ಲಾಂಗು–ಮಚ್ಚುಗಳಿಂದ ಭೀಕರ ದಾಳಿ
ಬೆಂಗಳೂರು : ಬೆಂಗಳೂರಿನ ಕತ್ರಿಗುಪ್ಪೆ ಪ್ರದೇಶದಲ್ಲಿ ಇಬ್ಬರು ಯುವಕರ ಮೇಲೆ ಲಾಂಗು ಮಚ್ಚುಗಳಿಂದ ಭೀಕರವಾಗಿ ಹಲ್ಲೆ ಮಾಡಲಾಗಿದೆ. ಭಾನುವಾರ ರಾತ್ರಿ 8:30ರ ಸುಮಾರಿಗೆ ಬಷೀರ್ ಮತ್ತು ಆತನ ಸ್ನೇಹಿತ ಟೀ ಅಂಗಡಿಯ ಬಳಿ ಇದ್ದಾಗ, ವೆಂಕಟೇಶ್ ಎಂಬಾತನ ನೇತೃತ್ವದ ಏಳರಿಂದ ಎಂಟು ಜನರ ಗ್ಯಾಂಗ್ ದಾಳಿ ನಡೆಸಿದೆ. ದಾಳಿಯಿಂದ ತಪ್ಪಿಸಿಕೊಳ್ಳಲು ಇಬ್ಬರೂ ಕಾರಿನಲ್ಲಿ ಅಡಗಿಕೊಂಡಿದ್ದಾರೆ. ಆದರೆ, ಗ್ಯಾಂಗ್ ಲಾಂಗು, ಮಚ್ಚು ಮತ್ತು ಕಲ್ಲುಗಳಿಂದ ಕಾರಿನ ಮೇಲೆ ಹಲ್ಲೆ ನಡೆಸಿದೆ. ನಂತರ ಯುವಕರು ಕಾರಿನಿಂದ ತಪ್ಪಿಸಿಕೊಂಡು ಮುಖ್ಯ ರಸ್ತೆಯಲ್ಲಿದ್ದ ಪಾನ್ ಅಂಗಡಿಯಲ್ಲಿ ಅಡಗಲು ಪ್ರಯತ್ನಿಸಿದ್ದಾರೆ. ದುಷ್ಕರ್ಮಿಗಳು ಪಾನ್ ಅಂಗಡಿಯ ಮೇಲೂ ದಾಳಿ ನಡೆಸಿ, ಗಾಜುಗಳನ್ನು ಪುಡಿ ಮಾಡಿ ದಾಂಧಲೆ ಎಬ್ಬಿಸಿದ್ದಾರೆ.
ಈ ಘಟನೆ ಬಷೀರ್ ಮತ್ತು ವೆಂಕಟೇಶ್ ನಡುವಿನ ಹಳೆಯ ದ್ವೇಷದ ಪರಿಣಾಮ ಎಂದು ತಿಳಿದುಬಂದಿದೆ. ಹಿಂದೆ ಈ ಕುರಿತು ದೂರು ಮತ್ತು ಪ್ರತಿದೂರು ಕೂಡ ದಾಖಲಾಗಿತ್ತು. ಘಟನೆಯಿಂದ ಏರಿಯಾದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದ್ದು, ಚೆನ್ನಮ್ಮನ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳ ಪತ್ತೆಗೆ ಪೊಲೀಸರು ಕಾರ್ಯಪ್ರವೃತ್ತರಾಗಿದ್ದಾರೆ.
For More Updates Join our WhatsApp Group :




