ಖಾಸಗಿ ಬಸ್ ಮಾಲೀಕರಿಂದ ದರ ದುಪ್ಪಟ್ಟು ವಸೂಲಿ
ಬೆಂಗಳೂರು : ಸಾಲು ಸಾಲು ರಜೆ ಹಿನ್ನೆಲೆ ಖಾಸಗಿ ಬಸ್ ದರಗಳು ಗಣನೀಯವಾಗಿ ಏರಿಕೆಯಾಗಿವೆ. ನಾಳೆ ನಾಲ್ಕನೇ ಶನಿವಾರ, ಭಾನುವಾರ ಮತ್ತು ಸೋಮವಾರ ಗಣರಾಜ್ಯೋತ್ಸವದ ಹಿನ್ನೆಲೆ ಸತತ ಮೂರು ದಿನಗಳ ರಜೆ ಇರುವುದರಿಂದ ಜನರು ತಮ್ಮ ಊರುಗಳಿಗೆ ಪ್ರಯಾಣಿಸುತ್ತಾರೆ. ಈ ಸಂದರ್ಭವನ್ನು ದುರುಪಯೋಗಪಡಿಸಿಕೊಂಡ ಖಾಸಗಿ ಬಸ್ ಮಾಲೀಕರು ಪ್ರಯಾಣ ದರವನ್ನು ದುಪ್ಪಟ್ಟುಗೊಳಿಸಿದ್ದಾರೆ. ಬೆಂಗಳೂರಿನಿಂದ ಹುಬ್ಬಳ್ಳಿಗೆ ಹಿಂದಿನ ದರ 1473 ರೂ ಇತ್ತು, ಈಗ ಅದು 5000 ರೂ ತಲುಪಿದೆ.
ಬೆಂಗಳೂರು-ಕಾರವಾರ ನಡುವೆ ಪ್ರಸ್ತುತ 1790 ರೂಪಾಯಿಗಳಿಗಿಂತ ಅಧಿಕ ದರವಿದೆ. ಬೆಂಗಳೂರಿನಿಂದ ಕಲಬುರಗಿಗೆ 1299 ರೂಪಾಯಿಯಿಂದ 2200 ರೂಪಾಯಿಗೆ ಏರಿಕೆಯಾಗಿದೆ. ಬೆಂಗಳೂರು-ಶಿವಮೊಗ್ಗ ಪ್ರಯಾಣ ದರ 599 ರೂಪಾಯಿಯಿಂದ ಸುಮಾರು 3000 ರೂ ಇದೆ. ಅದೇ ರೀತಿ, ಬೆಂಗಳೂರಿನಿಂದ ಮಂಗಳೂರಿಗೆ 909 ರೂಪಾಯಿಯಿಂದ 2299 ರೂಪಾಯಿಗೆ ದರ ಏರಿಕೆಯಾಗಿದೆ. ರಜೆಗೆ ತೆರಳುವವರು ಹೆಚ್ಚುವರಿ ದರ ನೀಡಿ ಊರುಗಳಿಗೆ ತೆರಳುತ್ತಿದ್ದಾರೆ.
For More Updates Join our WhatsApp Group :




