೩೦ ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಿದೆ ನಿಡುವಲು ಗ್ರಾಮ ಪಂಚಾಯತಿ
ತುಮಕೂರು: ರಾಜ್ಯ ಸೇರಿದಂತೆ ದೇಶದಾದ್ಯಂತ ಮನರೇಗಾ ಮತ್ತು ವಿ.ಬಿ. ರಾಮ್ ಜಿ ವಿಚಾರ ತಾರಕ್ಕೇರಿದೆ. ಈ ನಡುವೆ ಹೆಸರು ಬದಲಾವಣೆಯಾಗಿರುವ ನರೇಗಾ ಯೋಜನೆಯಡಿ ಗ್ರಾಮ ಪಂಚಾಯತಿಯೊAದನ್ನು ನಿರ್ಮಾಣ ಮಾಡಿ ಉದ್ಘಾಟನೆ ಮಾಡಲಾಗಿದೆ. ಇದು ಮತ್ತೊಮ್ಮೆ ನರೇಗಾ ಯೋಜನೆಯ ಮಹತ್ವ ಎಷ್ಟಿದೆ ಎಂಬುದನ್ನು ಸಾರಿ ಹೇಳುತ್ತಿದೆ.
ಒಂದು ಕಡೆ ಈಗಾಗಲೇ ಮಹಾತ್ಮಗಾಂಧಿರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆಯ ಹೆಸರನ್ನು ಬದಲಾವಣೆ ಮಾಡಿ ವಿಬಿಜಿ ರಾಮ್ ಜಿ ಎಂದು ಹೆಸರನ್ನು ಇಡಲಾಗಿದೆ. ಇದರ ಬೆನ್ನಲ್ಲೇ ಇಡಿ ದೇಶಾದ್ಯಂತ ಕಾಂಗ್ರೆಸ್ ಹೋರಾಟ ಮಾಡುತ್ತಿದೆ. ಮಹಾತ್ಮಗಾಂಧಿ ಯೋಜನೆ ಮರು ಸ್ಥಾಪನೆಗೆ ಆಗ್ರಹ ಮಾಡುತ್ತಿದೆ. ಈ ನಡುವೆ ಅದೇ ನರೇಗಾ ಯೋಜನೆಯಡಿ ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಮಿನಿ ವಿಧಾನ ಸೌಧದ ಮಾದರಿಯಲ್ಲಿ ಗ್ರಾಮ ಪಂಚಾಯತಿ ನಿರ್ಮಾಣ ಮಾಡಿ ಉದ್ಘಾಟನೆ ಮಾಡಲಾಗಿದೆ. ಈ ಗ್ರಾಮ ಪಂಚಾಯಿತಿಯನ್ನು ತುಮಕೂರು ಗ್ರಾಮಾಂತರ ಶಾಸಕ ಬಿ. ಸುರೇಶ್ ಗೌಡ ಉದ್ಘಾಟನೆ ಮಾಡಿದ್ದಾರೆ.
ಕಳೆದ ಇಪ್ಪತ್ತು ವರ್ಷಗಳಿಂದ ಜಾರಿಯಲ್ಲಿರುವ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ ಗ್ರಾಮೀಣ ಜನರ ಜೀವನಾಧಾರವಾಗಿದ್ದು, ಇದನ್ನು ದುರ್ಬಲಗೊಳಿಸಲಾಗಿದೆ ಎಂಬ ಆರೋಪದ ಪ್ರತಿಭಟನೆ ನಡುವೆ ತುಮಕೂರು ಗ್ರಾಮಾಂತರ ಕ್ಷೇತ್ರದ ನಿಡುವಳಲು ಗ್ರಾಮ ಪಂಚಾಯತಿಲ್ಲಿ ಸುಮಾರು ೯೩ ಲಕ್ಷ. ವೆಚ್ಚದಲ್ಲಿ ಗ್ರಾಮ ಪಂಚಾಯತಿ ನಿರ್ಮಾಣ ಮಾಡಿ ಉದ್ಘಾಟನೆ ಮಾಡಲಾಗಿದೆ. ನರೇಗಾ ಸೇರಿ ಶಾಸಕರ ಮತ್ತು ಸಂಸದರ ಅನುದಾನವೂ ಇದರಲ್ಲಿ ಒಳಗೊಂಡಿದೆ. ಈ ನಿಡುವಳಲು ಗ್ರಾಮ ಪಂಚಾಯತಿಗೆ ಎರಡು ವರ್ಷಗಳ ಹಿಂದೆ ಪಿಡಿಓ ಆಗಿ ಅಧಿಕಾರ ವಹಿಸಿಕೊಡ ಶ್ರೀನಿವಾಸ್ ನರೇಗಾ ಯೋಜನೆಯ ಸದ್ಬಳಕೆ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ನರೇಗಾ ಯೋಜನೆಯಡಿ ಗ್ರಾಮ ಪಂಚಾಯತಿ ನಿರ್ಮಾಣ ಮಾಡಿ, ಕಾಮಗಾರಿ ಕೈಗೆತ್ತಿಕೊಂಡ ಒಂದೇ ವರ್ಷದಲ್ಲಿ ಕಟ್ಟಡ ನಿರ್ಮಾಣ ಪೂರ್ಣಗೊಳಿಸಿದ್ದಾರೆ. ತುಮಕೂರು ಗ್ರಾಮಾಂತರದಲ್ಲೇ ಮೊದಲ ನರೇಗಾ ಯೋಜನೆಯಡಿ ನಿರ್ಮಾಣ ಮಾಡಿರುವ ಗ್ರಾಮ ಪಂಚಾಯತಿಯಾಗಿ ಮಾದರಿಯಾಗಿದೆ.
ಕೇಂದ್ರ ಸರ್ಕಾರ ಮನರೇಗಾ ಯೋಜನೆ ಸ್ವರೂಪ ಬದಲಾವಣೆ ಮಾಡಿರುವ ಬೆನ್ನಲ್ಲೇ ನರೇಗಾ ಯೋಜನಡಿ ಅತ್ಯುತ್ತಮ ಸುಸಜ್ಜಿತವಾದ ಗ್ರಾಮ ಪಂಚಾಯತಿ ನಿರ್ಮಾಣ ಮಾಡಿದ್ದೇವೆ. ಇಂತಹ ಗ್ರಾಮ ಪಂಚಾಯತಿಯನ್ನು ನನ್ನ ಆಡಳಿತ ಅವಧಿಯಲ್ಲಿ ನಿರ್ಮಾಣ ಮಾಡಿರುವುದಕ್ಕೆ ಖುಷಿಯಾಗಿದೆ. ನರೇಗಾ ಯೋಜನೆಯನ್ನು ಮುಂದುವರೆಸಬೇಕು. ನರೇಗಾ ಯೋಜನೆ ಹೆಸರು ಬದಲಾವಣೆ ಮಾಡಿ ಸ್ವರೂಪ ಬದಲಾವಣೆ ಮಾಡಿರುವುದರಿಂದ ಈಗ ನರೇಗಾ ಯೋಜನೆಯಡಿ ಅಂತಹ ಕೆಲಸಗಳು ನಡೆಯುತ್ತಿಲ್ಲವೆಂದು ಗ್ರಾಮ ಪಂಚಾಯತಿ ಅಧ್ಯಕ್ಷ ಹನುಮಂತರಾಯಪ್ಪ ಅಭಿಮತ ವ್ಯಕ್ತಪಡಿಸಿದರು.
ನರೇಗಾ ಹೆಸರು ಬದಲಾವಣೆಯ ನಡುವೆ ನರೇಗಾ ಯೋಜನೆಯಡಿ ಗ್ರಾಮ ಪಂಚಾಯತಿ ನಿರ್ಮಾಣ ಮಾಡಿರುವುದು ಈಗ ರಾಜ್ಯದ ಗಮನ ಸೆಳೆದಿದೆ. ಮಾದರಿ ಗ್ರಾಮ ಪಂಚಾಯತಿ ಯೋಜನೆಯಾಗಿ ಗಮನ ಸೆಳೆಯುತ್ತಿದೆ.
For More Updates Join our WhatsApp Group :




