ಮಳೆಯ ಆರ್ಭಟಕ್ಕೆ ತಾಜ್ ಮಹಲ್‌ ಗೋಡೆಗಳಲ್ಲಿ ಬಿರುಕು! ಅಳಿಸಿ ಹೋಗ್ತಿವೆ ಕುರಾನ್ ಸಾಲುಗಳು

ಮಳೆಯ ಆರ್ಭಟಕ್ಕೆ ತಾಜ್ ಮಹಲ್ ಗೋಡೆಗಳಲ್ಲಿ ಬಿರುಕು! ಅಳಿಸಿ ಹೋಗ್ತಿವೆ ಕುರಾನ್ ಸಾಲುಗಳು

ಆಗ್ರಾ (ಉತ್ತರ ಪ್ರದೇಶ): ವಿಶ್ವ ವಿಖ್ಯಾತ ಪ್ರವಾಸಿ ತಾಣ ತಾಜ್ ಮಹಲ್‌ನ ಗೋಡೆಗಳು, ನೆಲ ಹಾಗೂ ಹಲವೆಡೆ ಬಿರುಕುಗಳು ಆಣಿಸಿಕೊಂಡಿವೆ. ಆಗ್ರಾದಲ್ಲಿ ಕಳೆದ ಕೆಲವು ದಿನಗಳಿಂದ ಭಾರೀ ಮಳೆ ಆಗುತ್ತಿರುವ ಹಿನ್ನೆಲೆಯಲ್ಲಿ ಈ ಬಿರುಕುಗಳು ಹೆಚ್ಚಾಗಿವೆ ಎಂಬ ಮಾಹಿತಿ ಲಭ್ಯವಾಗಿದೆ

ಈ ಕುರಿತಾಗಿ ಭಾರತೀಯ ಟೂರಿಸ್ಟ್‌ ಗೈಡ್ ಒಕ್ಕೂಟದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಶಕೀಲ್ ಚೌಹಾಣ್ ಅವರು ಮಾಹಿತಿ ನೀಡಿದ್ದು, ತಾಜ್ ಮಹಲ್‌ನ ಮುಖ್ಯ ಗುಮ್ಮಟದ ಸುತ್ತ ಇರುವ ಬಾಗಿಲುಗಳ ಮೇಲೆ ಅರೇಬಿಕ್ ಭಾಷೆಯಲ್ಲಿ ಕುರಾನ್‌ನ ಸಾಲುಗಳನ್ನ ಬರೆಯಲಾಗಿದೆ. ಈ ಸಾಲುಗಳು ಅಳಿಸಿ ಹೋಗುತ್ತಿವೆ ಎಂದು ಮಾಹಿತಿ ನೀಡಿದ್ದಾರೆ. ಇನ್ನು ಗೋಡೆಗಳಿಗೆ ಅಳವಡಿಕೆ ಮಾಡಲಾಗಿದ್ದ ಅಮೂಲ್ಯ ಶಿಲೆಗಳೂ ಕೂಡಾ ಸವೆಯುತ್ತಿವೆ. ನೆಲ ಹಾಸಿನಲ್ಲಿ ಇದ್ದ ಕಲ್ಲುಗಳೂ ಕಿತ್ತು ಹೋಗುತ್ತಿವೆ. ಗುಮ್ಮಟಗಳು, ಗೋಡೆಗಳು, ವಸ್ತು ಸಂಗ್ರಹಾಲಯದ ನೆಲ ಹಾಸುಗಳು ಬಿರುಕು

ಆದರೆ ಭಾರತೀಯ ಪುರಾತತ್ವ ಇಲಾಖೆ ಮಾತ್ರ ಈ ಕಟ್ಟಡಕ್ಕೆ ಯಾವುದೇ ಹಾನಿಯಾಗಿಲ್ಲ ಎಂದು ಹೇಳುತ್ತಿದೆ. ಇದು ತಪ್ಪು ಎಂದು ಟೂರಿಸ್ಟ್‌ ಗೈಡ್‌ಗಳ ಶ್ರೇಯೋಭಿವೃದ್ದಿ ಒಕ್ಕೂಟದ ಅಧ್ಯಕ್ಷ ದೀಪಕ್ ದಾನ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಾಜ್ ಮಹಲ್ ವಿಶ್ವದಲ್ಲೇ ಅತ್ಯಂತ ಜನಪ್ರಿಯ ಪ್ರವಾಸಿ ತಾಣ. ಈ ತಾಣಕ್ಕೆ ಹಾನಿಯಾಗಿದೆ ಎಂಬ ಮಾಹಿತಿ ಹೊರ ಬಿದ್ದರೆ ಅದು ತಪ್ಪಾಗುತ್ತದೆ. ಹೀಗಾಗಿ, ರಾಷ್ಟ್ರದ ಅತಿ ದೊಡ್ಡ ಪ್ರವಾಸಿ ತಾಣವಾದ ತಾಜ್ ಮಹಲ್‌ನ ಅಭಿವೃದ್ದಿಗೆ ಹಾಗೂ ಹಾನಿ ಸರಿಪಡಿಸುವ ಕೆಲಸಕ್ಕೆ ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ.

ಆದರೆ, ಭಾರತೀಯ ಪುರಾತತ್ವ ಇಲಾಖೆ ಮಾತ್ರ ಗಂಭೀರ ಪ್ರಮಾಣದ ಯಾವುದೇ ಹಾನಿ ಸಂಭವಿಸಿಲ್ಲ ಎಂದು ಹೇಳುತ್ತಿದೆ. ಯುನೆಸ್ಕೋದ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಇರುವ ತಾಜ್ ಮಹಲ್‌ಗೆ ಸುರಕ್ಷತೆ ಬೇಕಿದೆ. ಬೇಜವಾಬ್ದಾರಿತನ, ಭ್ರಷ್ಟಾಚಾರ ಹಾಗೂ ದುರಾಡಳಿತದಿಂದಾಗಿ ತಾಜ್ ಮಹಲ್‌ಗೆ ಬಳಕೆ ಆಗಬೇಕಿದ್ದ ಅನುದಾನ ದುರ್ಬಳಕೆ ಆಗುತ್ತಿದೆ ಎಂದು ಕೆಲವರು ಆಪಾದಿಸಿದ್ದಾರೆ. ಆದರೆ, ಭಾರತೀಯ ಪುರಾತತ್ವ ಇಲಾಖೆ ಮಾತ್ರ ತಾಜ್‌ ಮಹಲ್‌ಗೆ ನೀಡಲಾಗುವ ಅನುದಾನದ ಕುರಿತಾಗಿ ಕಾಲ ಕಾಲಕ್ಕೆ ಲೆಕ್ಕ ಪತ್ರ ಪರಿಶೀಲನೆ ನಡೆಯುತ್ತಿದೆ ಎಂದೇ ಸ್ಪಷ್ಟನೆ ನೀಡಿದೆ.

ಈ ಕುರಿತು ಮಾಹಿತಿ ನೀಡಿರುವ ಪುರಾತತ್ವ ತಜ್ಞ ರಾಜಕುಮಾರ್ ಪಟೇಲ್, ತಾಜ್ ಮಹಲ್ ರಕ್ಷಣೆಗೆ ಆಗಾಗ ಕಾಮಗಾರಿ ನಡೆಯುತ್ತಿದೆ. ಅಲ್ಲಲ್ಲಿ ರಿಪೇರಿ ಹಾಗೂ ತೇಪೆ ಕೆಲಸವನ್ನೂ ಮಾಡುತ್ತಿದ್ದೇವೆ. ಇದಕ್ಕಾಗಿ ನಾವು ವೈಜ್ಞಾನಿಕ ಮಾರ್ಗಸೂಚಿಯ ಅನ್ವಯವೇ ಕೆಲಸ ಮಾಡುತ್ತಿದ್ದೇವೆ. ಸ್ಮಾರಕದ ರಕ್ಷಣೆಯೇ ನಮ್ಮ ಗುರಿ ಎಂದು ಮಾಹಿತಿ ನೀಡಿದ್ದಾರೆ.

Leave a Reply

Your email address will not be published. Required fields are marked *