ಸೇವಾ ಹಿರಿತನವನ್ನು ಪರಿಗಣಿಸದೆ ಕಿರಿಯ ನೌಕರನಿಗೆ ಮೇಲ್ಪಡಿಗೆ; ಲೋಕಾಯುಕ್ತರ ಗಮನ
ಮಧುಗಿರಿ : ಬೆಸ್ಕಾಂ ವಿಭಾಗದ ಕಛೇರಿಯಲ್ಲಿ ಸಹಾಯಕ ಲೆಕ್ಕಾಧಿಕಾರಿ (ಗ್ರೂಪ್-ಬಿ) ಹುದ್ದೆಯನ್ನು ಹಿರಿಯ ವೃಂದ ಮತ್ತು ಸೇವಾ ಹಿರಿತನದಲ್ಲಿ ಹಿರಿಯ ನೌಕರರನ್ನು ಪ್ರಭಾರ ಹುದ್ದೆಗೆ ಪರಿಗಣಿಸದೆ ಕಿರಿಯ ನೌಕರನಾದ ‘ಮಹೇಶ್ ಬಿ.ಜಿ’ ರವರಿಗೆ ಬೆಸ್ಕಾಂ ನಿಯಮ ಹಾಗೂ ನಿಯಮಾವಳಿಗಳಿಗೆ ವಿರುದ್ಧವಾಗಿ ಸಹಾಯಕ ಲೆಕ್ಕಾಧಿಕಾರಿ (ಪ್ರಭಾರ) ಹುದ್ದೆ ವಹಿಸಿರುವವರ ವಿರುದ್ಧ ಕಾನೂನು ಪ್ರಕಾರ ಕ್ರಮವಹಿಸುವ ಬಗ್ಗೆ,
ತುಮಕೂರುಜಿಲ್ಲೆ, ತುಮಕೂರು ವೃತ್ತ, ಮಧುಗಿರಿ ಬೆಸ್ಕಾಂ ವಿಭಾಗ ಕಛೇರಿಯಲ್ಲಿ ಸಹಾಯಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಕಿರಿಯ ನೌಕರನಾದ ‘ಮಹೇಶ್ ಬಿ.ಜೆ’ ರವರಿಗೆ ಪ್ರಭಾರ ಸಹಾಯಕ ಲೆಕ್ಕಾಧಿಕಾರಿಯಾಗಿ ಪ್ರಭಾರ ವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸುವಂತೆ ಚಿತ್ರದುರ್ಗ ಕಾ ಮತ್ತು ಫಾ ವಿಭಾಗದ ಮುಖ್ಯ ಇಂಜಿನಿಯರ್ (ವಿ). ರವರು ಆದೇಶಿಸಿರುತ್ತಾರೆ. ಸದರಿ ಆದೇಶವು ಕಂಪನಿಯ ನಿಯಮಾವಳಿಗಳಿಗೆ ತದ್ವಿರುದ್ಧವಾಗಿರುತ್ತದೆ. ಕಾರಣ ಮಹೇಶ್ ಬಿ.ಜಿ ರವರಿಗಿಂತ ವಿಭಾಗ ಕಛೇರಿಯಲ್ಲಿ ಹಿರಿಯ ನೌಕರರಾಗಿರುವ ರಾಮಯ್ಯ ಆರ್ ರವರು ಹಿರಿಯ ಸಹಾಯಕ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿರುತ್ತಾರೆ. ಆದರೆ ಏಕಏಕಿ ರಾಮಯ್ಯ ಆರ್ ಇವರ ಸೇವಾ ಹಿರಿತನವನ್ನು ಪರಿಗಣಿಸದೇ ರಾಮಯ್ಯ ಆರ್. ರವರಿಗಿಂತ ಜೇಷ್ಟತಾ ಆಧಾರದಲ್ಲಿ ಕಿರಿಯ ನೌಕರರಾಗಿರುವ ಮಹೇಶ್ ಬಿ.ಜಿ ರವರಿಗೆ ಮೇಲ್ಕಂಡಂತೆ ಪ್ರಭಾರ ಸಹಾಯಕ ಲೆಕ್ಕಾಧಿಕಾರಿ ಹುದ್ದೆ ವಹಿಸಲಾಗಿರುತ್ತದೆ.
ಪ್ರಮುಖವಾಗಿ ದೂರಿನ ಅರ್ಜಿ ಜೊತೆಗೆ ಆದೇಶ ಪತ್ರದ ಪ್ರತಿಗಳು ಮತ್ತುಕಂಪನಿಯ ನಿಯಮಾವಳಿಗಳನ್ವಯ ಸಹಾಯಕ ಲೆಕ್ಕಾಧಿಕಾರಿ ಹುದ್ದೆಗೆ ಪ್ರಭಾರ ನೀಡಲು ಕನಿಷ್ಟ ಅರ್ಹತೆ ಇರುವ ವಿವರದ ಪಟ್ಟಿಯನ್ನು ಲಗತ್ತಿಸಿ ತುಮಕೂರು ಲೋಕಾಯುಕ್ತ ಅಧೀಕ್ಷಕ ರವರಿಗೆ ಭೀಮ್ ಆರ್ಮಿ ಜಿಲ್ಲಾ ಕಾರ್ಯಧ್ಯಕ್ಷರಾದ ಕೀರ್ತಿ ದೊಡ್ಡಗುಣಿ ಹಾಗೂ ಮಧುಗಿರಿ ತಾಲ್ಲೂಕ್ ಭೀಮ್ ಆರ್ಮಿ ಸಂಘಟನೆಯ ತಾಲ್ಲೂಕ್ ಅಧ್ಯಕ್ಷರಾದ ನಟರಾಜ್ ಮೌರ್ಯ ರವರು ದೂರನ್ನು ಸಲ್ಲಿಸಿರುತ್ತಾರೆ..
For More Updates Join our WhatsApp Group :




