24 ಗಂಟೆ ಕಾರಿನಲ್ಲೇ ಕುಳಿತ ಪ್ರವಾಸಿಗರು.
ಮನಾಲಿ : ಹಿಮಾಚಲ ಪ್ರದೇಶದಲ್ಲಿ ಉಂಟಾದ ಭಾರೀ ಹಿಮಪಾತವು ನೂರಾರು ಪ್ರವಾಸಿಗರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಹಿಮಭರಿತ ರಸ್ತೆಗಳು ಮತ್ತು ಭಾರೀ ಟ್ರಾಫಿಕ್ ಜಾಮ್ನಿಂದಾಗಿ ಮನಾಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಂಚಾರ ಸ್ಥಗಿತಗೊಂಡಿತು. ರಸ್ತೆ ಸಂಪರ್ಕ ಕಡಿತಗೊಂಡ ಕಾರಣದಿಂದಾಗಿ 15 ಕಿ.ಮೀ. ಟ್ರಾಫಿಕ್ ಜಾಮ್ ಉಂಟಾಗಿತ್ತು.
ಹಿಮಪಾತದಿಂದ ರಸ್ತೆ ಮುಚ್ಚಿದ್ದರಿಂದಾಗಿ ಪ್ರವಾಸಿಗರಿಗೆ ಮುಂದೆ ಸಾಗಲು ಸಾಧ್ಯವಾಗದೆ ಸಿಕ್ಕ ಹೋಟೆಲ್ಗಳನ್ನೆಲ್ಲ ಬುಕ್ ಮಾಡಿಕೊಂಡರು. ಇದರಿಂದ ಕೆಲವು ಪ್ರವಾಸಿಗರು ಹೋಟೆಲ್ ರೂಂ ಸಿಗದೆ, ಹಿಮಪಾತದಿಂದ ಹೊರಗೂ ಹೋಗಲಾಗದೆ 24 ಗಂಟೆಗಳ ಕಾಲ ಕಾರಿನಲ್ಲೇ ಕುಳಿತಿದ್ದರು. ಹೀಗಾಗಿ, ನೀವು ಕೂಡ ಹಿಮಪಾತ ನೋಡಲು ಮನಾಲಿಗೆ ಪ್ರವಾಸ ಹೋಗುವ ಪ್ಲಾನ್ ಮಾಡಿದ್ದರೆ ಮತ್ತೊಮ್ಮೆ ಯೋಚಿಸುವುದು ಉತ್ತಮ. ಇದು ಅಲ್ಲಿಗೆ ಹೋಗಿರುವ ಪ್ರವಾಸಿಗರೇ ನೀಡಿರುವ ಸಲಹೆ.
For More Updates Join our WhatsApp Group :




