ಹಾಸನದಲ್ಲಿ ಪ್ರೇಮ ಪ್ರಕರಣಕ್ಕೆ ಹೊಸ ತಿರುವು.!

ಹಾಸನದಲ್ಲಿ ಪ್ರೇಮ ಪ್ರಕರಣಕ್ಕೆ ಹೊಸ ತಿರುವು.!

ಕಾರಿನಲ್ಲಿ ತಾಳಿ ಕಟ್ಟಿಸಿಕೊಂಡ ಮಹಿಳೆಯಿಂದ ವಿಡಿಯೋ ಹೇಳಿಕೆ.

ಹಾಸನ: 8 ವರ್ಷಗಳ ಹಿಂದೆಯೇ ಮದುವೆಯಾಗಿದ್ದ ಮಹಿಳೆ ತನ್ನ ಗಂಡ ಹಾಗೂ ಮಗಳನ್ನು ಬಿಟ್ಟು ರಾತ್ರೋ ರಾತ್ರಿ ಲವರ್ ಜೊತೆ ಪರಾರಿಯಾಗಿರೋ ಘಟನೆ ಹಾಸನ ಗೆರೂರು ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಓಡಿ ಹೋಗಿದ್ದಷ್ಟೇ ಅಲ್ಲ ಕಾರಿನಲ್ಲಿ ಪ್ರಿಯಕರನ ಕೈಯಿಂದ ತಾಳಿ ಕಟ್ಟಿಸಿಕೊಂಡಿದ್ದು, ಸದ್ಯ ಈ ವಿಡಿಯೋ ಇದೀಗ ವೈರಲ್ ಅಗಿದೆ. ಆದ್ರೆ, ಈ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ತಾಳಿ ಕಟ್ಟಿಸಿಕೊಂಡ ಬಳಿಕ ಪತಿ ಪ್ರಕಾಶ್ ನೊಂದಿಗೆ ಫೋನ್​ನಲ್ಲಿ ಮಾತನಾಡಿದ್ದ ಹರ್ಷಿತಾ, ತಪ್ಪಾಯ್ತು ತನ್ನ ಕರೆದುಕೊಂಡು ಹೋಗಿ ಎಂದು ಬೇಡಿಕೊಂಡಿದ್ದಳು. ಆದ್ರೆ, ಇದಕ್ಕೆ ಪ್ರಕಾಶ್ ಒಪ್ಪದಿದ್ದಾಗ ಹರ್ಷಿತಾ ಸಹ ರೊಚ್ಚಿಗೆದ್ದಿದ್ದು, ಅಜ್ಞಾತ ಸ್ಥಳದಿಂದ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾಳೆ..

ಅವರ ಜೊತೆ ಜೀವನ ಮಾಡಲು ಇಷ್ಟ ಇಲ್ಲ‌

ನಾನು ಮನೆ ಬಿಟ್ಟು ಬರಲು ಸಹಾಯ ಮಾಡಿದ್ದು ಹೇಮಂತ್. ಒಂದು ಊರಿಗೆ ಬಂದು ಯಾರ ಸಹಾಯ ಇಲ್ಲದೆ ಹುಡುಗಿನ ಕರ್ಕೊಂಡ್ ಹೋಗಲು ಆಗಲ್ಲ. ನಮಗೆ ಸಹಾಯ ಮಾಡಿದ್ದು ಹೇಮಂತ್. ನನಗೆ ಪಾಪು ಬೇಡ ಎಂದು ಹೇಳಿಲ್ಲ. ನಾನು ಪ್ರಕಾಶ್ ಗೆ ಡಿವೋರ್ಸ್ ಕೊಟ್ಟು ಹೇಗೊ ಮಗು ಸಾಕುತ್ತೇನೆ. ಯಾರೋ ಬಲವಂತ ಮಾಡಿದ್ರು ಎಂದು ಈ ಹೇಳಿಕೆ ನೀಡುತ್ತಿಲ್ಲ. ನಾನೇ ಇಷ್ಟಪಟ್ಟು ಮನೆಯಿಂದ ಹೊರಗೆ ಬಂದಿದ್ದೇನೆ. ಅವರು ಕುಡಿದು ಬಂದು ಹೊಡೆದಿದ್ದಾರೆ. ಹಾಗಾಗಿ ಅವರ ಜೊತೆ ಜೀವನ ಮಾಡಲು ಇಷ್ಟ ಇಲ್ಲ‌ಎಂದು ಸ್ಪಷ್ಟಪಡಿಸಿದ್ದಾಳೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *