ಅಬಕಾರಿ ಇಲಾಖೆಗೆ ಭಾರೀ ಲಾಸ್.
ಚಾಮರಾಜನಗರ : ಹೊಸ ವರ್ಷವನ್ನು ಜೋಶ್ನಿಂದ ಸ್ವಾಗತಿಸಲು ಲಕ್ಷಾಂತರ ಮಂದಿ ಈಗಾಗಲೇ ತಯಾರಿ ಮಾಡಿಕೊಂಡಿರುತ್ತಾರೆ. ಗುಂಡು, ತುಂಡು , ಡಿಜೆ , ಪಬ್ಬು ಎಂದೆಲ್ಲಾ ಭರ್ಜರಿ ಪ್ಲಾನಿಂಗ್ ಮಾಡಿಕೊಂಡಿರುತ್ತಾರೆ. ಆದರೆ ಸರ್ಕಾರ ಮದ್ಯದ ದರ ಹೆಚ್ಚಿಸಿರುವುದರಿಂದ ಈ ಬಾರಿ ಚಾಮರಾಜನಗರದಲ್ಲಿ ಮದ್ಯ ಮಾರಾಟ ಭಾರೀ ಕುಂಠಿತ ಕಂಡಿದೆ. ಜಿಲ್ಲೆಯಲ್ಲಿ ಮೊದಲು ನೀರಿನಂತೆ ಮಾರಾಟವಾಗುತ್ತಿದ್ದ ಬಿಯರ್ ಅನ್ನು ಈಗ ಜನ ತಿರುಗಿಯೂ ನೋಡುತ್ತಿಲ್ಲ.
ಬಿಯರ್ ಕಡೆ ಜನ ಮುಖಾನೂ ಹಾಕ್ತಿಲ್ಲ
ರಾಜ್ಯದಲ್ಲಿ ಕಡಿಮೆ ಬೆಲೆಗೆ ಅತಿ ಹೆಚ್ಚು ಬಿಯರ್ ಮಾರಾಟವಾಗುವ ಜಿಲ್ಲೆಗಳಲ್ಲಿ ಚಾಮರಾಜನಗರ 2ನೇ ಸ್ಥಾನ ಪಡೆದಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಚಾಮರಾಜನಗರ ಚೀಪರ್ ಬಿಯರ್ ಮಾರಾಟದಲ್ಲಿ ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆಯಲಿದೆ ಎಂದು ಅಂದಾಜಿಸಲಾಗಿತ್ತು. ಇದೀಗ ಈ ಅಂದಾಜಿಗೆ ತೆರೆ ಬಿದ್ದಿದೆ. ರಾಜ್ಯಸರ್ಕಾರ ಮದ್ಯದ ದರ ಹೆಚ್ಚಿಸಿದ್ದು, ಅಬಕಾರಿ ಇಲಾಖೆ ಭಾರೀ ನಷ್ಟಕ್ಕೆ ಗುರಿಯಾಗಿದೆ. ಮೊದಲೆಲ್ಲಾ ಜಿಲ್ಲೆಯಲ್ಲಿ ನೀರಿನ ಬಾಟೆಲ್ಗಳ ರೀತಿಯಲ್ಲಿ ಬಿಯರ್ ಸೇಲ್ ಆಗುತ್ತಿದ್ದರೆ, ದರ ಏರಿಕೆಯ ಬಳಿಕ ಮದ್ಯದಂಗಡಿ ಕಡೆ ಜನ ಮುಖವನ್ನೂ ಹಾಕುತ್ತಿಲ್ಲ. ರಾಜ್ಯ ಸರ್ಕಾಯ ಅಬಕಾರಿ ಇಲಾಖೆಯ ಮೇಲೆ ಅತಿ ಹೆಚ್ಚು ಸುಂಕ ವಿಧಿಸಲು ಶುರು ಮಾಡಿದಾಗ, ದರ ಹೆಚ್ಚಳದಿಂದ ಜನ ಮದ್ಯಪಾನ ಮಾಡುವುದನ್ನೇ ಕೈ ಬಿಟ್ಟಿದ್ದಾರೆ ಎಂದು ಅಬಕಾರಿ ಇನ್ಸ್ಪೆಕ್ಟರ್ ತನ್ವೀರ್ ಹೇಳಿದ್ದಾರೆ.
For More Updates Join our WhatsApp Group :




