ಸ್ಯಾಂಡಲ್ ವುಡ್ : ಕನ್ನಡ ರ್ಯಾಪರ್ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಅವರ ವಿಚ್ಛೇದನ ಶುಕ್ರವಾರ ಭಾರೀ ಸುದ್ದಿಯಾಗಿತ್ತು. ಚಂದನವನದಲ್ಲಿ ಕ್ಯೂಟ್ ಕಪಲ್ ಆಗಿದ್ದ ದಂಪತಿ ಏಕಾಏಕಿ ಬೇರೆಯಾಗಿರುವುದು ಎಲ್ಲರಿಗೂ ಅಚ್ಚರಿ ಮೂಡಿಸಿತು.
ಅಲ್ಲದೇ ಹಲವರು ಇದಕ್ಕೆ ಕಾರಣವನ್ನೂ ಹುಡುಕಲು ಮುಂದಾಗಿದ್ದರು. ಈ ಸಂಬಂಧ ಸೋಶಿಯಲ್ ಮಿಡಿಯಾದಲ್ಲಿ ಸಾಕಷ್ಟು ಚರ್ಚೆಗಳು ಕೂಡ ನಡೆದವು. ಆದರೆ ಇದೀಗ ಚಂದನ್ ಪರ ವಕೀಲೆ ಅನಿತಾ ಅವರು ವಿಚ್ಛೇದನಕ್ಕೆ ನಿಜವಾದ ಕಾರಣ ಏನು ಎಂಬುದನ್ನು ತಿಳಿಸಿದ್ದಾರೆ
ಖಾಸಗಿ ವಾಹಿನಿ ಯೊಂದಕ್ಕೆ ನೀಡಿರುವ ಹೇಳಿಕೆಯಲ್ಲಿ ವಕೀಲೆ ಅನಿತಾ ಅವರು, ಅವರು ಒಂದು ವರ್ಷದಿಂದ ದೂರ ಇರುವುದನ್ನೇ ತೋರಿಸಿ ಪರಸ್ಪರ ಮ್ಯೂಚುವಲ್ ಅಂಡರ್ ಸ್ಟಾಂಡಿಂಗ್ ಮೂಲಕ ವಿಚ್ಛೇದನ ಪಡೆದಿದ್ದಾರೆ. ಪತಿ-ಪತ್ನಿಯಾಗಿ ಮುಂದುವರಿಯಲು ಪರಸ್ಪರ ಹೊಂದಾಣಿಕೆ ಇಲ್ಲದಿರುವುದೇ ಮುಖ್ಯ ಕಾರಣ ಕೊಟ್ಟು ವಿಚ್ಛೇದನ ಪಡೆದಿದ್ದಾರೆ ಎಂದಿದ್ದಾರೆ
ಸಂಧಾನ ಮಾಡುವ ಪ್ರಯತ್ನ ಮಾಡಿದರೂ ಇಬ್ಬರೂ ಯಾವುದೇ ಕಾರಣಕ್ಕೂ ಡಿವೋರ್ಸ್ ಪರಿಹಾರದ ಮಾತಿಗೇ ಬರಲಿಲ್ಲ. ಉತ್ತಮ ಫ್ರೆಂಡ್ಸ್ ಆಗಿ ಮುಂದುವರಿಯಲು ಇಚ್ಛಿಸಿದ್ದಾರೆ. ಆದರೆ ಗಂಡ-ಹೆಂಡತಿಯಾಗಲು ಇಷ್ಟಪಡಲಿಲ್ಲ. ಡಿಸ್ಪ್ಯೂಟ್ ಇದ್ದಲ್ಲಿ ಪ್ರೊಸೆಸ್ ತಡವಾಗುತ್ತೆ.
ಆದರೆ ಇವರ ಕೇಸ್ ನಲ್ಲಿ ಇಬ್ಬರದ್ದೂ ಒಂದೇ ಮಾತಾಗಿತ್ತು. 13-ಬಿ ಪ್ರಕಾರ ವಿಚ್ಛೇದನ ಧಾವೆಯಲ್ಲಿ ಒಂದು ವರ್ಷದಿಂದ ಪರಸ್ಪರ ದೂರ ಇರುವುದು ಹಾಗೂ ಹೊಂದಾಣಿಕೆ ಇಲ್ಲದಿರೋದನ್ನ ತೋರಿಸಿದ್ದರಿಂದ ವಿಚ್ಛೇದನದ ಪ್ರೊಸೆಸ್ ಬೇಗ ಆಗಿದೆ ಎಂದು ಹೇಳಿದರು