ಹಾಸನದಲ್ಲಿ ಮೆಕ್ಯಾನಿಕ್ ಹ*ತ್ಯೆ: ಶವದೊಂದಿಗೆ ಸೆಲ್ಫಿ ವೀಡಿಯೋ ಮಾಡಿವಿ ಕೃತಿ!
ಹಾಸನ: ಹಾಸನ ಹೊರವಲಯದ ಬಿಟ್ಟಗೌಡನಹಳ್ಳಿ ಬಳಿ ಯುವಕನೋರ್ವನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಹಾಸನ ತಾಲೂಕಿನ ಹೂವಿನಹಳ್ಳಿ ಕಾವಲು ಗ್ರಾಮದ ನಿವಾಸಿ ಮೆಕ್ಯಾನಿಕ್ ಕೀರ್ತಿ(22) ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಲಾಗಿದ್ದು, ಬಳಿಕ ಹಂತಕರು ಶವ ಮುಂದೆ ಸೆಲ್ಫಿ ವಿಡಿಯೋ ಮಾಡಿ ವಿಕೃತಿ ಮೆರೆದಿದ್ದಾರೆ. ನಾವೇ ಇವನನ್ನು ಹೊಡೆದು ಕೊಂದಿದ್ದೇವೆಂದು ಶವದೊಂದಿಗೆ ಸೆಲ್ಫಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಸದ್ಯ ಇದೇ ವಿಡಿಯೋವನ್ನು ಆಧರಿಸಿ ಸ್ಥಳಕ್ಕೆ ಶ್ವಾನದಳ, ಎಎಸ್‌ಪಿ ಭೇಟಿ ಪರಿಶೀಲನೆ ನಡೆಸಿದ್ದು, ಹಂತಕರ ಬಂಧನಕ್ಕೆ ಬಲೆ ಬೀಸಿದ್ದಾರೆ.
ವಿಡಿಯೋ ವೈರಲ್ ಬಳಿಕ ಕೊಲೆ ಬಯಲಿಗೆ
ಆತ ವೃತ್ತಿಯಲ್ಲಿ ವ್ಯಕ್ಯಾನಿಕ್ ಆಗಿದ್ದ. ಕೆಲಸ ಮಾಡುತ್ತಾ ತನ್ನ ಪಾಡಿಗೆ ತಾನಿದ್ದವನು. ರೀಲ್ಸ್ ಮಾಡುತ್ತಾ ಸ್ನೇಹಿತರ ಜೊತೆ ಸುತ್ತಾಡ್ತಾ ಇದ್ದವನು ನಿನ್ನೆ (ಡಿಸೆಂಬರ್ 08) ಎಷ್ಟೊತ್ತಾದ್ರು ಮನೆಗೆ ಬಂದಿಲ್ಲ ಏನಾಯ್ತು ಎಂದು ಎಲ್ಲರೂ ಆತಂಕದಲ್ಲಿರುವಾಗ ಬೆಳಿಗ್ಗೆ ವೀಡಿಯೋ ವೊಂದು ವೈರಲ್ ಆಗಿದೆ. ಕ್ರೂರಿಯೊಬ್ಬ ಶವದ ಮುಂದೆ ಸೆಲ್ಪೀ ವೀಡಿಯೋ ಮಾಡಿ ನಾವು ಕೊಲೆ ಮಾಡಿದಿವಿ ಸಾಯಿಸಿದ್ದೇವೆ ಎಂದು ಹೇಳುತ್ತ ಕ್ರೌರ್ಯ ಮೆರೆದಿದ್ದಾನೆ. ಈ ವೀಡಿಯೋ ಜಾಡು ಹಿಡಿದು ತನಿಖೆಗಿಳಿದ ಪೊಲೀಸರಿಗೆ ಕೊಲೆಯಾಗಿದ್ದು ಓರ್ವ ಮೆಕ್ಯಾನಿಕ್. ಕೊಲೆ ಮಾಡಿದ್ದು ಆಟೋ ಚಾಲಕ ಎನ್ನುವುದು ಗೊತ್ತಾಗಿದೆ. ಒಟ್ಟಿಗೆ ಹೋಗಿ ಪಾರ್ಟಿ ಮಾಡಿ ಹಲ್ಲೆ ಮಾಡಿ ಹತ್ಯೆಗೈದಿದ್ದಾರೆ.
For More Updates Join our WhatsApp Group :




