ದಾವಣಗೆರೆ ರೈತರು ತೋಟಕ್ಕೆ ಹೈ ಟೆಕ್ ಸೆಕ್ಯುರಿಟಿ ವ್ಯವಸ್ಥೆ
ದಾವಣಗೆರೆ : ಅಡಿಕೆಗೆ ಕೊಳೆ ರೋಗದ ನಡುವೆಯೂ ಬೆಲೆ ಏರಿಕೆ ಆಗಿರುವುದು ಅಚ್ಚರಿ ಸಂಗತಿ, ಆದರೆ ರೈತರಿಗೆ ಇದರ ಬಗ್ಗೆ ಒಂದಲ್ಲ ಒಂದು ತಲೆನೋವು ಇದ್ದೇ ಇದೆ. ಇಷ್ಟು ದಿನ ಕೊಳೆ ರೋಗ ಬಗ್ಗೆ ಚಿಂತೆ ಮಾಡುತ್ತಿದ್ದ ರೈತರು. ಇದೀಗ ಕಳ್ಳರ ಕಾಟಕ್ಕೆ ಕಂಗಾಲಾಗಿದ್ದಾರೆ. ಕೊಳೆ ರೋಗದ ನಡುವೆಯೂ ಅಡಿಕೆ ದರ ಏರಿಕೆ ಆಗಿದೆ. ಈ ಬಗ್ಗೆ ಸ್ವಲ್ಪ ಸಂತೋಷ ಪಡುವ ಸಮಯದಲ್ಲೇ ರೈತರಿಗೆ ಕಳ್ಳರು ಕಾಟ ಎದುರಾಗಿದೆ. ಇದೀಗ ಕಳ್ಳರನ್ನು ಪತ್ತೆ ಮಾಡಲು ಹಾಗೂ ಅಡಿಕೆಗೆ ಟೈಟ್ ಸೆಕ್ಯುರಿಟಿ ನೀಡಲು ರೈತರು ಹೊಸ ಪ್ಲಾನ್ ಮಾಡಿದ್ದಾರೆ.
ದಾವಣಗೆರೆ ಜಿಲ್ಲೆಯಲ್ಲಿ ಅಡಿಕೆ ಕಳ್ಳತನ ತಡೆಗೆ ರೈತರ ಮಾಸ್ಟರ್‌ಪ್ಲಾನ್ ಮಾಡಿದ್ದಾರೆ. ಅಡಿಕೆ ತೋಟಕ್ಕೆ ಇದೀಗ ಸಿಸಿ ಕ್ಯಾಮರಾ ಬಂದಿದೆ. ಅಡಿಕೆ ತೋಟದಲ್ಲಿ ಅಪರಿಚಿತರ ಓಡಾಟ ನಡೆಸಿದರೆ ಲೈನ್ ಆನ್ ಮೂಲಕ ಮಾಲೀಕರ ಮೊಬೈಲ್ ಗೆ ಸಂದೇಶ ಕಳುಹಿಸುವ ಸಿಸಿ ಕ್ಯಾಮರಾವನ್ನು ಅಳವಡಿಸಲಾಗಿದೆ.
For More Updates Join our WhatsApp Group :




