ನಾಲಿಗೆಯ ಬಣ್ಣವೇ ಹೇಳುತ್ತದೆ ನಿಮ್ಮ ಆರೋಗ್ಯದ ರಹಸ್ಯ..
ಆರೋಗ್ಯ ಸಮಸ್ಯೆ ಎಂದು ಆಸ್ಪತ್ರೆಗೆ ಹೋದರೆ, ವೈದ್ಯರು ಮೊದಲು ನಾಲಿಗೆ ತೋರಿಸಲು ಹೇಳುತ್ತಾರೆ. ಆದರೆ ನಮ್ಮ ಆರೋಗ್ಯಕ್ಕೂ ಇದಕ್ಕೂ ಏನು ಸಂಬಂಧ ಎಂದು ಎಂದಾದರೂ ಯೋಚಿಸಿದ್ದೀರಾ… ಏಕೆಂದರೆ ನಾಲಿಗೆ ಆರೋಗ್ಯಕ್ಕೆ ಹಿಡಿದ ಕೈ ಗನ್ನಡಿಯಂತೆ ಕಾರ್ಯನಿರ್ವಹಿಸುತ್ತದೆ, ನಮ್ಮ ದೇಹದ ಆಂತರಿಕ ಆರೋಗ್ಯ ಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ. ಸಾಮಾನ್ಯವಾಗಿ, ಆರೋಗ್ಯಕರ ನಾಲಿಗೆ ಗುಲಾಬಿ ಬಣ್ಣದಲ್ಲಿದ್ದು ಸ್ವಲ್ಪ ತೇವವಾಗಿರುತ್ತದೆ. ಈ ಬಣ್ಣದಲ್ಲಿನ ಸ್ವಲ್ಪ ಬದಲಾವಣೆ ಕೂಡ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಸೂಚಿಸಬಹುದಾಗಿದೆ. ಹಾಗಾದರೆ ಯಾವ ಬಣ್ಣ ಯಾವ ರೋಗವನ್ನು ಪ್ರತಿಬಿಂಬಿಸುತ್ತದೆ ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಯಾವ ಬಣ್ಣವು ಯಾವ ರೋಗವನ್ನು ಹೇಳುತ್ತದೆ?
ಬಿಳಿ ಲೇಪನ: ನಾಲಿಗೆಯ ಮೇಲೆ ಬಿಳಿ ಪದರ ರೂಪುಗೊಂಡಿದ್ದರೆ, ಅದು ಬ್ಯಾಕ್ಟೀರಿಯಾದ ಸೋಂಕು ಅಥವಾ ಬಾಯಿಯ ಸ್ವಚ್ಛವಾಗಿಲ್ಲ ಎಂಬುದನ್ನು ಸೂಚಿಸುತ್ತದೆ. ಇದು ಸಾಮಾನ್ಯವಾಗಿ ಮಕ್ಕಳು, ವೃದ್ಧರು ಮತ್ತು ಮಧುಮೇಹ ಅಥವಾ ಉಸಿರಾಟದ ಸಂಬಂಧಿ ಕಾಯಿಲೆ ಇರುವವರಲ್ಲಿ ಕಂಡುಬರುತ್ತದೆ.
ಕೆಂಪು ನಾಲಿಗೆ: ನಾಲಿಗೆ ತುಂಬಾ ಕೆಂಪಗಾಗಿದ್ದರೆ, ಅದು ದೇಹದಲ್ಲಿ ವಿಟಮಿನ್ ಬಿ -12 ಕೊರತೆ ಅಥವಾ ತೀವ್ರ ಜ್ವರವನ್ನು ಸೂಚಿಸುತ್ತದೆ.
ಹಳದಿ ಬಣ್ಣ: ನಾಲಿಗೆ ಹಳದಿ ಬಣ್ಣಕ್ಕೆ ತಿರುಗಿದರೆ, ಅದು ಕಾಮಾಲೆ ಅಥವಾ ಮಧುಮೇಹದ ಆರಂಭಿಕ ಲಕ್ಷಣವಾಗಿರಬಹುದು. ಬಾಯಿ ಸ್ವಚ್ಛವಾಗಿಲ್ಲದಿರುವುದು ಕೂಡ ಇದಕ್ಕೆ ಕಾರಣವಾಗಬಹುದು.
ನೇರಳೆ ಬಣ್ಣ: ನಾಲಿಗೆ ನೇರಳೆ ಬಣ್ಣದಲ್ಲಿ ಕಾಣಿಸಿಕೊಂಡರೆ, ಅದು ಹೃದಯ ಸಂಬಂಧಿತ ಸಮಸ್ಯೆ ಅಥವಾ ದೇಹದಲ್ಲಿ ರಕ್ತ ಪರಿಚಲನೆ ಸರಿಯಾಗಿ ಆಗುತ್ತಿಲ್ಲ ಎಂಬುದನ್ನು ಹೇಳುತ್ತದೆ.
ಗಾಢ ಅಥವಾ ಕಪ್ಪು ಬಣ್ಣ: ತೀವ್ರವಾದ ಬ್ಯಾಕ್ಟೀರಿಯಾದ ಸೋಂಕಿನ ಸಂದರ್ಭಗಳಲ್ಲಿ ಅಥವಾ ಧೂಮಪಾನ ಅಥವಾ ಮಾದಕ ದ್ರವ್ಯ ಸೇವನೆಯ ಅಭ್ಯಾಸ ಹೊಂದಿರುವವರಲ್ಲಿ ನಾಲಿಗೆ ಗಾಢ ಬಣ್ಣಕ್ಕೆ ತಿರುಗುತ್ತದೆ.
ಕಂದು ಬಣ್ಣ: ನಾಲಿಗೆ ಕಂದು ಬಣ್ಣದಲ್ಲಿದ್ದರೆ, ಅದು ದೇಹದಲ್ಲಿ ಕಬ್ಬಿಣ ಅಂಶದ ಕೊರತೆಯನ್ನು ಸೂಚಿಸುತ್ತದೆ.
ಕಿತ್ತಳೆ ಬಣ್ಣ: ಒಣ ಬಾಯಿ ಅಥವಾ ಕಳಪೆ ನೈರ್ಮಲ್ಯದಿಂದಾಗಿ ನಾಲಿಗೆಯ ಮೇಲೆ ಕಿತ್ತಳೆ ಬಣ್ಣ ಕಾಣಿಸಿಕೊಳ್ಳಬಹುದು.
ಯಾವಾಗ ವೈದ್ಯರನ್ನು ಸಂಪರ್ಕಿಸಬೇಕು?
- ನಾಲಿಗೆಯ ಬಣ್ಣದಲ್ಲಿನ ಬದಲಾವಣೆಯು ಎರಡು ವಾರಗಳಿಗಿಂತ ಹೆಚ್ಚು ಕಾಲ ಕಂಡುಬರುವುದು.
- ಬಣ್ಣ ಬದಲಾವಣೆಯೊಂದಿಗೆ ಜ್ವರ, ಗಂಟಲು ನೋವು ಅಥವಾ ಹೊಟ್ಟೆ ನೋವು.
- ನಾಲಿಗೆಯ ಮೇಲೆ ಅಸಾಮಾನ್ಯ ಕಲೆಗಳು ಅಥವಾ ನೋವು ಕಾಣಿಸಿಕೊಳ್ಳುವುದು.
ಜೀರ್ಣಕ್ರಿಯೆಯ ತೊಂದರೆಗಳು, ಅಧಿಕ ರಕ್ತದೊತ್ತಡ ಮತ್ತು ಕೆಲವು ರೀತಿಯ ಕ್ಯಾನ್ಸರ್ ಲಕ್ಷಣಗಳು ಸಹ ಆರಂಭದಲ್ಲಿ ನಾಲಿಗೆಯ ಮೇಲೆ ಕಾಣಿಸಿಕೊಳ್ಳುತ್ತವೆ. ಆದ್ದರಿಂದ, ಪ್ರತಿದಿನ ಹಲ್ಲುಜ್ಜುವಾಗ ನಾಲಿಗೆಯನ್ನು ಸ್ವಚ್ಛಗೊಳಿಸುವ ಅಭ್ಯಾಸವನ್ನು ಮಾಡಿಕೊಳ್ಳುವುದು ಒಳ್ಳೆಯದು. ಯಾವುದೇ ರೀತಿಯ ಬದಲಾವಣೆಗಳು ಕಂಡುಬಂದರೆ, ತಕ್ಷಣ ವೈದ್ಯರ ಸಲಹೆ ಪಡೆಯುವುದು ಉತ್ತಮ.
For More Updates Join our WhatsApp Group :




