ರಾಯಚೂರು: ರಿಯಲ್ ಲೈಫ್‌ನಲ್ಲಿ ನಡೆದ ಈ ಅಂಧರ ಪ್ರೇಮಕಥೆ, ಯಾವುದಕ್ಕೂ ಕಡಿಮೆ ಇಲ್ಲದೆ ನಿಜಕ್ಕೂ ಸಿನಿಮಾಕ್ಕೇ ಸಾಟಿ. ರಸ್ತೆ ದಾಟಿಸಲು ಸಹಾಯ ಮಾಡಿದ ಕ್ಷಣದಿಂದಲೇ ಮಧುರ ಸಂಬಂಧ ಬೆಳೆದು, ಅದು ಮದುವೆ ಮಂಟಪದಲ್ಲಿ ಮುಕ್ತಾಯವಾಯಿತು.
ರಾಯಚೂರು ತಾಲ್ಲೂಕಿನ ಯರಮರಸ್ ನಿವಾಸಿ ರಂಗಪ್ಪ ಹಾಗೂ ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ದೊಡ್ಡಕಲ್ಲಹಳ್ಳಿಯ ನಾರಾಯಣಮ್ಮ ಇಬ್ಬರೂ ಅಂಧರು. ಇವರಿಗೆ ಪರಿಚಯವಾದ ಬಳಿಕ ಪ್ರೀತಿಯೂ, ನಂತರ ಮದುವೆಯೂ ಆಗಿ ಕನಸಿನ ಬದುಕಿಗೆ ಚಾಲನೆ ದೊರಕಿತು.
ಈ ಅದ್ಧೂರಿ ಮದುವೆಯನ್ನು ಪಾಲಿಕೆ ಸದಸ್ಯ ಸಣ್ಣ ನರಸರೆಡ್ಡಿ ನೇತೃತ್ವದಲ್ಲಿ ನೆರವೇರಿಸಲಾಯಿತು. ಸಮಾಜಕ್ಕೆ ಮಾದರಿಯಾದ ಈ ಪ್ರೇಮಕಥೆ ಈಗ ರಾಜ್ಯಾದ್ಯಂತ ಚರ್ಚೆಯಾಗುತ್ತಿದೆ.
For More Updates Join our WhatsApp Group :




