ಮಾರುಕಟ್ಟೆಯಲ್ಲಿ 100 ಕೆಜಿಗೆ ₹17,500–₹28,500 ಬೆಲೆ.
ತುಮಕೂರು: ಜಿಲ್ಲೆಯ ಪ್ರಮುಖ ಕೃಷಿ ಮಾರುಕಟ್ಟೆಗಳಲ್ಲಿ ಹುಣಸೆ ಹಣ್ಣಿನ ಬೆಲೆ ಗಣನೀಯವಾಗಿ ಏರಿಕೆ ಕಂಡಿದೆ. ಇತ್ತೀಚಿನ ವಹಿವಾಟಿನಲ್ಲಿ ನೂರು ಕೆಜಿಗೆ ಹುಣಸೆ ₹17,500 ರಿಂದ ₹28,500 ವರೆಗೆ ದರ ದಾಖಲಾಗಿದೆ.
ಉತ್ತಮ ಗುಣಮಟ್ಟದ ಹುಣಸೆಗೆ ಹೆಚ್ಚಿದ ಬೇಡಿಕೆ, ಸಂಗ್ರಹ ಕಡಿಮೆಯಾದುದು ಹಾಗೂ ಹೊರರಾಜ್ಯಗಳಿಂದ ಖರೀದಿ ಹೆಚ್ಚಿರುವುದು ದರ ಏರಿಕೆಗೆ ಪ್ರಮುಖ ಕಾರಣಗಳಾಗಿವೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.
ಹುಣಸೆ ಬೆಲೆ ಏರಿಕೆಯಿಂದ ರೈತರಿಗೆ ಲಾಭವಾಗಿದ್ದು, ಮುಂದಿನ ದಿನಗಳಲ್ಲಿ ದರ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.
For More Updates Join our WhatsApp Group :




