ಸಿದ್ದಗಂಗಾ ಮಠದಲ್ಲಿ ಭಕ್ತರ ಮನಸೂರೆಗೊಂಡ ಅಪರೂಪದ ಚಿತ್ರ.
ತುಮಕೂರು: 8 ಸುಳಿಗರಿಗಳ ಬಳಸಿ 48 ಗಂಟೆಗಳ ನಿರಂತರ ಪ್ರಯತ್ನದಿಂದ ಶ್ರೀ ಸಿದ್ಧಗಂಗಾ ಮಠದ ಆವರಣದಲ್ಲಿ ಅರಳಿದ ಲಿಂಗೈಕ್ಯ ಶ್ರೀ ಶಿವಕುಮಾರ ಶ್ರೀಗಳ ಚಿತ್ರ ಭಕ್ತರನ್ನು ಆಕರ್ಷಿಸುತ್ತಿದೆ.
ಶ್ರೀ ಸಿದ್ದಗಂಗಾ ಮಠದಲ್ಲಿ ಲಿಂಗೈಕ್ಯ ಶ್ರೀ ಶಿವಕುಮಾರ ಶ್ರೀಗಳ 7ನೇ ವರ್ಷದ ಪುಣ್ಯಸ್ಮರಣೆ ಅದ್ದೂರಿಯಾಗಿ ಆಚರಣೆಯಾಗುತ್ತಿದೆ. ಪುಣ್ಯಸ್ಮರಣೆ ಪ್ರಯುಕ್ತ ತೆಂಗಿನಗರಿಯಲ್ಲಿ . ಶಿವಕುಮಾರ ಸ್ವಾಮೀಜಿಗಳ ಚಿತ್ರ ಅರಳಿದೆ. ಅಟವೀ ಶಿವಯೋಗಿ ಸ್ವಾಮಿಗಳ ಗದ್ದುಗೆ ಬಳಿ ತೆಂಗಿನ ಗರಿಯಲ್ಲಿ ಶ್ರೀಗಳ ಚಿತ್ರ ರಚನೆ ಮಾಡಲಾಗಿದೆ. ಶ್ರೀ ಮಠಕ್ಕೆ ಬಂದ ಭಕ್ತರ ಕಣ್ಮನ ಸೆಳೆಯುತ್ತಿದೆ ಈ ಚಿತ್ರ. ಸಿದ್ದಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಶ್ರೀಗಳನ್ನು ಕೂಡ ಸುಂದರ ಚಿತ್ರ ಗಮನ ಸೆಳೆದಿದೆ.ಕಲಾವಿದ ಮನು ಅವರಿಂದ ಈ ಸುಂದರ ಚಿತ್ರ ಮೂಡಿಬಂದಿದೆ. ಸಿದ್ದಗಂಗಾ ಮಠದಲ್ಲೇ ಈ ಹಿಂದೆ ವ್ಯಾಸಂಗ ಮಾಡಿದ್ದ ಮನು ಈ ಚಿತ್ರವನ್ನು ರಚಿಸಿದ್ದಾರೆ
For More Updates Join our WhatsApp Group :




