ಸಿದ್ದಗಂಗಾ ಮಠದಲ್ಲಿ 7ನೇ ವರ್ಷದ ಪುಣ್ಯ ಸ್ಮರಣೋತ್ಸವ.
ತುಮಕೂರು : ತುಮಕೂರಿನ ಕ್ಯಾತ್ಸಂದ್ರ ಸಮೀಪದ ಸಿದ್ದಗಂಗಾ ಮಠದಲ್ಲಿ, ಶಿವೈಕ್ಯ ಶ್ರೀ ಶಿವಕುಮಾರ ಸ್ವಾಮೀಜಿಗಳ 7ನೇ ವರ್ಷದ ಪುಣ್ಯಸ್ಮರಣೆ ಭಕ್ತಿಭಾವದಿಂದ ನಡೆಯುತ್ತಿದೆ.
ಬೆಳಗ್ಗೆಯಿಂದಲೇ ವಿಶೇಷ ಪೂಜೆ ಆರಂಭ 5 ಗಂಟೆಯಿಂದ ಗದ್ದುಗೆ ಬಳಿ ಧಾರ್ಮಿಕ ಕೈಂಕರ್ಯ ಪುಣ್ಯ ಸ್ಮರಣೋತ್ಸವದ ಅಂಗವಾಗಿ, ಶ್ರೀ ಶಿವಕುಮಾರ ಸ್ವಾಮೀಜಿಗಳ ಗದ್ದುಗೆಗೆಬೆಳಗಿನಜಾವ5 ಗಂಟೆಯಿಂದಲೇ ಅಭಿಷೇಕ ಹಾಗೂ ವಿಶೇಷ ಪೂಜೆಗಳು ಆರಂಭಗೊಂಡಿವೆ.
ಬಿಲ್ವಾರ್ಚನೆ ಸೇರಿ ವಿವಿಧ ಪೂಜಾ ವಿಧಿಗಳು ಗದ್ದುಗೆ ಬಳಿ
- ಮಹಾರುದ್ರಾಭಿಷೇಕ
- ರಾಜೋಪಚಾರ
- ಬಿಲ್ವಾರ್ಚನೆ
- ಇತರೆ ವಿಶೇಷ ಪೂಜಾ ಕೈಂಕರ್ಯಗಳು
ವಿಧಿವಿಧಾನವಾಗಿ ನೆರವೇರಿವೆ.
ವಿಶೇಷ ಪೂಜೆಯಲ್ಲಿ ಮಠಾಧ್ಯಕ್ಷರ ಭಾಗವಹಣೆ
ಕೆಲವೇ ಕ್ಷಣಗಳಲ್ಲಿ ಸಿದ್ದಗಂಗಾ ಮಠದ ಮಠಾಧ್ಯಕ್ಷ ಸಿದ್ದಲಿಂಗ ಶ್ರೀಗಳು ಗದ್ದುಗೆಗೆ ಆಗಮಿಸಿ, ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಭಕ್ತಿಭಾವದಿಂದ ಪುಣ್ಯಸ್ಮರಣೆ
ಸಿದ್ದಲಿಂಗ ಶ್ರೀಗಳೊಂದಿಗೆ ಹಲವು ಗುರುಹರ ಚರಣರು ಹಾಗೂ ಭಕ್ತರು ಪುಣ್ಯಸ್ಮರಣೋತ್ಸವದಲ್ಲಿ ಭಾಗಿಯಾಗಿ, ಶಿವಕುಮಾರ ಸ್ವಾಮೀಜಿಗಳಿಗೆ ಭಕ್ತಿ ನಮನ ಸಲ್ಲಿಸಿದರು.
For More Updates Join our WhatsApp Group :



