ಕಾರವಾರ: ಬ್ಯಾಂಕ್ ಆಫ್ ಬರೋಡಾ ಶಾಖೆಯಲ್ಲಿ ಖದೀಮರ ವಿಫಲ ಸಾಹಸ.
ಕಾರವಾರ : ಖದೀಮರು ಶೌಚಾಲಯದ ಗೋಡೆ ಕೊರೆದು ಬ್ಯಾಂಕ್ ದರೋಡೆಗೆ ಯತ್ನಿಸಿರುವಂತಹ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಸುಂಕಸಾಳ ಗ್ರಾಮದ ಬ್ಯಾಂಕ್ ಆಫ್ ಬರೋಡಾ ಶಾಖೆಯಲ್ಲಿ ನಡೆದಿದೆ. ಸದ್ಯ ಸ್ಥಳಕ್ಕೆ ಉತ್ತರ ಕನ್ನಡ ಎಸ್ಪಿ ದೀಪನ್ ಎಂ.ಎನ್ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಶ್ವಾನ ದಳ ಸೇರಿದಂತೆ ತಜ್ಞರ ತಂಡ ಕಾರ್ಯಾಚರಣೆ ಮಾಡಿದ್ದು, ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಷ್ಟ್ರೀಯ ಹೆದ್ದಾರಿ 63ರ ಪಕ್ಕದಲ್ಲೇ ಬ್ಯಾಂಕ್ ಆಫ್ ಬರೋಡಾ ಇದೆ. ಶೌಚಾಲಯ ಪ್ರದೇಶ ಬಿಟ್ಟು ಬೇರೆ ಕಡೆ ಸಿಸಿ ಕ್ಯಾಮರಾ ಇರುವುದನ್ನು ತಿಳಿದ ಖದೀಮರು ಶೌಚಾಲಯದ ಹಿಂಭಾಗದ ಗೋಡೆಯನ್ನು ಕೊರೆದು ಒಳಹೊಕ್ಕಿದ್ದಾರೆ. ಬ್ಯಾಕ್ನ ಸ್ಟ್ರಾಂಗ್ ರೂಮ್ ಗೋಡೆ ಒಡೆಯಲು ಯತ್ನಿಸಿದ್ದಾರೆ, ಆದರೆ ಸಾಧ್ಯವಾಗಿಲ್ಲ. ಹೀಗಾಗಿ ಕಳ್ಳರು ಖಾಲಿ ಕೈಯಲ್ಲಿ ಹಿಂತಿರುಗಿದ್ದಾರೆ.
ಐಷಾರಾಮಿ ಬೈಕ್ ಮನೆ ಮುಂದೆ ನಿಲ್ಲಿಸುವ ಮುನ್ನ ಎಚ್ಚರ: 4 ಲಕ್ಷ ರೂ ಮೌಲ್ಯದ ಬೈಕ್ ಕಳ್ಳತನ
ಮನೆ ಮುಂದೆ ನಿಲ್ಲಿಸಿದ್ದ ನಾಲ್ಕು ಲಕ್ಷ ರೂ ಬೆಲೆ ಬಾಳುವ ಡ್ಯೂಕ್ ಬೈಕ್ ಕಳ್ಳತನ ನಡೆದಿರುವಂತಹ ಘಟನೆ ನೆಲಮಂಗಲದ ಗಂಗಮ್ಮಗುಡಿ ಪೊಲೀಸ್ ಠಾಣಾ ವ್ಯಾಪ್ತಿಯ ಅಬ್ಬಿಗೆರೆಯಲ್ಲಿ ನಡೆದಿದೆ. ರಾಜೇಶ್ ಎಂಬುವವರಿಗೆ ಸೇರಿದ್ದ ಡ್ಯೂಕ್ ಬೈಕ್ ಕಳ್ಳತನವಾಗಿದೆ.
ರಾಜೇಶ್ ಇಂಜಿನಿಯರಿಂಗ್ ಮುಗಿಸಿ ಸ್ಟಾರ್ಟಪ್ ಕಂಪನಿ ನಡೆಸುತ್ತಿದ್ದಾರೆ. ಕೆಲಸ ಮಗಿಸಿ ಮನೆ ಮುಂದೆ ಡ್ಯೂಕ್ ಬೈಕ್ ನಿಲ್ಲಿಸಿದ್ದರು. ಬೆಳಿಗ್ಗೆ ಜಿಮ್ಗೆ ಹೋಗಲು ಹೊರ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಘಟನೆ ಸಂಬಂಧ ಬೆಂಗಳೂರು ವಾಯುವ್ಯ ವಿಭಾಗ ಗಂಗಮ್ಮ ಗುಡಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಎಫ್ಐಆರ್ ದಾಖಲಾಗಿದೆ.
For More Updates Join our WhatsApp Group :




