ಬೆಂಗಳೂರಿನ ಟ್ರಾಫಿಕ್ ಕೊಟ್ಟ ಅಚ್ಚರಿ ಫಲಿತಾಂಶ.

ಬೆಂಗಳೂರಿನ ಟ್ರಾಫಿಕ್ ಕೊಟ್ಟ ಅಚ್ಚರಿ ಫಲಿತಾಂಶ.

8 ಕೆಜಿ ತೂಕ ಇಳಿಸಿಕೊಂಡ ಟೆಕ್ ಉದ್ಯೋಗಿ ಕಥೆ

ಬೆಂಗಳೂರು: ಜನದಟ್ಟಣೆಗೆ ವಿಶ್ವಪ್ರಸಿದ್ಧಯನ್ನು ಪಡೆದಿರುವ ಬೆಂಗಳೂರು ಟ್ರಾಫಿಕ್ ಅನೇಕರಿಗೆ ಕಿರಿಕಿರಿಯನ್ನು ಉಂಟು ಮಾಡಿದ್ರೆ, ಈ ವ್ಯಕ್ತಿಯನ್ನು ಮಾತ್ರ ಆರೋಗ್ಯವಂತನಾಗಿ ಮಾಡಿದೆ ಎಂದು ಹೇಳಿದ್ದಾರೆ. ಜೀವನದಲ್ಲಿ ಆಗುವ ನಕಾರಾತ್ಮಕ ವಿಚಾರಗಳ ಬಗ್ಗೆ ತುಂಬಾ ತಲೆಬಿಸಿ ಮಾಡಿಕೊಳ್ಳಬಾರದು. ಅಂತಹ ವಿಷಯಗಳಿಂದ ಹೊಸ ದಾರಿಯನ್ನು ಕಂಡುಕೊಳ್ಳಬೇಕು ಎಂಬುದಕ್ಕೆ ಈ ವ್ಯಕ್ತಿ ಉದಾಹರಣೆ ನೋಡಿ.  ಟ್ರಾಫಿಕ್‌ ತನ್ನನ್ನು ಆರೋಗ್ಯವಂತನನ್ನಾಗಿ ಮಾಡಿದೆ ಎಂದು ಈ ವ್ಯಕ್ತಿ ಸೋಶಿಯಲ್​​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದೀಗ ಈ ವಿಚಾರ ಭಾರೀ ಚರ್ಚೆಗೆ ಕಾರಣವಾಗಿದೆ. ಟೆಕ್ ಉದ್ಯೋಗಿ ಆಗಿರುವ ಇವರು, ವೈಟ್‌ಫೀಲ್ಡ್‌ನಿಂದ ಕೋರಮಂಗಲಕ್ಕೆ ದಿನನಿತ್ಯ 90 ನಿಮಿಷಗಳ ಕಾಲ ಟ್ರಾಫಿಕ್​ ಮಧ್ಯೆ ಪ್ರಯಣ ಮಾಡುತ್ತಾರೆ. ಇದರಿಂದ ಬೇಸತ್ತು ಟ್ರಾಫಿಕ್ ವಿರುದ್ಧ ಹೋರಾಟ ನಿಲ್ಲಿಸಿ ತಮ್ಮ ಜೀವನಶೈಲಿಯನ್ನೇ ಬದಲಾಯಿಸಿದ್ದಾರೆ. ಈ ಬಗ್ಗೆ ರೆಡ್ಡಿಟ್‌ನಲ್ಲಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಇದೊಂದು ಒಳ್ಳೆಯ ದಾರಿ ಎಂದು ನೆಟ್ಟಿಗರು ಹೇಳಿದ್ದಾರೆ.

ಬೆಂಗಳೂರಿನ ಟ್ರಾಫಿಕ್ ನನ್ನನ್ನು ನಿಜವಾಗಿಯೂ ಆರೋಗ್ಯವಂತರನ್ನಾಗಿ ಮಾಡಿದೆ ಎಂದು ತಾವು ಹಂಚಿಕೊಂಡಿರುವ ಪೋಸ್ಟ್​​​ನಲ್ಲಿ ಹೇಳಿದ್ದಾರೆ. “ನಾನು ವೈಟ್‌ಫೀಲ್ಡ್‌ನಿಂದ ಕೋರಮಂಗಲಕ್ಕೆ ಪ್ರತಿದಿನ ಪ್ರಯಾಣಿಸುತ್ತೇನೆ. ಈ ಮಾರ್ಗದಲ್ಲಿ ಹೋಗಬೇಕಾದರೆ 90 ನಿಮಿಷ ಬೇಕಾಗುತ್ತಿತ್ತು. ಇದರಿಂದ ನಿರಂತರ ಒತ್ತಡ, ಊಟ ಕೂಡ ಸರಿಯಾಗಿ ಮಾಡುತ್ತಿರಲಿಲ್ಲ, ವ್ಯಾಯಾಮಕ್ಕೂ ಕೂಡ ಸಮಯವೇ ಇರಲಿಲ್ಲ. ಈ ಅನಾರೋಗ್ಯಕರ ಜೀವನಶೈಲಿಯಿಂದ ಬೇಸತ್ತು. ವಾರದಲ್ಲಿ ಮೂರು ದಿನ ಮನೆಯಿಂದಲೇ ಕೆಲಸ (WFH) ಮಾಡಲು ನಿರ್ಧರಿಸಿದೆ.  ಡೆಲಿವರಿ ಆರ್ಡರ್ ಮಾಡುವ ಬದಲು ಹತ್ತಿರದ ರೆಸ್ಟೋರೆಂಟ್‌ಗಳಿಗೆ ನಡೆದುಕೊಂಡು ಹೋಗಿ ಊಟ ಮಾಡಲಾರಂಭಿಸಿದೆ. ಜೊತೆಗೆ, ಪ್ರತಿದಿನ ಬೆಳಿಗ್ಗೆ 6 ಗಂಟೆಗೆ ಮನೆಯ ಸಮೀಪದ ಜಿಮ್‌ಗೆ ಹೋಗುವ ಅಭ್ಯಾಸವನ್ನು ಕೂಡ ಬೆಳೆಸಿಕೊಂಡೆ. ಈ ರೀತಿಯ ಜೀವನಶೈಲಿಯಿಂದ ನನ್ನ ಆರೋಗ್ಯದಲ್ಲಿ ಬದಲಾವಣೆ ಆಗಿದೆ. ಆದರೆ ಟ್ರಾಫಿಕ್ ಸುಧಾರಿಸಲಿಲ್ಲ, ಅದರ ವಿರುದ್ಧ ಹೋರಾಡುವುದನ್ನು ನಿಲ್ಲಿಸಿ, ನಮ್ಮ ಆರೋಗ್ಯದ ಬಗ್ಗೆ ಗಮನ ನೀಡಿದೆ. ನನ್ನ ಈ ಜೀವನಶೈಲಿಯಿಂದ ಹೃದಯ ಬಡಿತ 82ರಿಂದ 64ಕ್ಕೆ ಇಳಿದಿದೆ. ಯಾವುದೇ ವಿಶೇಷ ಪ್ರಯತ್ನವಿಲ್ಲದೆ 8 ಕೆಜಿ ತೂಕವೂ ಕಡಿಮೆ ಮಾಡಿಕೊಂಡಿದ್ದೇನೆ” ಎಂದು ಹೇಳಿದ್ದಾರೆ.

ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್​ ಆಗಿದೆ. ಈ ಬಗ್ಗೆ ಹಲವು ನೆಟ್ಟಿಗರು ಕಮೆಂಟ್​ ಮಾಡಿದ್ದಾರೆ. ನಿಮ್ಮ ಈ ಬದಲಾವಣೆಗೆ ಟ್ರಾಫಿಕ್ ಕಾರಣವಲ್ಲ, ವರ್ಕ್ ಫ್ರಮ್ ಹೋಮ್ ಮತ್ತು ಜೀವನಶೈಲಿ ಬದಲಾವಣೆಯೇ ಆರೋಗ್ಯ ಸುಧಾರಣೆಗೆ ಕಾರಣ ಎಂದು ಹೇಳಿದ್ದಾರೆ. ಟ್ರಾಫಿಕ್ ನಿಮ್ಮನ್ನು ಆರೋಗ್ಯವಂತರನ್ನಾಗಿ ಮಾಡಲಿಲ್ಲ ವರ್ಕ್ ಫ್ರಮ್ ಹೋಮ್ ನಿಮ್ಮ ಆರೋಗ್ಯವನ್ನು ಬದಲಾವಣೆ ಮಾಡಿದೆ. ನಿಮ್ಮ ಆಹಾರ ಪದ್ಧತಿ, ಹಾಗೂ ಜಿಮ್​​​ ಮಾಡಲು ಸಮಯ ಸಿಕ್ಕಿದೆ. ಆ ಕಾರಣ ಈ ಬದಲಾವಣೆ ಎಂದು ಒಬ್ಬರು ಕಮೆಂಟ್​ ಮಾಡಿದ್ದಾರೆ. ನಾನು ನನ್ನ ಬೈಕ್ ಮಾರಿದ್ದೇನೆ. ಈಗ ಎಲ್ಲೆಡೆ ನಡೆದುಕೊಂಡೇ ಹೋಗುತ್ತೇನೆ. ನನ್ನ ಕೊಲೆಸ್ಟ್ರಾಲ್ ಮಟ್ಟಗಳು ಸಹಜ ಸ್ಥಿತಿಗೆ ಬಂದಿವೆ ಎಂದು ಮತ್ತೊಬ್ಬರು ಹೇಳಿದ್ದಾರೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *