವಸ್ಥೆ, ಅದರಲ್ಲೂ ಕರ್ಕಶ ಹಾರ್ನ್ಗಳಿಂದ ಬೆಂಗಳೂರಿನ ಸೌಂದರ್ಯವನ್ನು ಹಾಳು ಮಾಡಿದೆ ಎಂದು ಹೇಳಿದ್ದಾರೆ.
For More Updates Join our WhatsApp Group :




