ತಕ್ಷಣದ ಸ್ಪಂದನೆ: ಆತ್ಮಹ*ಗೆ ಯತ್ನಿಸಿದ ಯುವತಿಯ ಜೀವ ರಕ್ಷಣೆ.
ಬೆಂಗಳೂರು: ಸಾಮಾನ್ಯವಾಗಿ ಪೊಲೀಸರು ಎಲ್ಲ ಮುಗಿದ ಮೇಲೆ ಘಟನಾ ಸ್ಥಳಕ್ಕೆ ಬರುತ್ತಾರೆ ಎಂಬ ಮಾತಿದೆ. ಆದರೆ ಈ ಮಾತು ತಪ್ಪು, ಏಕೆಂದರೆ ಪೊಲೀಸರು ಕೂಡ ಜನರನ್ನು ರಕ್ಷಣೆ ಮಾಡಿರುವ ಹಲವು ಘಟನೆಗಳು ಇದೆ . ಇದೀಗ ಇಲ್ಲೊಂದು ಪೊಲೀಸರ ತಕ್ಷಣದ ಸ್ಪಂದನೆಯಿಂದ ಜೀವವೊಂದು ಉಳಿದಿದೆ. ಈ ಘಟನೆಯಿಂದ ಪೊಲೀಸರ ಮೇಲೆ ಮತ್ತಷ್ಟು ನಂಬಿಕೆಯನ್ನು ಹುಟ್ಟಿಸಿದೆ. ಪೊಲೀಸರು ಸರಿಯಾದ ಸಮಯಕ್ಕೆ ಬಂದು ಒಂದು ಜೀವವನ್ನು ಉಳಿಸಿರುವ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದೆ. ಇದೀಗ ಬೆಂಗಳೂರಿನ ಪೊಲೀಸರು ಜನರಿಂದ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಹುಳಿಮಾವು ಠಾಣೆ ವ್ಯಾಪ್ತಿಯ ಬಸವನಪುರದಲ್ಲಿ ಜ.20ರಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಪಶ್ಚಿಮ ಬಂಗಾಳ ಮೂಲದ ಯುವತಿಯನ್ನು ರಕ್ಷಣೆ ಮಾಡಲಾಗಿದೆ.
ಕೋಣನಕುಂಟೆ ಠಾಣೆ ಹೊಯ್ಸಳ ಪೊಲೀಸರು ಸರಿಯಾದ ಸಮಯಕ್ಕೆ ಬಂದು ಯುವತಿಯ ಜೀವ ಉಳಿಸಿದ್ದಾರೆ. ಯುವತಿ ವಿಷ ಸೇವನೆ ಮಾಡಿದ ಬಳಿಕ ತಂದೆಗೆ ಕರೆ ಮಾಡಿದ್ದಾಳೆ. ಇದರಿಂದ ಗಾಬರಿಗೊಂಡು ಏನು ಮಾಡಬೇಕು ಎಂದು ತೋಚದೆ, ತಂದೆ 112 ಗೆ ಕರೆ ಮಾಡಿದ್ದಾರೆ. ತಕ್ಷಣ ಕೋಣನಕುಂಟೆ ಠಾಣೆ ಹೊಯ್ಸಳ ಪೊಲೀಸರು ಕಾರ್ಯಪ್ರವೃತ್ತರಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಯುವತಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಕೋಣನಕುಂಟೆ ಠಾಣೆ ಎಎಸ್ಐ ಶ್ರೀನಿವಾಸ ಮೂರ್ತಿ, ಕಾನ್ಸಟೇಬಲ್ ಮಂಜುನಾಥ್ ಈ ಯುವತಿಯನ್ನು ರಕ್ಷಣೆ ಮಾಡಿದ್ದಾರೆ. ಇದೀಗ ಯುವತಿ ಸುರಕ್ಷಿತವಾಗಿದ್ದು, ಯಾವುದೇ ತೊಂದರೆ ಇಲ್ಲ ಎಂದು ಹೇಳಲಾಗಿದೆ. ಆದರೆ ಆಕೆ ಯಾವ ಕಾರಣಕ್ಕೆ ಈ ನಿರ್ಧಾರ ತೆಗೆದುಕೊಂಡಿದ್ದಾಳೆ ಎಂದು ತಿಳಿದಿಲ್ಲ.
For More Updates Join our WhatsApp Group :




